Feedback / Suggestions

ಅಕ್ರಮ ಮದ್ಯ ಮಾರಾಟ ಪ್ರಕರಣ.

ಮೂಡಿಗೆರೆ  ಪೊಲೀಸ್ ಠಾಣೆ,

ದಿನಾಂಕ 02-11-2021 ರಂದು ಮೂಡಿಗೆರೆ ಠಾಣಾ ಸರಹದ್ದಿನ ಕೃಷ್ಣಾಪುರ ವಾಸಿ ಟಂಕೇಗೌಡ ಹೆಚ್.ವಿ. @ ಕೇಶವ ಬಿನ್ ಲೇಟ್ ವೆಂಕಟೇಗೌಡ ತಮ್ಮ ಮನೆಯ ಪಕ್ಕದ ಮಳಿಗೆಯ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು, ಆರೋಪಿತನ ಬಳಿಯಿದ್ದ 6 ಲೀಟರ್ 720 ಎಂ.ಎಲ್.  ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 3284/-ರೂ  ಆಗಿದ್ದು, ಆರೋಪಿಯ ವಿರುದ್ದ  ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಸಿ.ಪಿ.ಐ, ಸೋಮಶೇಖರ್ ಜೆ.ಸಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ,

ದಿನಾಂಕ 01-11-2021 ರಂದು ತರೀಕೆರೆ ಠಾಣಾ ಸರಹದ್ದಿನ ನಾಗೇನಹಳ್ಳಿ ಗ್ರಾಮದಲ್ಲಿ ಕೃಷ್ಣ ಬಿನ್ ಶಿವಲಿಂಗಣ್ಣ ಈತನು ತಮ್ಮ  ಮನೆಯ ಗೇಟಿನ ಮುಂದಿನ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ದಾಳಿ ಸಮಯದಲ್ಲಿ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿದ್ದು  ಆತನ ಬಳಿಯಿದ್ದ 90 ಎಂ.ಎಲ್ ನ  ಓರಿಜಿನಲ್ ಚಾಯ್ಸ್ ವಿಸ್ಕಿಯ 96 ಟೆಟ್ರಾ ಪೌಚ್ ಗಳನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 3373/ - ರೂ  ಆಗಿದ್ದು ,ಆರೋಪಿಯ ವಿರುದ್ದ  ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ, ರಾಘವೇಂದ್ರ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ  ಪ್ರಕರಣ.

ಎನ್.ಆರ್. ಪುರ. ಪೊಲೀಸ್ ಠಾಣೆ.

ದಿನಾಂಕ 01-11-2021 ರಂದು ಎನ್.ಆರ್. ಪುರ ಠಾಣಾ ಸರಹದ್ದಿನ ಹರಾವರಿ ಗ್ರಾಮದ ರತ್ನಕರ ಎಂಬುವರ ಮನೆಯಲ್ಲಿ  ಅಕ್ರಮವಾಗಿ ಇಸ್ಪೀಟ್  ಜೂಜಾಟವನ್ನು ಆಡುತ್ತಿದ್ದ 1. ಸುಲ್ತಾನ್ ಬಿನ್ ಸೈಪುಲ್ಲಾ 2. ಪರಮೇಶ ಬಿನ್ ಗೋವಿಂದ ಸ್ವಾಮಿಗೌಡ 3. ಶರತ್ ಬಿನ್ ಮಂಜುನಾಥ ಶೆಟ್ಟಿ 4. ದುರ್ಗಪ್ಪ ಬಿನ್ ರಾಮಪ್ಪ 5. ವಿಬಿನ್ ಬಿನ್ ಬೇಬಿ 6. ಪ್ರಸನ್ನ 7. ಮನು ಕೆ,ಡಿ. ಬಿನ್ ದೇವಾಸಿ ಕುಟ್ಟಿ  ರವರನ್ನು ವಶಕ್ಕೆ ಪಡೆದು ಸದರಿಯವರು ಇಸ್ಪೀಟ್ ಆಡಲು ಬಳಸಿದ 52 ಇಸ್ಪೀಟ್ ಎಲೆಗಳು,  2 ಬೈಕ್ ಗಳು, 2 ಸ್ಕೂಟಿಗಳು,   ಹಾಗೂ ನಗದು ಹಣ 30,000/ ರೂ ವನ್ನು  ಅಮಾನತ್ತುಪಡಿಸಿಕೊಂಡು ಆರೋಪಿತರುಗಳ ವಿರುದ್ದ  ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ, ದಿಲೀಪ್ ಕುಮಾರ್ ವಿ.ಟಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

Last Updated: 02-11-2021 06:44 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080