ಅಭಿಪ್ರಾಯ / ಸಲಹೆಗಳು

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ಗೋಣಿಬೀಡು  ಪೊಲೀಸ್ ಠಾಣೆ.

ದಿನಾಂಕ 01/07/2021 ರಂದು ಪಿರ್ಯಾದುದಾರರಾದ  ಹೇಮಂತ್ ರಾಜ್ , ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮೂಡಿಗೆರೆ ತಾಲ್ಲೂಕು ರವರು ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿಗೆ ಕೊವಿಡ್ ಕರ್ತವ್ಯಕ್ಕೆ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದು ಅದರಂತೆ ಕರ್ತವ್ಯ ನಿರ್ವಹಿಸುತ್ತಿರುವಾಗ ಮೂಡಿಗೆರೆ ತಾಲ್ಲೂಕಿನ ಚಕ್ಕುಡಿಗೆ ಗ್ರಾಮದಲ್ಲಿರುವ ಜಪ್ಪದಕಲ್ಲು ರೆಸಾರ್ಟ್ ನಲ್ಲಿ ಮದುವೆ ನಡೆಯುತ್ತಿರುವುದಾಗಿ ಮಾಹಿತಿ ಬಂದಿದ್ದು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಲಾಗಿ ಚಕ್ಕುಡಿಗೆ ಗ್ರಾಮದಲ್ಲಿರುವ ಜಪ್ಪದಕಲ್ಲು ರೆಸಾರ್ಟ್ ನಲ್ಲಿ ಮದುವೆ ನಡೆಯುತ್ತಿದ್ದು ,ಕೊವಿಡ್ ನಿಯಮದ ಪ್ರಕಾರ ಮದುವೆಗೆ 40 ಜನ ಮಾತ್ರ ಪಾಲ್ಗೊಳ್ಳಬೇಕಿದ್ದು   ಆದರೆ ಮದುವೆಯಲ್ಲಿ  80-100 ಜನರು ಪಾಲ್ಗೊಂಡಿದ್ದು , ಕೊವಿಡ್ ನಿಯಮವನ್ನು ಉಲ್ಲಂಘಿಸಿರುತ್ತಾರೆ .ಕೊವಿಡ್-19 ಸಂಬಂಧ ಸರ್ಕಾರವು ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿರುವ ಜಪ್ಪದಕಲ್ಲು ರೆಸಾರ್ಟ್ ಮಾಲೀಕರಾದ ನೇಮಿರಾಜ್ ಬಿನ್ ರಾಮೇಗೌಡ ರವರ ವಿರುದ್ದ ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ .

ನಗರ ಪೊಲೀಸ್ ಠಾಣೆ.

 ದಿನಾಂಕ 02-07-2021 ರಂದು ಪಿರ್ಯಾದುದಾರರಾದ ಆನಂದಸಿಂಗ್ ಬಿನ್ ಕೃಷ್ಣಸಿಂಗ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಾನು ದಿನಾಂಕ 21-06-2021 ರಂದು ಚಿಕ್ಕಮಗಳೂರಿನ ಬಿ.ಎಸ್.ಎನ್.ಎಲ್. ಕಛೇರಿಯಲ್ಲಿ ಜೆ.ಟಿ.ಓ ಆಗಿ ಚಾರ್ಜ್ ತೆಗೆದುಕೊಂಡಿರುತ್ತೇನೆ. ಹೌಸಿಂಗ್ ಬೋರ್ಡ್ ಪಂಚಮುಖಿ ಗಣಪತಿ ದೇವಸ್ಥಾನದ ಬಳಿ ಇರುವ ಬಿ.ಎಸ್.ಎನ್.ಎಲ್ ದೂರವಾಣಿ ಕೇಂದ್ರದಲ್ಲಿ 40 ಕೆ.ವಿ.ಎ ಇಂಜಿನ್ ಅಳವಡಿಸಲಾಗಿದ್ದು ಅದನ್ನು ಸ್ಟಾರ್ಟ್ ಮಾಡಲು 130 ಎ.ಹೆಚ್. ನ ಒಂದು ಬ್ಯಾಟರಿಯನ್ನು ಇಟ್ಟಿದ್ದು , ಆ ಬ್ಯಾಟರಿಯನ್ನು ದೂರವಾಣಿ ಕೇಂದ್ರದ ಒಳಗಡೆ ಇಟ್ಟು ಬೀಗ ಹಾಕಲಾಗುತ್ತಿತ್ತು. ಒಂದು ಬೀಗದ ಕೀಲಿಯನ್ನು ಇನ್ ಚಾರ್ಜ ಆಗಿರುವ ದಿಲೀಪ್ ಹಾಗೂ ರಾಮಣ್ಣರವರಿಗೆ ಕೊಡಲಾಗಿದ್ದು ಇನ್ನೊಂದು ಕೀಲಿಯನ್ನು ಆಫೀಸಿನಲ್ಲಿ ಇಡಲಾಗಿತ್ತು. ದಿನಾಂಕ 28-06-2021 ರಂದು ಬೆಳಿಗ್ಗೆ ದಿಲೀಪ್ ಹಾಗೂ ರಾಮಣ್ಣರವರು ಡ್ಯೂಟಿಗೆ ಹೋದಾಗ ಇಂಜಿನ್ ಬ್ಯಾಟರಿಯನ್ನು ಯಾರೋ ಕಳವು ಮಾಡಿಕೋಂಡು ಹೋಗಿರುವ  ವಿಷಯವನ್ನು ನನಗೆ ತಿಳಿಸಿದ್ದು ನಾನು ಹೋಗಿ ನೋಡಲಾಗಿ ಇಂಜಿನ್ ಬ್ಯಾಟರಿ ಇರುವುದಿಲ್ಲ . ಬ್ಯಾಟರಿಯ ಅಂದಾಜು ಬೆಲೆ 11.000/ರೂ ಗಳಾಗಿದ್ದು,ಕಳುವಾಗಿರುವ ಬ್ಯಾಟರಿಯನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ .

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 02-07-2021 ರಂದು ಪಿರ್ಯಾದುದಾರರಾದ ನಿತ್ಯಾನಂದಶೆಟ್ಟಿ,ತುಮಕೂರು ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ  ಈ ದಿವಸ ನಾನು ಹಾಗೂ ಕುಟುಂಬದವರು ಕೆಎ-06 ಪಿ-0680 ಕಾರಿನಲ್ಲಿ ಚಾಲಕ ಯೋಗಾನಂದರವರೊಂದಿಗೆ ಮೂಡಬಿದ್ರೆಯಿಂದ ತುಮಕೂರಿಗೆ ಹೋಗುತ್ತಿರುವಾಗ ಮೂಡಿಗೆರೆಯ ಹಾರ್ಟಿಕಲ್ಚರ್ ಕಾಲೇಜ್ ಸಮೀಪ ಎದುರುಗಡೆಯಿಂದ ಬಂದ ಕೆಎ-19 ಇಕ್ಯೂ- 3352 ಮೋಟಾರ್ ಸೈಕಲ್ ಚಾಲಕ ತನ್ನ ವಾಹನವನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮೋಟಾರ್ ಸೈಕಲ್ ಸವಾರನಿಗೆ, ಹಿಂಬದಿಯಲ್ಲಿ ಕುಳಿತಿದ್ದ ಶ್ರೀ ಎಂಬುವವರಿಗೆ , ಅಕ್ಷಯ್ ಎಂಬ ಮಗುವಿಗೆ ಪೆಟ್ಟಾಗಿರುತ್ತೆ. ಕಾರಿನಲ್ಲಿದ್ದವರಿಗೆ ಪೆಟ್ಟಾಗಿರುವುದಿಲ್ಲ. ಬೈಕ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಬೆಂಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 02-07-2021 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080