ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ;01/06/2022 ರಂದು ಪಿರ್ಯಾದಿ ಸೈಯದ್ ಇಲಿಯಾಸ್ ಪೀರ್,  ಜಾಮೀಯಾ ಮಸೀದಿ ರಸ್ತೆ, ಚಿಕ್ಕಮಗಳೂರು ಗ್ರಾಮ, ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗ ಸೈಯದ್ ಅಬ್ದುಲ್ ರಜಾಕ್ ನು ದಿನಾಂಕ; 31/05/2022 ರಂದು ಬೆಳಿಗ್ಗೆ ಮನೆಯಿಂದ ಮೋಟಾರ್ ಸೈಕಲ್ ನಲ್ಲಿ ಮನೆಯಿಂದ  ಹೋದವನು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಸೈಯದ್ ಅಬ್ದುಲ್ ರಜಾಕ್, 34 ವರ್ಷ,  ದುಂಡುಮುಖ, ದೃಡಕಾಯ ಶರೀರ, ಕನ್ನಡ, ಇಂಗ್ಲಿಷ್, ಉರ್ದು ಬಾಷೆ ಮಾತನಾಡುತ್ತಾರೆ. ಕಿತ್ತಲೆ ಬಣ್ಣದ ಟೀ  ಶರಟು, ಕಪ್ಪು ಬಣ್ಣದ ಜಿನ್ಸ್ ಪ್ಯಾಂಟು, ಧರಿಸಿರುತ್ತಾನೆ. ಕಾಣೆಯಾಗಿರುವ ತನ್ನ ಮಗ ಸೈಯದ್ ಅಬ್ದುಲ್ ರಜಾಕ್ ನನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;02/06/2022 ರಂದು ಪಿರ್ಯಾದಿ ಕೇಶವರಾಜ್ ಅರಸ್ ಬಿನ್ ಪುಟ್ಟರಾಜ್ ಅರಸ್, ಕರ್ತಿಕೆರೆ ಗ್ರಾಮ, ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಪೂಜಾಳು  ದಿನಾಂಕ; 01/06/2022 ರಂದು ಬೆಳಿಗ್ಗೆ  ಮನೆಯಿಂದ ಮೋಟಾರ್ ಸೈಕಲ್ ನಲ್ಲಿ ಮನೆಯಿಂದ  ಹೋದವನು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಪೂಜಾ,  19 ವರ್ಷ,  ಎಣ್ಣೆಗೆಂಪು ಮೈ ಬಣ್ಣ, ಸದಾರಣ ಮೈ ಕಟ್ಟು, 5 ಅಡಿ ಎತ್ತರ,  ಹಳದಿ ಬಣ್ಣದ ಚೂಡಿದಾರ್ ಧರಿಸಿದ್ದು, ಕಣ್ಣಿಗೆ ಕನ್ನಡಕ ಹಾಕಿರುತ್ತಾಳೆ. ಕಾಣೆಯಾಗಿರುವ ತನ್ನ ಮಗಳು ಪೂಜಾಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸರ್ಕಾರಿ ಕೆಲಸಕ್ಕೆ ಅಡ್ಡಿ  ಪ್ರಕರಣ

ಲಿಂಗದಹಳ್ಳಿ  ಪೊಲೀಸ್ ಠಾಣೆ.

ದಿನಾಂಕ;01/06/2022 ರಂದು ಪಿರ್ಯಾದಿ ಮಂಜಪ್ಪ ಬಿ ಬಿನ್ ಹನುಮಂತಪ್ಪ ಪಿ.ಡಿ.ಓ. ಸುಣ್ಣದಹಳ್ಳಿ ಗ್ರಾಮ ಪಂಚಾಯಿತಿ ಹುರಳಿಹಟ್ಟಿ, ಎಂ.ಜಿ. ರಸ್ತೆ ತರೀಕೆರೆ ಟೌನ್  ವಾಸಿ, ಇವರು ನೀಡಿದ ದೂರಿನಲ್ಲಿ, ಪಿರ್ಯಾದಿಯು ದಿನಾಂಕ; 01/06/2022 ರಂದು  ಸುಣ್ಣದಹಳ್ಳಿ ಪಂಚಾಯಿತಿಯ ನೀರಿನ ಜಲಮಿಷನ್ ವತಿಯಿಂದ ಸರ್ವೆ ಮಾಡಲು ಸಿಬ್ಬಂದಿಯೊಂದಿಗೆ ಮತ್ತು ಇತರೆ ಇಲಾಖಾ ಅದಿಕಾರಿಗಳೊಂದಿಗೆ ಹೋಗಿದ್ದು, ನಂದಿ ಹೊಸಳ್ಳಿ ಗ್ರಾಮಕ್ಕೆ ಬಂದು ನೀರಿನ ಟ್ಯಾಂಕ್ ಸ್ಥಳವನ್ನು ಗುರುತು ಮಾಡುತ್ತಿರುವಾಗ ನಾಗರಾಜ ಬಿನ್ ಈಶ್ವರಪ್ಪ, ಏಕಾಏಕಿ ಬಂದವನೇ, ಗ್ರಾಮದಲ್ಲಿ ಚರಂಡಿ ಕ್ಲಿನ್ ಮಾಡಿರುವುದಿಲ್ಲವೆಂದು, ಈ ವಿಚಾರದಲ್ಲಿ ಗಲಾಟೆ ಮಾಡಿ, ಸಿಬ್ಬಂದಿ ಶೇಖರಪ್ಪ ಎಂಬುವರಿಗೆ ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾನೆ. ಹಾಗೂ ಎಲ್ಲರಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.ಮತ್ತು ಸರ್ಕಾರಿ ಕೆಲಸಕ್ಕೆ ತೊಂದರೆ ಮಾಡಿದ್ದು ಆರೋಪಿ ನಾಗರಾಜನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:02/06/2022 ರಂದು ಚಿಕ್ಕಮಗಳೂರು ತಾಲ್ಲೋಕು ಕೆ.ಆರ್. ಪೇಟೆ ಗ್ರಾಮದಲ್ಲಿ ಪೂರ್ಣೇಶ್ ಎಂಬುವವರು ಹೋಟೇಲ್ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಆರೋಪಿತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 90 ಎಂ.ಎಲ್. ನ 46 ಮದ್ಯದ ಪೌಚ್ ಗಳನ್ನು  ಅಂದಾಜು ಬೆಲೆ 2718/- ರೂ ಗಳಾಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಆರೋಪಿತನ ವಿರುದ್ದ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿ ರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ ವಿಭಾಗದ ಪಿ.ಎಸ್.ಐ. ಗೋವಿಂದನಾಯ್ಕ, ಬಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 02-06-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080