ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ.

ಬಾಳೂರು  ಪೊಲೀಸ್ ಠಾಣೆ.

ದಿನಾಂಕ: 01-12-2021 ರಂದು ಬಾಳೂರು  ಠಾಣಾ ಸರಹದ್ದಿನ  ಬಾಳೂರು ವಾಸಿ ಶ್ರೀಮತಿ ಸುಮ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ತನ್ನ ಗಂಡ ನಾಗೇಶ್ ಆಚಾರ್ ರವರು ಕಾಣೆಯಾಗಿದ್ದು, ದಿನಾಂಕ:30-11-2021 ರಂದು ತನ್ನ ಗಂಡನ ಮೃತ ದೇಹ ಬಿದುರುತಳ ಗ್ರಾಮಕ್ಕೆ ಹೋಗುವ  ಕಾಡು ದಾರಿಯಲ್ಲಿ ರಸ್ತೆಯ ಕೆಳಭಾಗದಲ್ಲಿ ನೋಡಲಾಗಿ ಮೃತದೇಹವನ್ನು ಮಣ್ಣಿನೊಳಗೆ ಹೂತಿಟ್ಟಿದ್ದು ಅದರಲ್ಲಿ  ಕಾಲು ಮತ್ತು ಸ್ವಲ್ಪ ಬಟ್ಟೆ ಹೊರ ಕಾಣುತ್ತಿದ್ದು  ಅದು ಪಿರ್ಯಾದಿಯ ತಂಡ ನಾಗೇಶ್ ಆಚಾರ್ ರವರಂತೆ ಕಾಣುತ್ತಿದ್ದು ಮಣ್ಣಿನಿಂದ ಹೂತ್ತಿಟ್ಟ ತನ್ನ ಗಂಡ ನಾಗೇಶ್ ಆಚಾರ್ ಅವರಿಂದ ಕಾರ್ಪೆಂಟರ್ ಕೆಲಸ ಮಾಡಿಸಿ ಕೊಳ್ಳುತ್ತಿದ್ದ ಬಿ.ಎಂ. ಕೃಷ್ಣೇಗೌಡ ವಾಸ ಬಿದುರುತಳ ರವರೇ  ತನ್ನ ಗಂಡನನ್ನು ಕೊಲೆಮಾಡಿ ಹೂತು ಹಾಕಿದ್ದು, ಯಾವುದೋ ದುರುದ್ದೇಶದಿಂದ ಯಾರದ್ದೋ ಸಹಾಯ ಪಡೆದುಕೊಂಡು ಕೊಲೆ ಮಾಡಿ, ಕೊಲೆಯನ್ನು ಮುಚ್ಚಿ ಹಾಕಲು ಹೂತಿಟ್ಟಿರಬಹುದೆಂದು ನೀಡಿದ ದೂರಿನ ಮೇರೆಗೆ ಅರೋಪಿತನ ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 30-11-2021 ರಂದು ಅಜ್ಜಂಫುರ ಠಾಣಾ ಸರಹದ್ದಿನ ಶಿವನಿ ಆರ್.ಎಸ್. ವಾಸಿ ಪಿರ್ಯಾದಿ ಬಿ.ಎಸ್. ತಮ್ಮಯ್ಯ ಬಿನ್ ಸಿದ್ರಾಮಪ್ಪ ಇವರು ನೀಡಿದ ದೂರಿನಲ್ಲಿ ದಿನಾಂಕ 20-11-2021 ರಂದು ಪಿರ್ಯಾದಿ ತನ್ನ ಬಾಭ್ತು ಕೆಎ-66-ಎಂ-3229 ರ ಬೂಲೆರೋ ವಾಹನದಲ್ಲಿ ಶಿವನಿ ಆರ್.ಎಸ್. ನಿಂದ ಹೊಸದುರ್ಗಕ್ಕೆ ಹೋಗುವಾಗ ಅಂತರಘಟ್ಟೆ ವಿದ್ಯಾನಗರ ಕೆರೆ ಏರಿಯ ಮೇಲೆ ಹೋಗುತ್ತಿರುವಾಗ ಹೊಸದುರ್ಗ ಕಡೆಯಿಂದ ಬಂದ ಕೆಎ-02 ಎಂ.ಪಿ. 1226 ಕಾರಿನ ಚಾಲಕ ಅತೀವೇಗಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆರೆ ಏರಿಯ ಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆಸಿದಾಗ ಕಾರು ತಿರುಗಿ ಪಿರ್ಯಾದಿ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು  ಕಾರಿನಲ್ಲಿ ಇದ್ದ  2 ಜನಕ್ಕೆ ಪೆಟ್ಟಾಗಿದ್ದು, ಅದರಲ್ಲಿ ನಾಗರತ್ನ ಎಂಬುವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಮನುಷ್ಯ ಕಾಣೆ ಪ್ರಕರಣ

 ಲಿಂಗದಹಳ್ಳಿ ಠಾಣೆ.

ದಿನಾಂಕ:01-12-2021 ರಂದು ಪಿರ್ಯಾದಿ ರಘು ಕುಮಾರ್ ಬಿನ್ ಮಲ್ಲೇಶಪ್ಪ ಕೆಂಚೆನಹಳ್ಳಿ ಗುಳ್ಳದಮನೆ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ: 30-11-2021ರಂದು ಪಿರ್ಯಾದಿ ತಂಗಿ ಶೃತಿ  ಮನೆಯಲ್ಲಿದ್ದವಳು  ಸಂಜೆ 4-45 ಗಂಟೆಯಲ್ಲಿ  ಮನೆಯಲ್ಲಿ ಯಾರಿಗೂ ಹೇಳದೇ ಮನೆಯಿಂದ  ಹೋದವಳು ವಾಪಾಸ್ಸು ಬಾರದೇ ಇದ್ದು ಈವರೆಗೂ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ತನ್ನ ತಂಗಿ ಶೃತಿ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ತಂಗಿ ಶೃತಿ , 27 ವರ್ಷ , 4.1/2 ಅಡಿ ಎತ್ತರ, ಸಾದಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ , ಎಡದೇ ಕೈ ತೋಳಿನ ಹತ್ತಿರ ಮಚ್ಚೆ ಗುರುತು ಇರುತ್ತೆ. ಕೆಂಪು ಮತ್ತು ಬಿಳಿ ಮಿಶ್ರೀತ ಚೂಡಿದಾರ ಧರಿಸಿರುತ್ತಾಳೆ ಕಾಣೆಯಾಗಿರುವ ಶೃತಿ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 01-12-2021 08:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080