ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ  ಪ್ರಕರಣ.

ಸಿ.ಇ. ಎನ್. ಪೊಲೀಸ್ ಠಾಣೆ,

ದಿನಾಂಕ 01-10-2021 ರಂದು 18.00 ಗಂಟೆ ಸಮಯದಲ್ಲಿ ಮೂಡಿಗೆರೆ ತಾಲ್ಲೊಕು ಮಾಲಹಳ್ಳಿ ಗ್ರಾಮದಲ್ಲಿ ಹಾದು ಹೋಗಿರುವ ನಂದೀಪುರ -ಬಸ್ಕಲ್ ರಸ್ತೆಯಲ್ಲಿರುವ ಬಸ್ಕಲ್ ದರ್ಗಾದ ಮುಂಭಾಗದಲ್ಲಿ   ರಸ್ತೆಯ ಬಳಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ  ಅರೋಪಿತರಾದ 1. ನಾರಾಯಣಗೌಡ 2. ಗೌತಮ್ ರವರನ್ನು ವಶಕ್ಕೆ ಪಡೆದಿದ್ದು  ಅರೋಪಿತರಾದ 3. ಅವಿನಾಶ್ 4. ಉಪೇಂದ್ರ 5. ಪ್ರಸನ್ನ ರವರು ಓಡಿ ಹೋಗಿದ್ದು , ಅರೋಪಿತರು ಅಕ್ರಮವಾಗಿ  ಇಸ್ಪೀಟ್ ಆಡಲು ಬಳಿಸಿದ 2950/- ರೂ ನಗದು ಹಣ , 52 ಇಸ್ಪೀಟ್ ಎಲೆಗಳು,  ಪ್ಲಾಸ್ಟಿಕ್ ಟಾರ್ಪಲ್ ಮತ್ತು ಮೆಣದಬತ್ತಿಯನ್ನು ಅಮಾನತ್ತುಪಡಿಸಿಕೊಂಡಿದ್ದು ಆರೋಪಿತರ ವಿರುದ್ದ  ಸಿ.ಇ. ಎನ್.  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರಫೀಕ್ ಎಂ.  ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಕಡೂರು ಪೊಲೀಸ್ ಠಾಣೆ.

ದಿನಾಂಕ 01-10-2021 ರಂದು ಕಡೂರು ತಾಲ್ಲೋಕು  ಅಲಘಟ್ಟ ಗ್ರಾಮ ವಾಸಿ ಆರ್. ಲಕ್ಷ್ಮಣ ಬಿನ್ ಲೇಟ್ ರಾಮಯ್ಯ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;30-09-2021 ರಂದು ಸಂಜೆ ಅಲಘಟ್ಟ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಎಂದಿನಂತೆ ರಾತ್ರಿ 8.30 ಗಂಟೆಗೆ ಬೀಗಹಾಕಿಕೊಂಡು ಹೋಗಿದ್ದು ದಿನಾಂಕ 01/10/2021 ರಂದು ಬೆಳಿಗ್ಗೆ ಪೂಜೆ ಮಾಡಲು ದೇವಸ್ಥಾನದ ಬಳಿ ಬಂದಾಗ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ದೇವಸ್ಥಾನದ ಒಳಭಾಗದಲ್ಲಿರುವ ಬೀರುವನ್ನು ಒಡೆದು ಅದರಲ್ಲಿದ್ದ 1ಪಂಚ ಕಳಸದ ಛತ್ರಿ 400 ಗ್ರಾಂ, 2 ಬೆಳ್ಳಿಯ ಗಿಳಿಗಳು ಸುಂಆರು 400 ಗ್ರಾಂ , 14 ಬೆಳ್ಳಿಯ ಛತ್ರಿಗಳು ಸುಮಾರು 2 ಕೆ.ಜಿ. 100 ಗ್ರಾಂ, 2 ಪಕ್ಕೆ ಹೂಗಳು ಸುಮಾರು 200 ಗ್ರಾಂ,  2 ಬೆಳ್ಳಿಯ ಆರಳಿ ಎಲೆಗಳು 200 ಗ್ರಾಂ , 3 ಬೆಳ್ಳಿಯ ತಾವರೆ ಹೂವುಗಳು 75 ಗ್ರಾಂ 1 ಸಣ್ಣ ಬೆಳ್ಳಿಯ ಪಟ್ಟಿ ಸುಮಾರು 250 ಗ್ರಾಂ, 1 ದೊಡ್ಡ ಬೆಳ್ಳಿಯ ಪಟ್ಟಿ ಸುಮಾರು 500 ಗ್ರಾಂ 2 ಬೆಳ್ಳಿಯ ಹೊಂಬಾಳೆ ಸುಮಾರು 200 ಗ್ರಾಂ ಹಾಗೂ ನಗದು 43,000/- ವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಒಟ್ಟು ಮೌಲ್ಯ 2,43,000/- ರೂ.  ಅಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೆಳ್ಳಿಯ ಅಭರಣಗಳನ್ನು ಮತ್ತು ನಗದು ಹಣವನ್ನು ಪತ್ತೆ ಮಾಡಿಕೊಡುವಂತೆ ನೀಡಿದ  ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ.

ದಿನಾಂಕ 01-10-2021 ರಂದು ಕಡೂರು ತಾಲ್ಲೋಕು  ಮರಡಿಹಳ್ಳಿ ಗ್ರಾಮ ವಾಸಿ ರಾಮಚಂದ್ರ ಎಚ್. ಬಿನ್ ಹನುಮಂತಪ್ಪ  ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2021 ರಂದು ಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಎಂದಿನಂತೆ ರಾತ್ರಿ 8.30 ಗಂಟೆಗೆ ಬೀಗಹಾಕಿಕೊಂಡು ನನ್ನ ಪರಿಚಯಸ್ಥರ ಬೈಕ್ ನಂಬರ್ ಕೆಎ-18- ಇಡಿ-2935 ಪ್ಯಾಷನ್  ಎಕ್ಸ್ ಎಲ್ ಪ್ರೋ ಬೈಕನ್ನು ದೇವಾಲಯದ ಅವರಣದಲ್ಲಿ ನಿಲ್ಲಿಸಿ ಹೋಗಿದ್ದು  ದಿನಾಂಕ:01/10/2021 ರಂದು ಬೆಳಿಗ್ಗೆ ಪೂಜೆ ಮಾಡಲು ದೇವಸ್ಥಾನದ ಬಳಿ ಬಂದಾಗ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟೊ ತೆಗೆದು ದೆಸ್ಥಾನದ ಒಳಭಾಗದಲ್ಲಿರುವ ಬೀರುವನ್ನು ಒಡೆದು ಅದರಲ್ಲಿದ್ದ 300 ಗ್ರಾಂ  ಬೆಳ್ಳಿಯ ಲಕ್ಷ್ಮೀ ವಿಗ್ರಹವನ್ನು ಹಾಗೂ ದೇವಸ್ಥಾನದ ಅವರಣದಲ್ಲಿದ್ದ ಕೆಎ-18- ಇಡಿ-2935  ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಒಟ್ಟು ಮೌಲ್ಯ 70000/- ರೂ.  ಅಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೆಳ್ಳಿಯ ಅಭರಣವನ್ನು ಮತ್ತು ಕೆಎ-18- ಇಡಿ-2935  ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ನೀಡಿದ  ದೂರಿನ ಮೇರೆಗೆ ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

ಇತ್ತೀಚಿನ ನವೀಕರಣ​ : 02-10-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080