ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಕಳಸ ಪೊಲೀಸ್ ಠಾಣೆ

ದಿನಾಂಕ 01/08/2021 ರಂದು ಮೂಡಿಗೆರೆ ತಾಲ್ಲೋಕು ಮರಸಣಿಗೆ ಗಾಳಿಗಂಡಿ ಗ್ರಾಮದಲ್ಲಿ ಕಿಶೋರ್ ಬಿನ್ ಜಾನ್ ಎಂಬುವರು ತಮ್ಮ ಅಂಗಡಿ ಮುಂಭಾಗದಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಢುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆರೋಫಿತ ಅಕ್ರಮವಾಗಿ ಹೊಂದಿದ್ದ 13 ಪ್ಯಾಕ್ 180 ಎಂ.ಎಲ್ ನ ಜಾನ್ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ  ಮತ್ತು  4 ಪ್ಯಾಕ್ 90 ಎಂ.ಎಲ್ ನ ಜಾನ್ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಮದ್ಯವನ್ನು ವಶಕ್ಕೆ ಪಡೆದಿದ್ದು ಮದ್ಯದ ಅಂದಾಜು ಬೆಲೆ 1054/ - ರೂ ಆಗಿರುತ್ತೆ, ಆರೋಪಿ ವಿರುದ್ದ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಹರ್ಷವರ್ಧನ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ

ದಿನಾಂಕ 30/07/2021 ರಂದು ಗೋಣಿಬೀಡು ಪೊಲೀಸ್ ಠಾಣಾ ಸರಹದ್ದಿನ  ದೇವರಮಕ್ಕಿ  ವಾಸಿಯಾದ ಪ್ರಕಾಶ್ ಕೆ.ಆರ್. ಬಿನ್ ರವಿರಾಜ್, 45  ವರ್ಷ  ಇವರು 10-00 ಗಂಟೆ ಸಮಯದಲ್ಲಿ ಕಳಸಕ್ಕೆ ಯಾವುದೋ ಕೆಲಸದ ನಿಮಿತ್ತಾ ಹೋಗಿ ಬರುವುದಾಗಿ ಹೇಳಿ ಹೋಗಿದ್ದವರು ನಂತರ ಮನೆಗೆ ವಾಪಾಸ್ಸು ಬಾರದೇ ಇದ್ದು, ನಂತರ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲವೆಂದು. ದಿನಾಂಕ 31/07/2021 ರಂದು ಸಂಜೆ ಪ್ರಕಾಶ್ ರವರ ಪತ್ನಿ ಶ್ರೀಮತಿ ಭಾರತಿ ರವರು ಕಾಣೆಯಾಗಿರುವ ತಮ್ಮ ಪತಿಯನ್ನು ಹುಡುಕಿಕೊಡುವಂತೆ ನೀಡಿದ ದೂರಿನ ಮೇರೆಗೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 01-08-2021 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080