ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ .

ಕಳಸ ಪೊಲೀಸ್ ಠಾಣೆ.

 ದಿನಾಂಕ 31-01-2022 ರಂದು ಕಳಸ ಠಾಣಾ ಸರಹದ್ದಿನ ಕೊಟೆಹೊಳೆ ಮಾವಿನಕೆರೆ ವಾಸಿ ಪಿರ್ಯಾಧಿ ವಜೀರ್ ಅಹಮ್ಮದ್  ರವರು ನೀಡಿದ ದೂರಿನಲ್ಲಿ ದಿನಾಂಕ:31-01-2022 ರಂದು ಪಿರ್ಯಾದಿ ಮಗ ಮೊಹಿದೀನ್ ಜೊತೆ ಅಯಿಷಾ ಮತ್ತು ನಫಿಜಾ ರವರು ಪ್ರಕಾಶ್ ಪ್ರಭು ರವರ ಮನೆಯ ಹತ್ತಿರ  ಬರುತ್ತಿರುವಾಗ ಕೆಎ-18 ಝಡ್-4572 ರ ಕಾರು ಚಾಲಕ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ಅಯಿಷಾ ಮತ್ತು ನಫಿಜಾ ರವರಿಗೆ ಅಪಘಾತಪಡಿಸಿದ್ದು ಚಿಕಿತ್ಸೆಗೆ ಕಳಸ ಅಸ್ಪತ್ರೆಗೆ ತಂದಾಗ ವೈದ್ಯರು ನಫಿಜಾ ರವರನ್ನು ಪರಿಕ್ಷಿಸಿ ಮೃತಪಟ್ಟಿರುವುದಾಗಿ  ತಿಳಿಸಿದ್ದು, ಅಪಘಾತಕ್ಕೆ ಕಾರಣನಾದ ಕೆಎ-18-ಝಡ್-4572 ರ ಕಾರು ಚಾಲಕ ನವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೆರೆಗೆ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

 ದಿನಾಂಕ 31-01-2022 ರಂದು ಅಜ್ಜಂಫುರ ಠಾಣಾ ಸರಹದ್ದಿನ ಗಿಜ್ಜೆಕಟ್ಟೆ ವಾಸಿ ಪಿರ್ಯಾಧಿ ಪರಶಿವಪ್ಪ ಬಿನ್ ರಾಮಪ್ಪ  ರವರು ನೀಡಿದ ದೂರಿನಲ್ಲಿ ದಿನಾಂಕ:31-01-2022 ರಂದು 19.30 ಗಂಟೆಯ ಸಮಯದಲ್ಲಿ ಪಿರ್ಯಾದಿ ಹೆಂಡತಿ ಲಲಿತಮ್ಮ ನವರು ಮನೆಯಿಂದ ಹಾಲು ತರುತ್ತೇನೆಂಸು ಹೇಳಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಗಿಜೆಕಟ್ಟೆ ಕಡೆಯಿಂದ ತೆಂಗಿನ ಕಾಯಿಗಳನ್ನು ತುಂಬಿಸಿಕೊಂಡು ರಾಮಗಿರಿ ಕಡೆಗೆ ಹೋಗಲು ಕೆಎ-16-ಡಿ-9783 ಲಾರಿಯ ಚಾಲಕ  ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ಪಿರ್ಯಾಧಿಯ ಹೆಂಡತಿಯವರಿಗೆ ಅಪಘಾತಪಡಿಸಿದ್ದು ಲಲಿತಮ್ಮರವರಿಗೆ ತೀವ್ರಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುವುದಾಗಿ  ತಿಳಿಸಿದ್ದು, ಅಪಘಾತಕ್ಕೆ ಕಾರಣನಾದ ಕೆಎ-16-ಡಿ-9783 ರ ಲಾರಿ ಚಾಲಕ ಸಂತೋಷನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೆರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಸಿ.ಇ.ಎನ್.  ಪೊಲೀಸ್ ಠಾಣೆ.

ದಿನಾಂಕ:31-01-2022 ರಂದು ಕಡೂರು ಠಾಣಾ ಸರಹದ್ದಿನ ಎಂ.ಕೋಡಿಹಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕ ಸರ್ಕಾರಿ ಗೋಮಾಳದಲ್ಲಿ  ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 1] ಶಿವಕುಮಾರ್ ಬಿ.ಎಂ. 2] ಪವನ್ ಕುಮಾರ್  3] ಸೋಮಶೇಖರ್ 4] ಕುಮಾರ 5] ಪ್ರಕಾಶ ಬಿ.ವಿ. 6] ಮುದಿಯಪ್ಪ 7]  ರಾಜು ಕೆ.ಆರ್. 8] ರವಿ   ರವರನ್ನು ವಶಕ್ಕೆ ಪಡೆದು ಅರೋಪಿತರುಗಳು ಅಕ್ರಮ ಇಸ್ಪೀಟ್ ಜೂಜಾಟ ಆಡಲು ಉಪಯೋಗಿಸಿದ 19,350 ರೂ ನಗದು ಹಣ,  52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಟಾರ್ಪಲ್ ಮತ್ತು 4 ಬೈಕ್ ಗಳನ್ನು  ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತರ ವಿರುದ್ದ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಸಿ.ಇ.ಎನ್. ಮುತ್ತುರಾಜ್ ಹೆಚ್.  ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 01-02-2022 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080