ಅಭಿಪ್ರಾಯ / ಸಲಹೆಗಳು

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 01-08-2021 ರಂದು ಸಂಜೆ 07-30 ಗಂಟೆ ಸಮಯದಲ್ಲಿ ಕೆಎ- 16 ಈಕ್ಯೂ-9230 ಮೊಪೈಡ್ ಬೈಕಿನಲ್ಲಿ ಸುನೀಲ್ ನು ತಮ್ಮಟದಹಳ್ಳಿ ಪೆಟ್ರೋಲ್ ಬಂಕ್ ಸಮೀಪ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ-04 ಎಂಎನ್-9367 ಕಾರಿನ ಚಾಲಕ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಬೈಕಿಗೆ ಡಿಕ್ಕಿ ಹೊಡೆಸಿದ ಪರಣಾಮ ಸುನೀಲ್ ರವರು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ತಲೆಗೆ ಹಾಗೂ ಹೊಟ್ಟೆಗೆ ತೀವ್ರತರಹದ ಪೆಟ್ಟಾಗಿ ಮೃತಪಟ್ಟಿದ್ದು ಕಾರಿನ ಚಾಲಕನ ವಿರುದ್ದ  ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಸಿ.ಇ.ಎನ್ ಪೊಲೀಸ್ ಠಾಣೆ

ದಿನಾಂಕ 01/08/2021 ರಂದು ಚಿಕ್ಕಮಗಳೂರು ನಗರದ ಅರವಿಂದ ನಗರದಲ್ಲಿರುವ ಸಾಮಿಲ್ ಅಬಿಬ್ರವರ ಮನೆಯಲ್ಲಿ ಬಾಡಿಗೆ ಇರುವ ಕಿಶೋರ್ ರವರ ವಾಸದ ಮನೆಯಲ್ಲಿ  ಕೆಲವು ಜನರು ಸೇರಿಕೊಂಡು ಅಕ್ರಮವಾಗಿ ಜೂಜಾಡುತ್ತಿದ್ದ 5 ಜನರನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚಾಪೆ, 6 ಬೈಕ್ ಗಳು ,6 ಮೊಬೆಲ್ ಗಳು ಹಾಗೂ 6100 /- ರೂ ನಗದು ಹಣವನ್ನು  ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ  ಸಿ.ಇ.ಎನ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ರಕ್ಷಿತ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕುದುರೆಮುಖ ಪೊಲೀಸ್ ಠಾಣೆ

ದಿನಾಂಕ 01/08/2021 ರಂದು ಕುದುರೆಮುಖ ಠಾಣಾ ವ್ಯಾಪ್ತಿ ಸಂಸೆ ಗ್ರಾಮದ ಜಾಂಬಳೆ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಸಮೀಪ  1. ಬಾಬು ಬಿನ್ ಸೋಮ 2. ಮಂಜು ಬಿನ್ ದೊರೆಸ್ವಾಮಿ 3. ಶಿಹಾದ್ ಬಿನ್ ಸುಬ್ರಮಣ್ಯ 4. ರವಿ ಬಿನ್ ಮಾದೇಗೌಡ 5. ಮಂಜುನಾಥ ಬಿನ್ ಚಿನ್ನದೊರೆ ಇವರು ಸೇರಿಕೊಂಡು ಅಕ್ರಮವಾಗಿ ಜೂಜಾಡುತ್ತಿದ್ದು ಸದರಿ  5 ಜನರನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, ಒಂದು ಬೆಡ್ ಶಿಟ್,  ಹಾಗೂ 5300 /- ರೂ ನಗದು ಹಣವನ್ನು  ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ  ಕುದುರೆಮುಖ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಎ.ಎಸ್.ಐ ಕುಮಾರ್ ಕೆ.ಎಂ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 02-08-2021 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080