ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಪ್ರಕರಣ

ಯಗಟಿ  ಪೊಲೀಸ್ ಠಾಣೆ.

ದಿನಾಂಕ:02-02-2022 ರಂದು ಮದ್ಯಾಹ್ನ ಯಗಟಿ ಠಾಣಾ ಸರಹದ್ದಿನ ಜಿ.ಯರದಕೆರೆ ಗ್ರಾಮದಲ್ಲಿರುವ ಕುಮಾರ  ಎಂಬುವನು ತನ್ನ ಹಸುವಿನ ಶೆಡ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದು , ಆತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. 40 ಟೆಟ್ರಾಪ್ಯಾಕ್ ಅನ್ನು  ಅಂದಾಜು ಬೆಲೆ 1405/- ರೂ ಅಗಿದ್ದು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತರ ವಿರುದ್ದ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀ ಶಶಿಕುಮಾರ್ ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಬಾಳೂರು  ಪೊಲೀಸ್ ಠಾಣೆ.

ದಿನಾಂಕ:01-02-2022 ರಂದು ಬಾಳೂರು ಠಾಣಾ ಸರಹದ್ದಿನ ಬಾಳೂರು ಹ್ಯಾಂಡ್ ಪೋಸ್ಟ್ ಗ್ರಾಮದಲ್ಲಿರುವ ಶ್ರೀನಿವಾಸಬಿನ್ ಈಶ್ವರ  ಎಂಬುವನು ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಮತ್ತು  ಸಾರ್ವಜನಿಕರಿಗೆ ಅಂಗಡಿಯಲ್ಲಿಯೇ ಬ್ರಾಂಡಿ ಕುಡಿಯಲು ಕೊಡುತ್ತಿದ್ದು ಆತನನ್ನು ವಶಕ್ಕೆ ಪಡೆದು , ಆತನು ಅಕ್ರಮವಾಗಿ ಹೊಂಡಿದ್ದ 90 ಎಂ.ಎಲ್. 09 ಟೆಟ್ರಾಪ್ಯಾಕ್ ಅನ್ನು  ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತರ ವಿರುದ್ದ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ರೇಣುಕಮ್ಮ  ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಜಯಪುರ ಪೊಲೀಸ್ ಠಾಣೆ

ದಿನಾಂಕ 01-02-2022 ರಂದು ಕೊಪ್ಪ ತಾಲ್ಲೋಕು ಹುಲಿಗರಡಿ ಸೋಮನಕುಡಿಗೆ ವಾಸಿ ರವಿ ಬಿನ್ ಬಾಬು ರವರು ಬೆಳಿಗ್ಗೆ ವಾಸದ ಮನೆಯ ಬೀಗ ಹಾಕಿಕೊಂಡು ಕೂಲಿ ಕೆಲಸಕ್ಕೆ ಹೋಗಿದ್ದು ಸಂಜೆ ವಾಪಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗ ಹೊಡೆದು ತೆಗೆದು ಗ್ರಾಡೆಜ್ ಬೀರುವಿನಲ್ಲಿ ಇದ್ದ 3500/-ರೂ ನಗದು ಹಣವನ್ನು ಮತ್ತು ಸ್ಕ್ರೀನ್ ಟಚ್  ಮೊಬೈಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಸ್ವತ್ತನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನಕ್ಕೆ ಪ್ರಯತ್ನ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ

ದಿನಾಂಕ 01-02-2022 ರಂದು ಕಡೂರು ತಾಲ್ಲೋಕು ಚಟ್ನಹಳ್ಳಿ ತಾಂಡ್ಯ ಗ್ರಾಮ ವಾಸಿ ಧನಪಾಲನಾಯ್ಕ ಬಿನ್ ಲೇಟ್ ಸೇವ್ಯಾನಾಯ್ಕ ರವರು ನೀಡಿದ ದೂರಿನಲ್ಲಿ ದಿನಾಂಕ;31/01/2022 ರಾತ್ರಿ ವೇಳೆಯಲ್ಲಿ ಪಿರ್ಯದಿಯ ಕುರಿ ದೊಡ್ಡಿಯಿಂದ ಯಾರೋ ಕುರಿ ಕಳ್ಳತನ ಮಾಡಲು ಬಂದಿದ್ದು ಕುರಿಗಳನ್ನು ತೆಗದುಕೊಂಡು ಹೋಗುತ್ತಿರುವಾಗ ನಾಯಿಗಳು ಬೊಗಳಿದ್ದು ಪಿರ್ಯಾದಿಗೆ ಎಚ್ಚರವಾಗಿ ನೋಡಿದಾಗ ಯಾರೋ ಕಳ್ಳರು ಕುರಿಗಳನ್ನು ಎತ್ತಿಕೊಂಡು ಹೋಗುತ್ತಿದ್ದು ಪಿರ್ಯಾದಿಯು ಕೂಗಾಡಿಕೊಂಡು ಅವರನ್ನು ಹಿಂಭಾಲಿಸಿ ಹೋದಾಗ ಅವರು ಕುರಿಗಳನ್ನು ಬಿಟ್ಟು ಓಡಿ ಹೋಗಿದ್ದು  ಅದರಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ನೋಡಿದಾಗ ಈತನು ಪಿರ್ಯಾಧಿ ಬಳಿ ವ್ಯಾಪಾರ ಮಾಡುತ್ತಿದ್ದು ಜಾವಗಲ್ ನ ಸಲ್ಮಾನ್ ಅಗಿದ್ದು ಈತನು ತಪ್ಪಿಸಿಕೊಂಡು ಓಡಿ ಹೋಗಿದ್ದು ಇತನ ಜೊತೆ ಮೂರು ಜನ ಬಂದಿದ್ದು ಎಲ್ಲರೂ ಬೈಕಿನಲ್ಲಿ ತಪ್ಪಿಸಿಕೊಂಡು ಹೋಗಿರುತ್ತಾರೆ, ಕುರಿ ಗಳನ್ನು ಕಳ್ಳತನ ಮಾಡುತ್ತಿದ್ದ  ಸಲ್ಮಾನ್ ಮತ್ತು ಇತರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 02-02-2022 07:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080