ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ 01/06/2021 ರಂದು ನಂದೀಪುರ ಗ್ರಾಮದ ಇಂದಿರಾನಗರದ ರಾಮು ಬಿನ್ ರಾಮಯ್ಯ ರವರು ತಮ್ಮ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನನ್ನು  ವಶಕ್ಕೆ ಪಡೆದು ಯಾವುದೇ ಪರವಾನಗಿಯನ್ನು  ಇಲ್ಲದೆ  ಅಕ್ರಮವಾಗಿ ಮಾರಾಟ ಮಾಡುತ್ತಿದ್ದರಿಂದ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 01/06/2021 ರಂದು ಅಜ್ಜಂಪುರ ಠಾಣಾ ಸರಹದ್ದಿನ ವಿನೋಭನಗರದ ಕೊರಚರಬೀದಿ ಶ್ರೀನಿವಾಸ ಎಂಬುವವರು ಮನೆಯ ಹತ್ತಿರ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಸಮವಸ್ರ್ತದಲ್ಲಿದ್ದ ನಮ್ಮಗಳನ್ನು ನೋಡಿ ಆರೋಪಿ ಶ್ರೀನಿವಾಸ ಓಡಿಹೋಗಿದ್ದು, ಬಿಟ್ಟುಹೋಗಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ  90 ಎಂ.ಎಲ್ ನ ರಾಜಾವಿಸ್ಕಿಯ 85 ಟೆಟ್ರಾಪೌಚ್ಗಳಿದ್ದು , ಮದ್ಯದ  ಅಂದಾಜು ಬೆಲೆ 2986-00 ರೂ ಆಗಿರುತ್ತೆ. ಸದರಿ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ.  ತಿಪ್ಪೇಶ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

 

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ಕಡೂರು  ಪೊಲೀಸ್ ಠಾಣೆ.

ದಿನಾಂಕ 02/06/2021 ರಂದು ಪಿರ್ಯಾದುದಾರರಾದ  ಶ್ರೀ.ಸತ್ಯನಾರಾಯಣ , ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು , ಕಡೂರುಟೌನ್ ರವರು ಕೊವಿಡ್ ಸಂಬಂಧ ಕಡೂರು ನಗರದಲ್ಲಿ ಗಸ್ತು ಮಾಡುತ್ತಿರುವಾಗ ಕಡೂರಿನ ಸುಭಾಷ್ ಸರ್ಕಲ್ ಸಮೀಪವಿರುವ ಪಶು ಆಸ್ಪತ್ರೆ ಪಕ್ಕದಲ್ಲಿರುವ ಶ್ರೀ. ಮರುಳಸಿದ್ದೇಶ್ವರ ಶುದ್ದ ಕುಡಿಯುವ ನೀರಿನ ಘಟಕದ ಮಾಲೀಕರು ಶುದ್ದಗಂಗಾ ಘಟಕವನ್ನು ತೆರೆದು ಸುಮಾರು 18-20 ಜನರನ್ನು ಗುಂಪು ಸೇರಿಸಿಕೊಂಡು ಜನರಿಗೆ ಕ್ಯಾನ್ ಗಳಿಗೆ ನೀರು ಹಾಕುತಾ ಕೊವಿಡ್-19 ಸಂಬಂಧ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿರುವ ಶುದ್ದಗಂಗಾ ಘಟಕದ ಮಾಲೀಕರಾದ ಓಂಕಾರ ಬಿನ್ ಮರುಳಯ್ಯ, ಸುಭಾಷ ಗರ ವಾಸಿರವರ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಜಯಪುರ  ಪೊಲೀಸ್ ಠಾಣೆ.

ದಿನಾಂಕ:02/06/2021ರಂದುಪಿರ್ಯಾದುದಾರರಾದಪೃಥ್ವಿ,ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು,ಮೇಗುಂದಾ ಹೋಬಳಿ, ಇವರು ಕೊವಿಡ್ -19 ಸಂಬಂಧ ಜಯಪುರ ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಬೈರೇದೇವರು ಗ್ರಾಮದ ಹಿರೇಹಡ್ಲು ವಾಸಿ ಹೆಚ್.ಎಸ್, ರಂಗನಾಥ ಎಂಬುವವರು ಕೊವಿಡ್ -19 ಪಾಸಿಟಿವ್ ಇದ್ದರೂ ಸಹ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆಂದು ಮಾಹಿತಿ  ಬಂದ ಮೇರೆಗೆ ಹಿರೇಹಡ್ಲುವಿಗೆ  ಹೋಗಿ ನೋಡಲಾಗಿ   ಹೆಚ್.ಎಸ್, ರಂಗನಾಥರವರು  ಕೊವಿಡ್ -19 ಪಾಸಿಟಿವ್  ಇದ್ದರೂ ಸಹ ಜಯಪುರ-ಮೇಗೂರು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದ್ದರಿಂದ  ರಂಗನಾಥರವರ ವಿರುದ್ದ ಜಯಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಗೋಣಿಬೀಡು  ಪೊಲೀಸ್ ಠಾಣೆ.

ದಿನಾಂಕ 01/06/2021 ರಂದು ಗೋಣಿಬೀಡು ಠಾಣಾ ಸರಹದ್ದಿನ ಜಿ.ಹೊಸಳ್ಳಿ ಗ್ರಾಮದಲ್ಲಿ ಹರೀಶ ಎಂಬುವವರು ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ  ಅಕ್ರಮವಾಗಿ ಮದ್ಯವನ್ನು ಮಾರಾಟ  ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಆರೋಪಿಯಾದ  ಹರೀಶರವರು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದು  ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡುತ್ತಿದ್ದು,  ಆತನ ಬಳಿಯಿದ್ದ 90 ಎಂ.ಎಲ್ ನ 96  ವಿಂಡ್ಸರ್ ಡಿಲೆಕ್ಸ್ ವಿಸ್ಕಿ  ಪ್ಯಾಕೆಟ್ ಗಳು, 180 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸಿಯ 21  ಮದ್ಯದ ಪೌಚ್ ಗಳು ಹಾಗೂ 330 ಎಂ.ಎಲ್ ನ ಕಿಂಗ್ ಪಿಷರ್ ಸ್ಟ್ರಾಂಗ್ ಬೀರ್ ನ 20 ಬಾಟಲಿಗಳನ್ನುವಶಕ್ಕೆ ಪಡೆದಿದ್ದು  , ಮದ್ಯದ ಅಂದಾಜು ಬೆಲೆ 11,360/- ರೂ ಆಗಿದ್ದು ,ಮದ್ಯವನ್ನು  ಹಾಗೂ ಆರೋಪಿಯನ್ನು ವಶಕ್ಕೆ ಪಡೆದು  ಆರೋಪಿ ವಿರುದ್ದ ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ಶ್ರೀಮತಿ. ಗಾಯಿತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಗೋಣಿಬೀಡು  ಪೊಲೀಸ್ ಠಾಣೆ.

ದಿನಾಂಕ 01/06/2021 ರಂದು ಗೋಣಿಬೀಡು ಠಾಣಾ ಸರಹದ್ದಿನ ಜಿ.ಹೊಸಳ್ಳಿ ಗ್ರಾಮದಲ್ಲಿ ಪ್ರಕಾಶ್ ಎಂಬುವವರು ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ  ಕಳ್ಳಭಟ್ಟಿ ಮದ್ಯವನ್ನು ಇಟ್ಟುಕೊಂಡು ಮಾರಾಟ  ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಆರೋಪಿಯು ಓಡಿಹೋಗಿದ್ದು ಆತನ ಹೆಸರು ತಿಳಿಯಲಾಗಿ ಪ್ರಕಾಶ್ ಬಿನ್ ಲೇಟ್ ರಾಮೇಗೌಡ, ಜಿ.ಹೊಸಳ್ಳಿ ಗ್ರಾಮ ವಾಸಿಯಾಗಿದ್ದು, ಆತನು ಬಿಟ್ಟುಹೋಗಿದ್ದ 2 ಪ್ಲಾಸ್ಟಿಕ್ ಬಾಟಲಿಗಳನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ 2 ಲೀಟರ್ನಷ್ಟು ಕಳ್ಳಭಟ್ಟಿ ಹಾಗೂ ಇನ್ನೊಂದು ಪ್ಲಾಸ್ಟಿಕ್ ಬಾಟಲಿಯಲ್ಲಿ 2 ಕ್ವಾಟರ್ನಷ್ಟು ಕಳ್ಳಭಟ್ಟಿ ಸಾರಾಯಿ ಇದ್ದು, ಕಳ್ಳಭಟ್ಟಿ ಮದ್ಯದ ಅಂದಾಜು ಬೆಲೆ 360 ರೂ ಆಗಿರುತ್ತೆ. ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು   ಮಾರಾಟ ಮಾಡುತ್ತಿದ್ದ ಆರೋಪಿ  ಪ್ರಕಾಶ್ರವರ ವಿರುದ್ದ ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ಶ್ರೀಮತಿ. ಗಾಯಿತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮರಳು ಕಳ್ಳತನ ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಬಾಳೂರು ಪೊಲೀಸ್ ಠಾಣೆ

ದಿನಾಂಕ 01/06/2021 ರಂದು ಬಾಳೂರು ಠಾಣಾ ಸರಹದ್ದಿನಲ್ಲಿ ಗಸು ಮಾಡುತ್ತಿರುವಾಗ ಬಿಳಗಲಿ ಗ್ರಾಮದ ವಾಸಿಯಾದ ಗೋಪಾಲಗೌಡ ಬಿನ್ ನಾಗಪ್ಪಗೌಡ ರವರು ಹೊಸದಾಗಿ ನಿಮರ್ಾಣ ಮಾಡುತ್ತಿರುವ ಮನೆಯ ಪಕ್ಕದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹ  ಮಾಡಿರುತ್ತಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಬಿಳಗಲಿ ಗ್ರಾಮದ ವಾಸಿಯಾದ ಗೋಪಾಲಗೌಡ ಬಿನ್ ನಾಗಪ್ಪಗೌಡ ರವರು ಹೊಸದಾಗಿ ನಿಮರ್ಾಣ ಮಾಡುತ್ತಿರುವ ಮನೆಯ ಪಕ್ಕದಲ್ಲಿ ಸುಮಾರು 2 ಲೋಡ್ ನಷ್ಟು ಮರಳಿನ ರಾಶಿ ಕಂಡುಬಂದಿದ್ದು ಮರಳಿನ ಅಂದಾಜು ಬೆಲೆ 4000 ರೂ ಆಗಿರುತ್ತೆ. ನಾರಾಯಣಗೌಡರವರನ್ನು ವಿಚಾರ ಮಾಡಲಾಗಿ ನನ್ನ ಸಹೋದರನಾದ ಗೋಪಾಲಗೌಡರವರು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬಿಳಗಲಿ ಗ್ರಾಮದಲ್ಲಿ ಹರಿಯುವ ಚಿಕ್ಕ ಹಳ್ಳದಿಂದ ತೆಗೆದುಕೊಂಡು ಬಂದಿರುತ್ತಾರೆಂದು ತಿಳಿಸಿದ್ದು , ಕೊವಿಡ್-19 ಸಂಬಂದಸರ್ಕಾರವು  ಹೊರಡಿಸಿರುವ ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಿದ್ದಲ್ಲದೆ ಸರ್ಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಕಳ್ಳತನದಿಂದ ಸಂಗ್ರಹಿಸಿಟ್ಟಿರುವುದು  ಕಂಡುಬಂದಿದ್ದರಿಂದ  ಆರೋಪಿ ಗೋಪಾಲಗೌಡರವರ ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ಶ್ರೀಮತಿ.ರೇಣುಕಮ್ಮ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

 

 

 

ಇತ್ತೀಚಿನ ನವೀಕರಣ​ : 25-06-2021 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080