ಅಭಿಪ್ರಾಯ / ಸಲಹೆಗಳು

ಮರಾಣಾಂತಿಕ ರಸ್ತೆ ಅಪಘಾತ ಪ್ರಕರಣ.

ಯಗಟಿ ಪೊಲೀಸ್ ಠಾಣೆ.

ದಿನಾಂಕ: 01-01-2022 ರಂದು  ಬಿ.ಸಿ. ರಘು ಬಿನ್ ಚಂದ್ರಪ್ಪ ಇವರು ನೀಡಿದ ದೂರಿನಲ್ಲಿ  ದಿನಾಂಕ 01-01-2022 ರಂದು ಪಿರ್ಯಾದಿಯವರ ಬಾಬ್ತು ಕೆಎ-18-ಇಬಿ-4227 ಸ್ಲೆಂಡರ್ ಪ್ಲಸ್ ಬೈಕಿನಲ್ಲಿ ಪಿರ್ಯಾದಿ ತಮ್ಮ ರವಿಕುಮಾರ್ ಯಗಟಿ ಬೀರೂರು ರಸ್ತೆಯ ರಾಂಪುರ ಗ್ರಾಮದ ರಸ್ತೆಯ ತಿರುವಿನಲ್ಲಿ ಪಿರ್ಯಾದಿಯ ತಮ್ಮ ರವಿಕುಮಾರ್ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆಯ ಮಣ್ಣಿನ ಗುಡ್ಡೆ ಹತ್ತಿಸಿ ಜಾಲಿ ಬೇಲಿಯಿಂದ ಶಾಲೆಯ ಕಾಂಪೌಡ್ಗೆ ಡಿಕ್ಕಿ ಹೊಡೆದು ಬೈಕ್ ಸಮೇತ ಶಾಲೆಯ ಅವರಣದಲ್ಲಿ ಬಿದ್ದು ತಲೆಗೆ ಮುಖದ ಬಲಭಾಗಕ್ಕೆ ತೀವ್ರ ರಕ್ತಗಾಯವಾಗಿ ರವಿಕುಮಾರ್ ನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಮರಾಣಾಂತಿಕ ಅಪಘಾತ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ;01/01/2022 ರಂದು ಪಿರ್ಯಾದಿ ನಟರಾಜ ಬಿನ್ ಸುಬ್ರಮಣ್ಯ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗ ಎನ್ ಹರೀಶ್. ನು ZAHRS ಮೂಡಿಗೆರೆ ರವರಲ್ಲಿ ಟ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು,  ದಿನಾಂಕ 01/01/2022 ರಂದು ಮಗ್ಗಲಮಕ್ಕಿಯಲ್ಲಿ  ಕೆಎ-18-ಟಿ-9709 ರ ನಂಬರ್ ಟ್ಯಾಕ್ಟರ್ ನಲ್ಲಿ ಉಳುಮೆ ಕೆಲಸ ಮಾಡುತ್ತಿರುವಾಗ ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಟರ್ ಪಲ್ಟಿಯಾಗಿ ಚಾಲಕನ ಮೇಲೆ ಬಿದ್ದು ತಲೆಗೆ ಹೊಟ್ಟೆ ಕಾಲುಗಳ ಮೇಲೆ ಬಿದ್ದು ಚಾಲಕ ಹರೀಶನು ಸ್ಥಳದಲ್ಲೆ ಮೃತಪಟ್ಟಿದ್ದಾಗಿ ನೀಡಿದ ದೂರಿನ ಮೆರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಅನಾಮಧೇಯ ವ್ಯಕ್ತಿ ಶವ ಪತ್ತೆ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 01/01/2022 ರಂದು ಪಿರ್ಯಾಧಿ ರಾಕೇಶ ಎ. ರವರು ನೀಡಿದ ದೂರಿನಲ್ಲಿ ಪಿರ್ಯಾಧಿ ಭದ್ರಾ ಮೇಲ್ದಂಡೆ ಯೋಜನೆ ನೀರಾವರಿ ಇಲಾಖೆಯಲ್ಲಿ ಕರ್ತವ್ಯ ಮಾಡುತ್ತಿದ್ದು ಈ ದಿನ  ಮದ್ಯಾಹ್ನ 2.30 ಗಂಟೆ ಸಮಯದಲ್ಲಿ  ಸೌತನಹಳ್ಳಿ ಗ್ರಾಮದಲ್ಲಿ ಇರುವ ನಿರ್ಮಾಣವಾಗಿರುವ ಕಾಲುವೆ ಭಾಗದಲ್ಲಿ ನೀರು ತುಂಬಿದ್ದು ನೀರಿನಲ್ಲಿ ಯಾವುದೋ ಸುಮಾರು 45-50 ವರ್ಷ ವಯಸ್ಸಿನ  ಒಂದು ಗಂಡು ಶವ ನೀರಿನಲ್ಲಿ ತೇಲುತ್ತಿದ್ದು,  ಸದರಿ ವ್ಯಕ್ತಿಯು ಅಕಸ್ಮಿಕವಾಗಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮುಂದಿನ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಮನುಷ್ಯ ಕಾಣೆ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 02-01-2022 ರಂದು ಪಿರ್ಯಾಧುದಾರರಾದ ಜಾಕೀರ್ ಹುಸೇನ್ ಬಿನ್ ಲೇಟ್ ಶುಕೂರ್ ರವರು ನೀಡಿದ ದೂರಿನಲ್ಲಿ ದಿನಾಂಕ 26-12-2021 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ  ಪಿರ್ಯಾದಿ ಮಗ ಸುಹೇಲ್ ಹುಸೇನ್ 24 ವರ್ಷ ಪ್ರಾಯ ಈತನು  ಮೂಡಿಗೆರೆಯ ಛತ್ರಮೈದಾನದ  ಮನೆಯಿಂದ ಯಾರಿಗೂ ಮನೆಯಲ್ಲಿ ಹೇಳದೇ ಕೇಳದೆ ಎಲ್ಲಿಯೋ ಹೋಗಿದ್ದು ,ಇದುವರೆಗೂ ಈತನನ್ನು ಎಲ್ಲಾ ಕಡೆಗಳಲ್ಲಿಯೂ ಹುಡಕಲಾಗಿ ಪತ್ತೆಯಾಗಿರುವುದಿಲ್ಲ, ಅದ್ದರಿಂದ ಕಾಣೆಯಾಗಿರುವ ಸುಹೇಲ್ ಹುಸೇನ್, 24 ವರ್ಷ, ಎಣ್ಣೆಗೆಂಪು ಮೈ ಬಣ್ಣ , ಕೋಲು ಮುಖ, ತೆಳ್ಳಗಿನ ಶರೀರ ಕನ್ನಡ ಮತ್ತು ಉರ್ದು ಬಾಷೆ ಮಾತಾನಾಡುತ್ತಾನೆ. ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

 

ಇತ್ತೀಚಿನ ನವೀಕರಣ​ : 02-01-2022 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080