ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಬಾಳೂರು ಪೊಲೀಸ್ ಠಾಣೆ.

ದಿನಾಂಕ 02-09-2021 ರಂದು ರೇಖಾ, ದುರ್ಗದಹಳ್ಳಿ ವಾಸಿರವರು ನೀಡಿದ ದೂರೇನೆಂದರೆ , ದಿನಾಂಕ 26-08-2021 ರಂದು ನನ್ನ ಗಂಡನಾದ ತೇಜಸ್ವಿರವರು ಸ್ವಂತ ಕೆಲಸಕ್ಕಾಗಿ ತಮ್ಮ  ಬೈಕಿನಲ್ಲಿ ಹೋದವರು ಸಂಜೆಯಾದರೂ ವಾಪಾಸ್ ಮನೆಗ ಬಾರದ ಕಾರಣ ಅವರ ಮೊಬೈಲ್ ಗೆ ಪೋನ್ ಮಾಡಲಾಗಿ ಸ್ವಿಚ್ ಆಫ್ ಬರುತ್ತಿದ್ದು ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು  ರವರನ್ನು ಪತ್ತೆ ಮಾಡಿಕೊಡಬೇಕೆಂದು  ನೀಡಿದ ದೂರಿನ ಮೇರೆಗೆ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ  01-09-2021 ರಂದು ಗಣೇಶರವರು ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ 24-08-2021 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ನನ್ನ ಬಾಬ್ತು ಕೆಎ-18 ಇಜಿ- 5050 ಸ್ಕೂಟಿಯನ್ನು ನಮ್ಮ ಮನೆಯ ಮುಂದಿನ ಕಾಂಪೌಂಡ್ ಗೇಟಿನ ಒಳಗಡೆ ನಿಲ್ಲಿಸಿದ್ದು, ದಿನಾಂಕ 15-08-2021ರಂದು ಬೆಳಗ್ಗೆ 06-00 ಗಂಟೆಗೆ ಎದ್ದು ನೋಡಲಾಗಿ ಸ್ಕೂಟಿಯು ಇರುವುದಿಲ್ಲ. ಯಾರೋ ಕಳ್ಳರು ಸ್ಕೂಟಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ  01-09-2021 ರಂದು ಚಂದ್ರಶೇಖರರವರು ನೀಡಿದ ದೂರಿನ ಸಾರಾಂಶವೇನೆಂದರೆ , ನಾನು ಇಂದಾವರ ಗ್ರಾಮದಲ್ಲಿ ಐ.ಡಿ.ಎಫ್.ಶಾಲೆಯನ್ನು ನಡೆಸುತ್ತಿದ್ದು ದಿನಾಂಕ 31-08-2021 ರಂದು ಸಂಜೆ 07-30 ಗಂಟೆ ಸಮಯದಲ್ಲಿ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 01-09-2021 ರಂದು ಬೆಳಗ್ಗೆ 08-00 ಗಂಟೆ ಸಮಯದಲ್ಲಿ ಶಾಲೆಗೆ ಹೋದಾಗ ಯಾರೋ ಕಳ್ಳರು ಕಛೇರಿಯ ಬೀಗವನ್ನು ಮುರಿದು ಒಳಗಡೆಯಿದ್ದ 1) 15.000/-ರೂ ಬೆಲೆಯ ಒಂದು ಮಾನಿಟರ್, ಕೀಬೋರ್ಡ್, ಸಿ.ಪಿ.ಯು ಹಾಗೂ ಮೌಸ್ 2) ಸೋನಿ ಕಂಪೆನಿಯ ಒಂದು ಟಿ.ವಿ.3) ಒಂದು ಗ್ಯಾಸ್ ಸ್ಟೌವ್ 4) ಒಂದು ಸ್ಯಾಮ್ಸಂಗ್ ಕೀ ಪ್ಯಾಡ್ ಹಾಗೂ ನಗದು ಹಣ ಒಟ್ಟು 77,400 ರೂ ಬೆಲೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ನೀಡಿದ ದಊರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 02-09-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080