ಅಭಿಪ್ರಾಯ / ಸಲಹೆಗಳು

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ.

ಎನ್. ಆರ್. ಪುರ ಪೊಲೀಸ್ ಠಾಣೆ.

ದಿನಾಂಕ 01-11-2021 ರಂದು ಎನ್.ಆರ್. ಪುರ ಠಾಣಾ ಸರಹದ್ದಿನ ಸಿಂಸೆ ಸರ್ಕಲ್ ಆಟೋ ಸ್ಯಾಂಡ್ ಬಳಿ ಉಮೇಶ ಬಿನ್ ಮಂಜು ಮತ್ತು ಕೃಷ್ಣ ಬಿನ್ ದುರ್ಗಪ್ಪ ಸಿಂಸೆ ಗುಬ್ಬಿಗಾ ಗ್ರಾಮದ ವಾಸಿಗಳು ಅಕ್ರಮವಾಗಿ ಮಟ್ಕಾ ಜೂಜಾಟವನ್ನು ಆಡಿಸುತ್ತಿದ್ದು  ಆವರನ್ನು ವಶಕ್ಕೆ ಪಡೆದು ಆವರ ಬಳಿಯಿದ್ದ 1) ನಂಬರ್ ಬರೆದಿರುವ ಹಾಳೆ 2) ಒಂದು ಪೆನ್ ಹಾಗೂ  3) 975/ ರೂ  ನಗದು ಹಣವನ್ನು  ಅಮಾನತ್ತುಪಡಿಸಿಕೊಂಡು ಬಂದು  ಮಟ್ಕಾ ಆಡಿಸಲು ಸಹಕರಿಸುತ್ತಿದ್ದ ಸುಂಕದಕಟ್ಟೆ ವಾಸಿ ಪದ್ಮನಾಭ ಉಮೇಶ, ಮತ್ತು ಕೃಷ್ಣ ರವರ   ವಿರುದ್ದ  ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ, ದಿಲೀಪ್ ಕುಮಾರ್ ವಿ.ಟಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ ಪ್ರಕರಣ.

ಲಿಂಗದಹಳ್ಳಿ ಪೊಲೀಸ್ ಠಾಣೆ,

ದಿನಾಂಕ:01-11-2021 ರಂದು ಲಿಂಗದಹಳ್ಳಿ ಠಾಣಾ ಸರಹದ್ದಿನ ತಣೀಗೆಬೈಲು ಗ್ರಾಮದ ರವಿ ಬಿ ಬಿನ್ ಲೇಟ್ ದೊಡ್ಡಬೊರಯ್ಯ ತಣೀಗೆಬೈಲು ವಾಸಿ ಈತನು ಬೈಕಿನಲ್ಲಿ ಬಳ್ಳಾವರದಿಂದ ನಂದಿಬಟ್ಟಲು ಕಡೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ಸಾಗಿಸುತ್ತಿದ್ದು  ಬಳ್ಳಾವರ ಗ್ರಾಮದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ 90 ಎಂ.ಎಲ್ ನ 90 ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ ಟೆಟ್ರಾ ಪೌಚ್ ಗಳನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 3373/ - ರೂ  ಆಗಿದ್ದು , ಆರೋಪಿಯ ವಿರುದ್ದ  ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ, ರವಿ ಎನ್. ಎನ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ,

ದಿನಾಂಕ:31-10-2021 ರಂದು ಅಜ್ಜಂಫುರ  ಠಾಣಾ ಸರಹದ್ದಿನ ಸೋಲ್ಲಾಪುರ ಗ್ರಾಮದ ಸಿದ್ದೇಶ ಬಿನ್ ಸಿದ್ದರಾಮಪ್ಪ ಎಂಬುವರು ತಮ್ಮ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ದಾಳಿ ಸಮಯದಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದು  ಆರೋಪಿತನು ಓಡುವಾಗ ಎಸೆದು ಹೋದ ಚೀಲವನ್ನು ಪರಿಶೀಲಿಸಿ ನೋಡಲಾಗಿ  ಚೀಲದಲ್ಲಿ  90 ಎಂ.ಎಲ್ ನ 32 ರಾಜಾ ವಿಸ್ಕಿಯ ಟೆಟ್ರಾ ಪೌಚ್ ಗಳು ಇದ್ದು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದು ಮದ್ಯದ ಅಂದಾಜು ಬೆಲೆ 1124/ - ರೂ  ಆಗಿದ್ದು ಆರೋಪಿಯ ವಿರುದ್ದ  ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ, ತಿಪ್ಪೇಶ್ ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಅಕ್ರಮ ದನದ ಮಾಂಸ ಮಾರಾಟ ಪ್ರಕರಣ.

ಲಿಂಗದಹಳ್ಳಿ ಪೊಲೀಸ್ ಠಾಣೆ,

ದಿನಾಂಕ:31-10-2021 ರಂದು ಲಿಂಗದಹಳ್ಳಿ  ಠಾಣಾ ಸರಹದ್ದಿನ ಪಿಳ್ಳಯ್ಯನ ಕೆರೆ ಬಳಿ ತರೀಕೆರೆ ಕಡೆಯಿಂದ ಸ್ಕೂಟಿಯಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿದ್ದ ಆರೋಪಿ ಮಹಮ್ಮದ್ ರಪೀಕ್ ಬಿನ್ ಕರೀಂ ಸಾಬ್, ಸಹ್ಯಾದ್ರಿಪುರ ವಾಸಿ ಲಿಂಗದಹಳ್ಳಿ ಈತನನ್ನು ವಶಕ್ಕೆ ಪಡೆದು ಆತನು ಅಕ್ರಮವಾಗಿ ಹೊಂದಿದ್ದ 20 ಕೆ.ಜಿ ದನದ ಮಾಂಸವನ್ನು ಮತ್ತು ಸ್ಕೂಟಿಯನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ದ  ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ, ರವಿ ಎನ್.ಎನ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಮನುಷ್ಯ ಕಾಣೆ ಪ್ರಕರಣ.

ಸಖರಾಯಪಟ್ಟಣ  ಪೊಲೀಸ್ ಠಾಣೆ.

ದಿನಾಂಕ 31-10-2021 ರಂದು ವಿರೂಪಾಕ್ಷ ಬಿ.ಎಸ್ ಬಿನ್ ಶಂಕರಶೆಟ್ಟಿ  ಎಸ್.ಬಿದರೆ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಚಿಕ್ಕಪ್ಪ ನಾಗರಾಜು ಇವರ ಮಗಳು ರಮ್ಯಾ ನಮ್ಮ ಮನೆಯಿಂದ  ದಿನಾಂಕ 29-10-2021 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಮನೆಯಲ್ಲಿ ಇದ್ದವಳು ನಂತರ ಎಲ್ಲಿಗೋ ಹೋಗಿದ್ದು ರಮ್ಯಳನ್ನು  ಪರಿಚಯಸ್ಥರ, ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಚಿಕಪ್ಪನ ಮಗಳು ರಮ್ಯಳನ್ನು  ಪತ್ತೆ  ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 01-11-2021 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080