Feedback / Suggestions

ರಸ್ತೆ ಅಪಘಾತ ಪ್ರಕರಣ.

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ: 01-12-2021 ರಂದು  ಶ್ರೀ ಮನೀಶ್ ರವರು ನೀಡಿದ ದೂರಿನಲ್ಲಿ ಪಿರ್ಯಾದಿ  ಮತ್ತು ಸ್ನೇಹಿತ ತುಷಾರ ಕಾರ್ ನಂ ಕೆಎ-18 ಎನ್. 3031 ರಲ್ಲಿ ಕಾರನ್ನು ತುಷಾರನೇ ಚಾಲನೆ ಮಾಡಿಕೊಂಡು ಕೆಮ್ಮಣ್ಣುಗುಂಡಿ ಹತ್ತಿರ ಹೋಗಿ ವಾಪಾಸ್ಸು ತರೀಕೆರೆಗೆ ಬರುವಾಗ ತರೀಕೆರೆ -ಲಿಂಗದಹಳ್ಳಿ ಟಾರು ರಸ್ತೆಯಲ್ಲಿ ನಂದಿ ಗೇಟಿನಿಂದ ಹಿಂದೆ ಸುಮಾರು 3-30 ಗಂಟೆ ಸಮಯದಲ್ಲಿ  ಕಾರಿಗೆ ಅಡ್ಡಲಾಗಿ ಒಂದು ನಾಯಿ ಬಂದಿದ್ದು ಅದನ್ನು ತಪ್ಪಿಸಲು  ಹೋಗಿ ತುಷಾರನು ಕಾರನ್ನು ಪಲ್ಟಿ ಹೊಡೆಸಿದ್ದು ಕಾರಿನ ಮುಂಭಾಗದ ಡೋರಿನ ಗ್ಲಾಸ್ ಹೊಡೆದು ತಾನು ಹೊರಗೆ ಬಿದಿದ್ದು ನಂತರ  ಮತ್ತೆ ಕಾರು 2 ಪಲ್ಟಿ ಯಾಗಿದ್ದು  ತುಷಾರನಿಗೆ ಮತ್ತು ತನಗೆ ಪೆಟ್ಟಾಗಿದ್ದು, ತುಷಾರನು ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ  ಫಲಕಾರಿಯಾಗದೇ ರಾತ್ರಿ 8-30 ಗಂಟೆಗೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

ಸಿಂಗಟಗೆರೆ ಪೊಲೀಸ್ ಠಾಣೆ.

ದಿನಾಂಕ 02-12-2021 ರಂದು ಪಿರ್ಯಾಧಿ ಶ್ರಿರಂಗರವರು ನೀಡಿದ ದೂರಿನಲ್ಲಿ ದಿನಾಂಕ 01-12-2021 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ ಸಿಂಗಟಗೆರೆ ಠಾಣಾ ಸರಹದ್ದಿನ 9 ನೇ ಕ್ರಾಸ್ ಬಳಿ ಮಂಜುನಾಥನು ತನ್ನ ಭಾಬ್ತು ಕೆಎ-06-ಇಎನ್-7110 ರಲ್ಲಿ ಮಾರುತಿ ರವರನ್ನು ಕೂರಿಸಿಕೊಂಡು ಭಾಣಾವಾರ ದಿಂದ ಸಿಂಗಟಗೆರೆ ಮಾರ್ಗವಾಗಿ ಹೋಗುತ್ತಿರುವಾಗ ಮಂಜುನಾಥನು ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆ ಯಿಂದ ಚಾಲನೆ ಮಾಡಿದ್ದು,  ಬೈಕ್ ನಿಯಂತ್ರಣ ತಪ್ಪಿ ಬಿದ್ದು ಬೈಕಿನ ಹಿಂಬದಿಯಲ್ಲಿದ್ದ ಕುಳಿತಿದ್ದ ಮಾರುತಿಗೆ ತೀವ್ರ ತರವಾದ  ಪೆಟ್ಟಾಗಿದ್ದು , ಮಾರುತಿಯು ಚಿಕಿತ್ಸೆ ಫಲಕಾರಿಯಾಗದೇ, ಮೃತಪಟ್ಟಿರುತ್ತಾರೆ. ಬೈಕ್ ಚಾಲಕ ಮಂಜುನಾಥನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ತರೀಕೆರೆ  ಠಾಣೆ.

ದಿನಾಂಕ:02-12-2021 ರಂದು ತರೀಕೆರೆ ಪಟ್ಟಣ ಚೌಡೇಶ್ವರಿ ಬೀದಿ ವಾಸಿ  ಪಿರ್ಯಾದಿ ಅರುಣ  ಎಂಬುವರು ನೀಡಿದ ದೂರಿನಲ್ಲಿ ದಿನಾಂಕ:29-11-2021 ರಂದು ಪಿರ್ಯಾದಿ ಮಗಳು ಸವಿತಾ   ಮನೆಯಲ್ಲಿದ್ದವಳು  ಮದ್ಯಾಹ್ನ 12-00 ಗಂಟೆಗೆ ಪುನಃ ಮನೆಗೆ ಬಂದು ನೋಡಿದಾಗ ಅವಳು ಸವಿತಾ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಯಾರಿಗೂ ಹೇಳದೇ ಮನೆಯಿಂದ  ಹೋದವಳು ವಾಪಾಸ್ಸು ಬಾರದೇ ಇದ್ದು ಈವರೆಗೂ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ತನ್ನ ಮಗಳು ಸವಿತಾ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಮಗಳು ಸವಿತಾ ಕೋಂ ನಾಗರಾಜ 21 ವರ್ಷ, ಸಾದಾರಣ ಮೈಕಟ್ಟು, ಗೋದಿ ಮೈ ಬಣ್ಣ , ಕಪ್ಪು ತಲೆ ಕೂದಲು, ದುಂಡುಮುಖ, ನೇರಳೆ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾಗಿರುವ  ಸವಿತಾ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ 01-12-2021 ರಂದು ಪಿರ್ಯಾದಿ ಕೆ.ಟಿ. ಕುಮಾರಸ್ವಾಮಿ ಬಿನ್ ಲೇಟ್ ಕೆ.ಇ. ತಿಮ್ಮೇಗೌಡ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ಎಂದಿನಂತೆ ದಿನಾಂಕ:01-12-2021 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದು ನಂತರ ಪಿರ್ಯಾದಿ ಹೆಂಡತಿಯವರು ಪೋನ್ ಮಾಡಿ ಮನೆಯ ಕಳ್ಳತನ ವಾಗಿರುವ ಬಗ್ಗೆ ತಿಳಿಸಿದ್ದು ಬಂದು ನೋಡಲಾಗಿ ತನ್ನ ಹೆಂಡತಿಯು ಮನೆಯ ಮೇಲ್ಬಾಗದ ವಾಟರ್ ಟ್ಯಾಂಕ್ ತುಂಬಿಸಲು ಹೋದ ವೇಳೆಯಲ್ಲಿ ಯಾರೋ ಕಳ್ಳರು ಬಾಗಿಲನ್ನು ಮೀಟಿ ತೆಗೆದು ಒಳ ಪ್ರವೇಶಿಸಿ ಮನೆಯಲ್ಲಿದ್ದ ಬೀರುವನ್ನು ಆಯುಧದಿಂದ ಮೀಟಿ ತೆಗೆದು ಅದರಲ್ಲಿದ್ದ  ಸುಮಾರು 117 ಗ್ರಾಂ ಚಿನ್ನದ ವಡವೆಗಳನ್ನು  ಮತ್ತು 10000/- ರೂ ನಗದು ಹಣವನ್ನು ಒಟ್ಟು ಸೇರಿ 3,61,000 ರೂ ವಿನ ಸ್ವತ್ತನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ, ಕಳ್ಳರು ಪತ್ತೆ ಮಾಡಿ ಕಳುವಾಗಿರುವ ಚಿನ್ನದ ವಡೆವೆ ಮತ್ತು ನಗದು ಹಣವನ್ನು ಕೊಡಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Last Updated: 02-12-2021 07:57 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080