ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಸಖರಾಯಪಟ್ಟಣ   ಪೊಲೀಸ್ ಠಾಣೆ.

ದಿನಾಂಕ 01/07/2021 ರಂದು ನಾಗೇನಹಳ್ಳಿ ಗ್ರಾಮದ ವಾಸಿ ಗೋವಿಂದಪ್ಪರವರ ಜಮೀನಿನ ಬಳಿ ಯಾರೋ ಒಬ್ಬ ಆಸಾಮಿಯು  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು ಇ.ಆರ್.ಎಸ್.ಎಸ್ ಸಿಬ್ಬಂದಿಯ ಕಡೆಯಿಂದ ಮಾಹಿತಿ ಬಂದ ಮೇರೆಗೆ   ದಾಳಿ ನಡೆಸಿದ್ದು ಗೋವಿಂದಪ್ಪರವರ ಜಮೀನಿನ ಬಳಿ ಯಾರೋ ಒಬ್ಬ ಆಸಾಮಿಯು  ಪ್ಲಾಸ್ಟಿಕ್ ಕವರ್ ನ್ನು ಹಿಡಿದುಕೊಂಡು ನಿಂತಿದ್ದು ಸಿಬ್ಬಂದಿಗಳು ಆತನನ್ನು ಹಿಡಿದುಕೊಂಡಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಗೋವಿಂದಪ್ಪ ಬಿನ್ ದಾಸಪ್ಪ, ನಾಗೇನಹಳ್ಳೀ ಗ್ರಾಮ ವಾಸಿ ಎಂದು ತಿಳಿಸಿದ್ದು , ಆತನ ಬಳಿಯಿದ್ದ ಪ್ಲಾಸ್ಟಿಕ್ ಕವರ್ನ್ನು  ಪರಿಶೀಲಿಸಲಾಗಿ 90 ಎಂ.ಎಲ್.ನ  ರಾಜಾವಿಸ್ಕಿಯ  28 ಮದ್ಯದ ಟೆಟ್ರಾಪೌಚ್ಗಳಿದ್ದು, ಮದ್ಯದ ಅಂದಾಜು ಬೆಲೆ 983/- ರೂ ಆಗಿದ್ದು, ಆರೋಪಿತನಾದ ಗೋವಿಂದಪ್ಪನ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಎ.ಎಸ್.ಐ .ಪುಟ್ಟಸ್ವಾಮಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಜೂಜಾಟ  ಪ್ರಕರಣ

ಬಸವನಹಳ್ಳಿ  ಪೊಲೀಸ್ ಠಾಣೆ

ದಿನಾಂಕ 29/06/2021 ರಂದು ಚಿಕ್ಕಮಗಳೂರು ನಗರದ ಕಾಳಿದಾಸನಗರದಿಂದ ಕುಪ್ಪೇನಹಳ್ಳಿ ಗ್ರಾ,ಮದ ಕಡೆಗೆ ಹೋಗುವ ಬಸವನಹಳ್ಳಿ ಕೆರೆ ಏರಿಯಾ ಬಳಿ ಇರುವ ಹೊನ್ನೇಗೌಡರ ಜಮೀನಿನ ಹತ್ತಿರ ಕೆಲವು ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಕಾಳಿದಾಸನಗರದಿಂದ ಕುಪ್ಪೇನಹಳ್ಳಿ ಗ್ರಾ,ಮದ ಕಡೆಗೆ ಹೋಗುವ ಬಸವನಹಳ್ಳಿ ಕೆರೆ ಏರಿಯಾ ಬಳಿ ಇರುವ ಹೊನ್ನೇಗೌಡರ ಜಮೀನಿನ ಹತ್ತಿರ 7 ಜನರು ಕುಳಿತುಕೊಂಡು ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 1) ಹೊನ್ನೇಗೌಡ 2) ಬಾಷಾ 3) ಪಳನಿ 4) ಗುರುಮೂರ್ತಿ 5) ಮನೋಜ್ 6) ಮಣಿ 7) ಪುಟ್ಟರಾಜ್ ಒಟ್ಟು  7  ಜನರನ್ನು ವಶಕ್ಕೆ  ಪಡೆದಿದ್ದು  ಆರೋಪಿತರುಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, ಹಾಗೂ 1,800/-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಬಸವನಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಅಕ್ತರ್ಪಟೇಲ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬೀರೂರು ಪೊಲೀಸ್ ಠಾಣೆ .

ದಿನಾಂಕ 30.06.2021 ರಂದು ರಾಜೇಶ ಬಿನ್ ಲೇಟ್ ಗಂಗಾಧರಪ್ಪ, ದೊಡ್ಡಬೋಕಿಕೆರೆ ಗ್ರಾಮ ವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ನಾನು ಈಗ್ಗೆ 4 ವರ್ಷಗಳ ಹಿಂದೆ ಮೊಣಕತ್ತೂರು ವಾಸಿ ಮಂಜುನಾಥರವರ ಮಗಳಾದ ಶಮಂತಕಮಣಿಯವರೊಂದಿಗೆ ವಿವಾಹವಾಗಿದ್ದು , 3 ವರ್ಷದ ಗಂಡು ಮಗನಿರುತ್ತಾನೆ. ಈ ದಿವಸ ಅಂದರೆ ದಿನಾಂಕ 30-06-2021 ರಂದು ಬೆಳಿಗ್ಗೆ ತೋಟದ ಕೆಲಸಕ್ಕೆ ಹೋಗಿದ್ದು , ಮನೆಯಲ್ಲಿ ನನ್ನ ಹೆಂಡತಿ ಹಾಗೂ ತಾಯಿ ಶಾರದಮ್ಮ ಇದ್ದರು. ನಾನು ಕೆಲಸ ಮುಗಿಸಿ ವಾಪಾಸ್ ರಾತ್ರಿ 8-30 ಗಂಟೆಗೆ ಮನೆಗೆ ಬಂದಾಗ  ನನ್ನ ಹೆಂಡತಿ ಶಮಂತಕಮಣಿ ಮನೆಯಲ್ಲಿ ಇರಲಿಲ್ಲ. ಎಲ್ಲಿ ಹೋಗಿದ್ದಾಳೆಂದು ನನ್ನ ತಾಯಿಯ ಬಳಿ ವಿಚಾರಿಸಲಾಗಿ ಬೆಳಿಗ್ಗೆ ನೀನು ಕೆಲಸಕ್ಕೆ ಹೋದ ಕೂಡಲೇ ನಾನು ಸಹ ತೋಟಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿರುತ್ತಾಳೆಂದು ತಿಳಿಸಿದ್ದು ಆಕೆಯು ತೋಟದ ಕೆಲಸಕ್ಕೆ ಬಂದಿರುವುದಿಲ್ಲ. ಅಕ್ಕಪಕ್ಕದ ಮನೆಯವರಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ . ಆದ್ದರಿಂದ ಕಾಣೆಯಾಗಿರುವ  ನನ್ನ ಹೆಂಡತಿಯನ್ನು  ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಬೀರೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಖರಾಯಪಟ್ಟಣ  ಪೊಲೀಸ್ ಠಾಣೆ .

ದಿನಾಂಕ01.07.2021 ರಂದು ಅನುಸೂಯ ಕೋಂ ಅಣ್ಣಯ್ಯ, ಹುಲಿಕೆರೆ ವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ನನಗೆ 02 ಜನ ಮಕ್ಕಳಿದ್ದು ಮೊದಲನೇ ಮಗಳು ಪ್ರಿಯಾಂಕ, 20 ವರ್ಷ ಇವಳು ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದಳು. ದಿನಾಂಕ 30-06-2021 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ಪ್ರಿಯಾಂಕ ಒಬ್ಬಳೆ ಇದ್ದಳು. ಮದ್ಯಾಹ್ನ  ನನ್ನ ಮಗ ಪ್ರವೀಣ್ ಕುಮಾರ್ ಮನೆಗೆ ಬಂದಿದ್ದು ಪ್ರಿಯಾಂಕ ಮನೆಯಲ್ಲಿ ಇರಲಿಲ್ಲ. ತಕ್ಷಣವೇ ನನ್ನ ಮಗ ಈ ವಿಚಾರವನ್ನು ನನಗೆ ಪೋನ್ ಮಾಡಿ ತಿಳಿಸಿದ್ದು ನಾನು ಕೂಡಲೇ ಮನೆಗೆ ಬಂದು ನೋಡಲಾಗಿ ನನ್ನ ಮಗಳು ಪ್ರಿಯಾಂಕ ಮನೆಯಲ್ಲಿ ಇರಲಿಲ್ಲ.  ಅಕ್ಕಪಕ್ಕದ ಮನೆಯವರಲ್ಲಿ , ಆಕೆಯ ಸ್ನೇಹಿತರ ಬಳಿ ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ . ಆದ್ದರಿಂದ ಕಾಣೆಯಾಗಿರುವ  ಪ್ರಿಯಾಂಕಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಕೊಲೆ ಪ್ರಕರಣ  .

ಮಹಿಳಾ  ಪೊಲೀಸ್ ಠಾಣೆ .

ದಿನಾಂಕ 30-06-2021 ರಂದು ಸಯ್ಯದ್ಹಬೀಬ್ ಬಿನ್ ಲೇಟ್ ಸೈಯದ್ ಫೀರ್ ಸಾಬ್ , ಮಸೀದಿ ಹತ್ತಿರ , ಚಿಕ್ಕಮಗಳೂರು ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಮಗಳಾದ ಸಿಮ್ರಾನ್ ಬಾನುರವರನ್ನು ಪೆನ್ಷನ್ ಮೊಹಲ್ಲಾ ವಾಸಿಯಾದ ಪೈರೋಜ್ ಎಂಬುವವರೊಂದಿಗೆ 3 ತಿಂಗಳ ಹಿಂದೆಯಷ್ಟೇ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಒಂದು ತಿಂಗಳು ಚೆನ್ನಾಗಿಯೇ ನೋಡಿಕೊಂಡಿದ್ದು ನಂತರದ ದಿನಗಳಲ್ಲಿ ನನ್ನ ಮಗಳ ಗಂಡ ಪೈರೋಜ್ , ಪೈರೋಜ್ ನ ತಂಗಿ ಸಲ್ಮಾ, ಮಾವ ಕ್ಯಾಂಟೀನಬಾಬು ಹಾಗೂ ಅತ್ತೆಬಾನುರವರು ಸೇರಿಕೊಂಡು ನನ್ನ ಮಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಬಗ್ಗೆ ನನ್ನಮಗಳು ನಮ್ಮ ಬಳಿ ಹಲವಾರು ಬಾರಿ ಹೇಳಿಕೊಂಡಿದ್ದು ನಾವುಗಳು ಆಕೆಗೆ ಸಮಾಧಾನಪಡಿಸಿ ಹೊಂದಿಕೊಂಡು ಬಾಳುವೆ ಮಾಡಿಕೊಂಡು ಹೋಗುವಂತೆ ಹೇಳಿದ್ದೆವು. ದಿನಾಂಕ 28-06-2021 ರಂದು ನನ್ನ ಮಗಳನ್ನು ಪೈರೋಜ್ ನಮ್ಮ ಮನೆಗೆ ಬಿಟ್ಟುಹೋಗಿದ್ದು , ದಿನಾಂಕ 29-06-2021 ರಂದು ಪೈರೋಜ್ ಪೋನ್ ಮಾಡಿದ್ದರಿಂದ ನನ್ನ ಮಗಳಾದ ಸಿಮ್ರಾನ್ ಬಾನುರವರನ್ನು ಸಂಜೆ ಪೈರೋಜ್ ಮನೆಗೆ ಬಿಟ್ಟುಬಂದಿದ್ದು ನನ್ನ ಮಗಳು ಪೈರೋಜ್ ಮಾವ,ಅತ್ತೆ ಹಾಗೂ ನಾದಿನಿರವರು ಸೇರಿಕೊಂಡು ನನಗೆ  ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಾ ಎಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ಹಾಗೂ  ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬರದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಅಳುತ್ತಾ ಹೇಳಿಕೊಂಡು ಗಂಡನ ಮನೆಗೆ ಹೋದಳು. ನನ್ನ ಮಗಳ ಅತ್ತೆ ಬಾನುರವರು ಪೋನ್ ಮಾಡಿ ನಿಮ್ಮ ಮಗಳು ಮನೆಯಲ್ಲಿ ಕಾಣುತ್ತಿಲ್ಲ ನಿಮ್ಮ ಮನೆಗೆ ಬಂದಿದ್ದಾಳ ಎಂದು ಕೇಳಿದ್ದು ಕೂಡಲೇ ಗಾಬರಿಯಿಂದ ನಾವು ಅವರ ಮನೆಗೆ ಹೋಗಿದ್ದು ನಮ್ಮ ಮಗಳನ್ನು  ಹುಡುಕಾಡಲಾಗಿ ನೀರಿನ ತೊಟ್ಟಿಯಲ್ಲಿ ಹೆಣವಾಗಿ ಬಿದ್ದಿದ್ದು , ನನ್ನ ಮಗಳನ್ನು ಪೈರೋಜ್ , ಸಲ್ಮಾ , ಬಾನು ಹಾಗೂ ಕ್ಯಾಂಟೀನ್ ಬಾಬು ರವರು ಸೇರಿಕೊಂಡು ಕೊಲೆ ಮಾಡಿರುತ್ತಾರೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಆರೋಪಿಗಳ ವಿರುದ್ದ   ಮಹಿಳಾ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಸೈಬರ್ ಪ್ರಕರಣ

ಸಿ.ಇ.ಎನ್ ಪೊಲೀಸ್ ಠಾಣೆ

ದಿನಾಂಕ 01-07-2021 ರಂದು ಶ್ರೀನಿವಾಸರಾವ್ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ30-06-2021 ರಂದು ನನ್ನ ಮೊಬೈಲ್ ನಂಬರ್ 9449317997 ಗೆ 7449663438 ಮೊಬೈಲ್ ನಿಂದ   ಕರೆ ಮಾಡಿ ನಾನು ಕೆನರಾ ಬ್ಯಾಂಕ್ ಮ್ಯಾನೇಜರ್ ಮಾತನಾಡುತ್ತಿರುವುದಾಗಿ ಹೇಳಿಕೊಂಡು ಕೆನರಾಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಮರ್ಜ್ ಆಗುತ್ತಿರುವುದರಿಂದ ಕೆವೈಸಿಯನ್ನು ಅಪ್ಡೇಟ್ ಮಾಡುತ್ತಿರುವುದಾಗಿ ಬ್ಯಾಂಕ್ ಗೆ ಸಂಪೂರ್ಣ ಮಾಹಿತಿ ಬೇಕೆಂದು ಕೇಳಿದ್ದು ನಾನು ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್ ನಂಬರ್, ಸಿವಿವಿ ನಂಬರ್ ಮತ್ತು ಮೊಬೈಲ್ ಗೆ ಬಂದಂತಹ ಒಟಿಪಿ ನಂಬರ್ ಹೇಳಿದ್ದರಿಂದ ನನ್ನ ಕೆನರಾ ಬ್ಯಾಂಕ್ ಅಕೌಂಟ್ ನಂಬರ್ ನಿಂದ 2 ಬಾರಿ ಒಟ್ಟು 96870 /-ರೂ ಡ್ರಾ ಆಗಿರುತ್ತೆ. ನಂತರ ದಿನಾಂಕ 01-07-2021 ರಂದು ಪುನಃ 7449663438 ಮೊಬೈಲ್ ನಿಂದ   ಕರೆ ಮಾಡಿ ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿ ಕರೆ ಮಾಡಿದ್ದರಿಂದ ಕೂಡಲೇ ನಾನು ಬ್ಯಾಂಕ್ ಗೆ ಹೋಗಿ ನನ್ನ ಎಟಿಎಂ ಕಾರ್ಡ್ ನ್ನು ಬ್ಲಾಕ್ ಮಾಡಿಸಿರುತ್ತೇನೆ. ಈ ರೀತಿಯಾಗಿ ನಂಬಿಸಿ ಮೋಸದಿಂದ ನನ್ನ ಬ್ಯಾಂಕ್ ಖಾತೆಯಿಂದ ಒಟ್ಟು 96870/-ರೂ ಡ್ರಾ ಮಾಡಿ ಮೋಸ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ  ದೂರನ್ನು ಸ್ವೀಕರಿಸಿಕೊಂಡು ಸಿ.ಇ.ಎನ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 01-07-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080