ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ:31/03/2022 ರಂದು ಪಿರ್ಯಾದಿ ಪ್ರಶಾಂತ ಡಿ'ಸೋಜ ಬಿನ್ ಅಂತೋಣಿ ಡಿ'ಸೋಜ ವಾಸ ನಾರ್ವೆ, ನರಸೀಪುರ ಗ್ರಾಮ, ಕೊಪ್ಪ ತಾಲ್ಲೋಕು ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಹೆಂಡತಿ ಶೃತಿ ಎಸ್. ಇವಳು ದಿನಾಂಕ 30-03-2022 ರಂದು ರಾತ್ರಿ ಮನೆಯಲ್ಲಿ ಪಿರ್ಯಾದಿಯೊಂದಿಗೆ ಇದ್ದವಳು ಮದ್ಯ ರಾತ್ರಿ ನೋಡಲಾಗಿ ಹೆಂಡತಿ ಮನೆಯಲ್ಲಿ ಇರಲಿಲ್ಲ, ಈ ವರೆಗೂ ಎಲ್ಲಾ ಕಡೆಯಲ್ಲಿಯೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಶೃತಿ ಎಸ್,  23 ವರ್ಷ, 5.0 ಅಡಿ ಎತ್ತರ, ಗೋದಿ ಮೈ ಬಣ್ಣ, ನೀಲಿ ಬಣ್ಣದ ಮೀಡಿ ಧರಿಸಿದ್ದು ಕನ್ನಡ , ತುಳು ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ

ದಿನಾಂಕ:31/03/2022 ರಂದು ಅಲ್ದೂರು ಠಾಣಾ ಸರಹದ್ದಿನ ಅಣೂರು ಕೂಡವಳ್ಳಿ ಗ್ರಾಮ ವಾಸಿ ಕೆ.ಪಿ. ರಾಘವೇಂದ್ರ ಬಿನ್ ಕೆ.ಪಿ. ಪುಟ್ಟಸ್ವಾಮಿಗೌಡ ಇವರು ನೀಡಿದ ದೂರಿನಲ್ಲಿ ದಿನಾಂಕ:29/03/2022 ರಂದು ತನ್ನ ವಾಸದ ಮನೆಯನ್ನು ಬೀಗ ಹಾಕಿಕೊಂಡು ಚಿಕ್ಕಮಗಳೂರಿಗೆ ಬಂದಿದ್ದು  ರಾತ್ರಿ ಹೋಗಿ ನೋಡಲಾಗಿ ಯಾರೋ ಕಳ್ಳರು  ಮನೆಯ ಮೂರು ಬೆಡ್ ರೂಂ ಗಳಲ್ಲಿದ್ದ ಗಾಡ್ರೇಜ್ ಬೀರುಗಳನ್ನು ಅರೆ, ಸಬ್ಬಲ್, ಕೊಡಲಿಯಿಂದ ಒಡೆದು ಹಾಕಿ 25 ಗ್ರಾಂ ಚಿನ್ನದ ಒಂದು ಜೊತೆ ಬಳೆ ಅಂದಾಜು ಬೆಲೆ 1,00,000 ರೂ, ಒಂದು ವಾಚ್ 25,000/-, ಒಂದು ಜೊತೆ ಬೆಳ್ಳಿಯ ಕಾಲು ಚೈನ್, ಒಂದು ಬೆಳ್ಳಿಯ ನಕ್ಲಸ್ 15,000/- ರೂ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಸ್ವತ್ತುಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ

ದಿನಾಂಕ:01/04/2022 ರಂದು ಅಜ್ಜಂಫುರ ಠಾಣಾ ಸರಹದ್ದಿನ ಮಾಕನಹಳ್ಳಿ ಗ್ರಾಮದ ವಾಸಿ ಶಿವಪ್ರಸಾದ್ ಇವರು ನೀಡಿದ ದೂರಿನಲ್ಲಿ ದಿನಾಂಕ:30/03/2022 ರಂದು ತನ್ನ ತೋಟದ ವಾಸದ ಮನೆಯನ್ನು ಬೀಗ ಹಾಕಿಕೊಂಡು ಬಂದಿದ್ದು ದಿನಾಂಕ 31/03/2022 ಸಂಜೆ ಹೋಗಿ ನೋಡಲಾಗಿ ಯಾರೋ ಕಳ್ಳರು  ಮನೆಯ ಬಾಗಿಲು ಹೊಡೆದು ಮನೆಯಲ್ಲಿದ್ದ ವ್ಯಾಟ್ ಸ್ಪೀಕರ್, ಮೌತ್ ಪೀಸ್ ,ಟಿ.ವಿ, ಪ್ಲಾಸ್ಟಿಕ್ ಛೇರ್,  ಪ್ಲಾಸ್ಟಿಕ್ ಟೇಬಲ್ ಗಳು, ಹಾಗೂ ಅಡುಗೆ ಸಾಮಾನುಗಳನ್ನು ಒಟ್ಟು 81,000/- ರೂ ಬೆಲೆಯ ಸ್ವತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಸ್ವತ್ತುಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 01-04-2022 07:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080