ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ. 

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:01/03/2022 ರಂದು ಪಿರ್ಯಾದಿ ವಿ.ಕೆ. ಚಂದ್ರೇಗೌಡ ಬಿನ್ ಕರೀಗೌಡ  ಹೆಸ್ಗಲ್ ಮೂಡಿಗೆರೆ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;01/03/2022 ರಂದು ಪಿರ್ಯಾದಿ ಕಾಫಿ ಮತ್ತು ಮೆಣಸು ಎಸ್ಟೇಟ್ ನಲ್ಲಿ ಸಂಜೆ 6-30  ಗಂಟೆ ಸಮಯದಲ್ಲಿ ಕೆಎ-18-ಕೆ-5692 ನೇ ನಂಬರಿನ ಬೈಕಿನಲ್ಲಿ ಧರ್ಮ ವಿವೇಕಾನಂದ ನಗರ ವಾಸಿ ಈತನು ಬಂದು ಸುಮಾರು 20 ಕೆ.ಜಿ.ಯಷ್ಟು  ಕಾಳು ಮೆಣಸನ್ನು ಕಳ್ಳತನ ಮಾಡಿದ್ದು ಅಂದಾಜು ಮೌಲ್ಯ 3000/- ರೂ ಅಗಿದ್ದು, ಕಳ್ಳತನ ಮಾಡಿದ ಧರ್ಮ ರವರ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಎನ್. ಆರ್. ಪುರ ಪೊಲೀಸ್ ಠಾಣೆ.

ದಿನಾಂಕ:01/03/2022 ರಂದು ಎನ್.ಆರ್. ಪುರ ಠಾಣಾ ಸರಹದ್ದಿನ ಆಳಲಗೆರೆ ಗ್ರಾಮದ ಸರ್ಕಾರಿ ಕಾಡಿನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಾಲರಾಜ್ ಬಿನ್ ತಮ್ಮೇಗೌಡ 2] ಎಲ್ದೋ ಪಿ.ಬಿ. ಬಿನ್ ಬೇಬಿ 3] ವಿಜಯ್ ಬಿನ್ ಶ್ರೀಧರ ಇವರನ್ನು  ವಶಕ್ಕೆ ಪಡೆದುಕೊಂಡಿದ್ದು ರಂಜನ್ ಈತನು ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ.  ಆರೋಪಿತನ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, 1730 ರೂ ನಗದು ಹಣ 2 ಬೈಕ್ ಗಳು ಹಾಗೂ ಒಂದು ಕಾರ್ ಅನ್ನು ಅಮಾನತ್ತುಪಡಿಸಿಕೊಂಡು ಬಂದು ಎನ್.ಅರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ದಿಲೀಪ್ ಕುಮಾರ್ ವಿ.ಟಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ;02-03-2022 ರಂದು ಪಿರ್ಯಾದಿ ಮಂಜುಳ ಕೊಂ ಮಲ್ಲೇಶಪ್ಪ, 31 ಎಕರೆ ಕಡೂರು ಟೌನ್ ರವರು ನೀಡಿದ ದೂರಿನಲ್ಲಿ ಫಿರ್ಯಾದಿ ಮಗ ಶ್ರೀಧರ ಇವನು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು  ದಿನಾಂಕ 20-02-2022 ರಂದು ಬೆಳಿಗ್ಗೆ ವ್ಯಾಪಾರ ಕ್ಕೆಂದು ಮನೆಯಿಂದ ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಲಿಲ್ಲ. ಕಾಣೆಯಾಗಿರುವ ಶ್ರೀಧರ ಬಿನ್ ಮಲ್ಲೇಶಪ್ಪ, 5.9 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ ಕೋಲು ಮುಖ, ತೆಳು ಶರೀರ ನೀಲಿ ಬಣ್ಣದ ಜಿನ್ಸ್ , ಕೆಂಪು ಬಣ್ಣದ ಟಿ ಷರಟು ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ  ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 02-03-2022 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080