ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಸೇವನೆ ಪ್ರಕರಣ.

ಬಾಳೆಹೊನ್ನೂರು  ಪೊಲೀಸ್ ಠಾಣೆ.

ದಿನಾಂಕ:01/07/2022 ರಂದು ಪಿ.ಎಸ್.ಐ. ಬಾಳೆಹೊನ್ನೂರು ರವರು ನೀಡಿದ ದೂರಿನಲ್ಲಿ ದಿನಾಂಕ;29/06/2022 ರಂದು  ದೇವದಾನ ಗ್ರಾಮದ ಮಾಗಲ ಬಸ್ ನಿಲ್ದಾಣದ ಬಳಿ  1] ಸ್ಟೀವನ್ ಬಿನ್ ಬೆನಾರ್ಡ್ , 2] ಲೂಕಿ ಮಿರೆಂಡ್ ಬಿನ್ ಲೇಟ್ ಲಿಯೂ ಮಿರೆಂಡ್ ವಾಸ ಗುಡ್ಡೆಕೊಪ್ಪ ಹ್ಯಾರಂಬಿ ಗ್ರಾಮ  ಕೊಪ್ಪ ವಾಸಿಗಳು ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು  ಠಾಣಾ ಪಿ.ಎಸ್.ಐ. ನಿತ್ಯಾನಂದಗೌಡ ಪಿ.ಡಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ;01/07/2022 ರಂದು ಪಿರ್ಯಾದುದಾರರಾದ ಅರುಣ ಕೆ.ಆರ್. ಬಿನ್ ರಾಜಪ್ಪ ವಾಸ ಕಲ್ಲೇಲಿಂಗನಹಳ್ಳಿ ಗ್ರಾಮ ಕಡೂರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;30-06-2022 ರಂದು ಪಿರ್ಯಾದುದಾರರು  ತಂದೆ ಕೆ.ಬಿ.ರಾಜಪ್ಪ ಕೆಎ.-18 ಕ್ಯೂ-5173 ನಂಬರಿನ ಹಿರೋಹೊಂಡಾ ಬೈಕ್ ಅನ್ನು ತೆಗೆದುಕೊಂಡು ಕಲ್ಲೇಲಿಂಗನಹಳ್ಳಿ ಗ್ರಾಮದಿಂದ ಆಲದಹಳ್ಳಿ ಗ್ರಾಮಕ್ಕೆ ಹೋಗಲೆಂದು ಹೋಗುತ್ತಿರುವಾಗ ಗಿರಿತಿಮ್ಲಾಪುರ ಬಳಿ ಯಾವುದೋ ವಾಹನವು ರಾಜಪ್ಪರವರು ಚಾಲನೆ ಮಾಡುತ್ತಿದ್ದ ಬೈಕಿಗೆ   ಡಿಕ್ಕಿ ಹೊಡೆಸಿ ವಾಹನವನ್ನು ನಿಲ್ಲಿಸದೇ ಹೋಗಿದ್ದು, ರಾಜಪ್ಪರವರಿಗೆ ಅಪಘಾತದಿಂದ ಪೆಟ್ಟಾಗಿ ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ;01/07/2022 ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ.  ಅಪಘಾತಪಡಿಸಿದ ವಾಹನ ಹಾಗೂ ಚಾಲಕನ  ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪಂಚನಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಂಚಾರ ಪೊಲೀಸ್ ಠಾಣೆ.

ದಿನಾಂಕ;01/07/2022 ರಂದು ಪಿರ್ಯಾದುದಾರರಾದ ಇವಾನ್ ಡಾಲಮೆಡಾ ವಾಸ ರತ್ನಗಿರಿ ರಸ್ತೆ ಕೆಂಪನಹಳ್ಳಿ ಗ್ರಾಮ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;01/07/2022 ರಂದು ಪಿರ್ಯಾದುದಾರರು ಮಾವ ಆನಂದ್ ರೋಡ್ರಿಗಸ್ ರವರು ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯ ಪೂಜಾ ಟಾಕೀಸ್ ಬಳಿ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿರುವಾಗ ಹಿಂಬದಿಯಿಂದ ಕೆಎ-18-ಇಜಿ-5641 ರ ಸ್ಕೂಟಿ ಚಾಲಕ  ನಿರ್ಲಕ್ಷತ ಹಾಗೂ ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಅನಂದ್ ರೋಡಿಗ್ರಸ್ ರವರಿಗೆ ತಲೆಗೆ ಪೆಟ್ಟು ಬಿದ್ದು ಮೂಗು ಮತ್ತು ಕಿವಿಗಳಲ್ಲಿ ರಕ್ತ ಬಂದು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ವಾಹನದ ಚಾಲಕನ  ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಸಂಚಾರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ 01/072022 ರಂದು ಪಿರ್ಯಾದುದಾರರಾದ ಶ್ರೀಮತಿ ಪುಷ್ಪ ಕೊಂ ಪುಷ್ಪರಾಜ್ ಕುರುಕನಮಟ್ಟಿ ಎಸ್ಟೇಟ್ ತರೀಕೆರೆ  ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ;28/06/2022 ರಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು  ವಾಪಾಸ್ಸು ಮನೆಗೆ ಬಂದು ಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲು ತೆರೆದು ಬೀರು ಮುರಿದು ಬಿರುವಿನಲ್ಲಿದ್ದ  ಸುಮಾರು 50.000/- ರೂ ಬೆಲೆಬಾಳುವ  ಚಿನ್ನದ ಮತ್ತು ಬೆಳ್ಳಿ ವಡವೆಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ವಡವೆಗಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಮನುಷ್ಯ ಕಾಣೆ ಪ್ರಕರಣ

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ;01/07/2022 ರಂದು ಪಿರ್ಯಾದಿ ಕಾರ್ತಿಕ ಕೆ. ಬಿನ್ ಕನ್ನಿಯಪ್ಪ, ವಾಸ ರಾವೂರು, ಲಿಂಗಾಪುರ ಗ್ರಾಮ ನ.ರಾಪುರ  ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ತಂಗಿ  ಕೌಸಲ್ಯ ಇವಳು ದಿನಾಂಕ; 30/06/2022 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ತಂಗಿ ಕೌಸಲ್ಯ, 19 ವರ್ಷ, ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ ಪ್ರಕರಣ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:30-06-2022 ರಂದು 15-00 ಗಂಟೆ ಸಮಯದಲ್ಲಿ  ಚಿಕ್ಕಮಗಳೂರು ನಗರದ ಪವಿತ್ರವನದ ಹತ್ತಿರ ಇರುವ ಸರ್ಕರಿ ಅರಣ್ಯ ಪ್ರದೇಶದ  ಸಾರ್ವಜಿಕ ಸ್ಥಳದಲ್ಲಿ  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಟವಾಡುತ್ತಿದ್ದ 1) ಹೆಚ್.ಎಸ್. ರಘೂ ಬಿನ್ ಸಿದ್ದೇಗೌಡ 2] ತೀರ್ಥಕುಮಾರ್ ಬಿನ್ ಧರ್ಮೇಗೌಡ, 3] ಸಿ.ಎ. ವೆಂಕಟೇಶ ಬಿನ್ ಅನಂದ 4] ದರ್ಶನ ಬಿನ್ ಲೇಟ್ ಅಣ್ಣಯ್ಯ  ಇವರುಗಳನ್ನು ವಶಕ್ಕೆ ಪಡೆದು ಆರೋಪಿತರುಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, 11800/ರೂ ನಗದು ಹಣ ಹಾಗೂ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡು ಆರೋಪಿತರುಗಳ ವಿರುದ್ದ  ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಮುತ್ತುರಾಜು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ದರೋಡೆಗೆ ಪ್ರಯತ್ನ ಪ್ರಕರಣ

ಯಗಟಿ ಪೊಲೀಸ್ ಠಾಣೆ.

ದಿನಾಂಕ;30/06/2022 ರಂದು ರಾತ್ರ್ರಿ ಯಗಟಿ ಠಾಣಾ ಸರಹದ್ದಿನ 9 ನೇ ಕ್ರಾಸ್ ಗೆ  ಹೋಗುವ ಮುಗಳಿಕಟ್ಟೆ ಗೇಟ್ ನಿಂದ ಯಗಟಿ ಕಡೆ ಹಿಂದೆ ರಸ್ತೆಯ ತಿರುವಿನಲ್ಲಿ ದರೋಡೆ ಮಾಡುವ ಉದ್ದೇಶದಿಂದ ಆರೋಫಿತರಾದ 1]ಮಹಮ್ಮದ್ ಅಸೀಪ್ ಬಿನ್ ಎಂ. ಬಾವ 2] ಹುಮ್ಮರ್ ಫಾರೂಕ್ ಬಿನ್ ಅಮ್ಹಬ್ಬ 3] ಅಹಮದ್ ಕಬೀರ್ ಬಿನ್ ಅದಮ್ ಬಾವ4] ಮನ್ಸೂರ್ @ ಮಂಜ ಬಿನ್ ಅದಮ್  5] ಮಹಮದ್ ದಾನೀಸ್ ಬಿನ್ ಮಹಮದ್ ಹಮೀದ್ 6] ಅಹಮದ್ ಸಿನಾನ್ ಬಿನ್ ಅಹಮದ್ ಶರೀಪ್ ಎಲ್ಲರೂ ಬೇಂಗ್ರೆ ವಿಲೇಜ್ ಕುಲೂರು ಮಂಗಳೂರು ಇವರು ರಸ್ತೆ ಬದಿ ಕೈಗಳಲ್ಲಿ ಚಾಕು , ದೊಣ್ಣೆ , ಚೈನು, ಕಬ್ಬಿಣದ ರಾಡು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಲು ಪ್ರಯತ್ನಿಸುತ್ತಿದ್ದು, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು ಸದರಿಯವರು ಅಕ್ರಮವಾಗಿ ಹೊಂದಿದ್ದ ಅಯುಧಗಳನ್ನು ಮತ್ತು 2 ಮೊಬೈಲ್ ಪೋನ್ ಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಯಗಟಿ ಠಾಣೆಯಲ್ಲಿ ಆರೋಫಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಶಿಕುಮಾರ್ ವೈ. ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 01-07-2022 08:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080