ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಪಂಚನಹಳ್ಳಿ   ಪೊಲೀಸ್ ಠಾಣೆ.

ದಿನಾಂಕ 01-10-2021 ರಂದು 13-15 ಗಂಟೆ ಸಮಯದಲ್ಲಿ ಕೆ.ಬಿದರೆ ಗ್ರಾಮದ ಕೆರೆಯಂಗಳ ಹತ್ತಿರದಲ್ಲಿ ಕಡೂರು- ಪಂಚನಹಳ್ಳಿ ರಸ್ತೆಯ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಜಿ.ಎಸ್. ಪ್ರಕಾಶ್ ಬಿನ್ ಶಿವಣ್ಣನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ   90 ಎಂ.ಎಲ್ ನ ರಾಜಾವಿಸ್ಕಿಯ 45  ಮದ್ಯದ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ,ಮದ್ಯದ ಅಂದಾಜು ಬೆಲೆ 1580.85/-ರೂ ಆಗಿರುತ್ತೆ, ಆರೋಪಿಯ ಜೇಬಿನಲ್ಲಿದ್ದ 140 /-ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿ ವಿರುದ್ದ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ.ಕೆ.ಶೋಭಾ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಡೂರು   ಪೊಲೀಸ್ ಠಾಣೆ.

ದಿನಾಂಕ 30-09-2021 ರಂದು ಸಂಜೆ 05-15 ಗಂಟೆ ಸಮಯದಲ್ಲಿ ಚನ್ನೇನಹಳ್ಳಿ ಗ್ರಾಮದ ತಿಮ್ಮಾಬೋವಿ ಎಂಬುವವರು    ಮನೆಯ ಮುಂಭಾಗ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಸದರಿ ಆರೋಪಿಯನ್ನು  ವಶಕ್ಕೆ ಪಡೆದು ಆತನ ಬಳಿಯಿದ್ದ   90 ಎಂ.ಎಲ್ ನ ರಾಜಾವಿಸ್ಕಿಯ 48  ಮದ್ಯದ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ,ಮದ್ಯದ ಅಂದಾಜು ಬೆಲೆ 1680/-  ಆಗಿರುತ್ತೆ, ಆರೋಪಿ ತಿಮ್ಮಾಬೋವಿಯ ವಿರುದ್ದ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ.ರಮ್ಯ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 01-10-2021 ರಂದು ಮಂಜುನಾಥ ಬಿನ್ ರಾಮೇಗೌಡ, ಪಟ್ನಾಬಿದರೆ ಗ್ರಾಮವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ29-09-2021 ರಂದು ಬೆಳಗ್ಗೆ 07-30 ಗಂಟೆ ಸಮಯದಲ್ಲಿ ನನ್ನ ಮಗನಾದ ಪೃಥ್ವಿ. 19 ವರ್ಷ ಈತನು ಬಾಳೆಹೊನ್ನೂರಿನ ಐ.ಟಿ.ಐ .ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಇದುವರೆವಿಗೂ  ವಾಪಾಸ್ ಮನೆಗೆ ಬಂದಿರುವುದಿಲ್ಲ. ನೆಂಟರಿಷ್ಟರ, ಸಂಬಂಧಿಕರ ಮನೆಗಳಲ್ಲಿ ಹಾಗೂ ಸ್ನೇಹಿತರುಗಳ ಬಳಿ ವಿಚಾರಿಸಲಾಗಿ ಎಲ್ಲಿಯೂ ಪ್ತತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಕಡೂರು ಪೊಲೀಸ್ ಠಾಣೆ.

ದಿನಾಂಕ 01-10-2021 ರಂದು ಮಂಜಾನಾಯ್ಕ, ರೂಪಾನಗರ, ಬಾಣಾವರ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ,ದಿನಾಂಕ 30-09-2021 ರಂದು ಸಂಜೆ 05-45 ಗಂಟೆ ಸಮಯದಲ್ಲಿ ನನ್ನ ಮಗನಾದ ಪ್ರತಾಪನಾಯ್ಕನು ತನ್ನ ಬೈಕ್ ಕೆಎ-51 ಇಎನ್- 0542 ನಲ್ಲಿ ಸೂರಾಪುರ ಬಸ್ ಸ್ಟಾಪ್ ತಿರುವಿನಲ್ಲಿ ಬರುತ್ತಿದ್ದು ಬೈಕನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿರುವ ಚಾನಲ್ ನ ಸೇತುವೆಗೆ ಡಿಕ್ಕಿ ಹೊಡೆಸಿದ ಪರಿಣಾಮ , ಬೈಕ್ ಸಮೇತ ಚಾನಲ್ ಒಳಗೆ ಬಿದ್ದು ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ಪೆಟ್ಟಾಗಿದ್ದು ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 01-10-2021 ರಂದು ಬೆಳಗಿನ ಜಾವ 03-30 ಗಂಟೆಗೆ ಮೃತಪಟ್ಟಿದ್ದಾಗಿರುತ್ತೆ, ಮುಂದಿನ ಕಾನೂನು ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಕಡೂರು   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

ಇತ್ತೀಚಿನ ನವೀಕರಣ​ : 01-10-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080