ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 02/06/2021 ರಂದು ಹ್ಯಾರಂಬಿ ಗ್ರಾಮದ ಚಂದ್ರಶೇಖರ ಎಂಬುವವರು ತಮ್ಮ ಅಂಗಡಿಯ ಬಳಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನಾದ ಚಂದ್ರಶೇಖರನನ್ನು  ವಶಕ್ಕೆ ಪಡೆದು ಆತನ ಬಳಿಯಿದ್ದ  180 ಎಂ.ಎಲ್.ನ  ಓಲ್ಡ್ ತವೆರಿನ್ ವಿಸ್ಕಿಯ 44 ಮದ್ಯದ ಪೌಚ್ ಗಳು ಹಾಗೂ 180 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 35 ಮದ್ಯದ ಪೌಚ್ಗಳನ್ನು ವಶಕ್ಕೆ ಪಡೆದಿದ್ದು , ಮದ್ಯದ ಅಂದಾಜು ಬೆಲೆ 6293/- ರೂ ಆಗಿರುತ್ತೆ. ಆರೋಪಿ ಚಂದ್ರಶೇಖರನ ವಿರುದ್ದ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ನೀತು.ಆರ್.ಗುಡೆ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊವಿಡ್-19  ನಿಯಮ ಉಲ್ಲಂಘನೆ ಪ್ರಕರಣ

ಗ್ರಾಮಾಂತರ   ಪೊಲೀಸ್ ಠಾಣೆ.

ದಿನಾಂಕ 02/06/2021 ರಂದು ಪಿರ್ಯಾದುದಾರರಾದ ಶ್ರೀಮತಿ.ಶಶಿಕಲಾರವರ ಮಗ ಚಂದ್ರ ಹಾಗೂ ಸೊಸೆ ಅನ್ನಪೂರ್ಣರವರ ಮದ್ಯೆ ಸಂಸಾರದ ವಿಚಾರದಲ್ಲಿ ಗಲಾಟೆಯಾಗಿದ್ದು, ಇದೇ ವಿಚಾರಕ್ಕೆ ಪಿರ್ಯಾದುದಾರರಿಗೆ ಅವರ ಸೊಸೆಯ ಅಣ್ಣಂದಿರ ಮಕ್ಕಳಾದ   ನಾಗಾರ್ಜುನ, ಅರ್ಜುನ,ಗಣೇಶ, ಗೌರೇಶ, ಅಂಬರೀಷ, ಸಬಿತಕುಮಾರ ಇವರುಗಳು ಕೊವಿಡ್-19 ಸಂಬಂಧ ಸರ್ಕಾರವು ಹೊರಡಿಸಿರುವ ಲಾಕ್ ಡೌನ್  ಆದೇಶವನ್ನು ಉಲ್ಲಂಘಿಸಿ ಗುಂಪುಕಟ್ಟಿಕೊಂಡು ಬಂದು ಅವಾಚ್ಯವಾಗಿ ಬೈದು,ದೊಣ್ಣೆಗಳಿಂದ ಮೈಕೈಗೆ ಹೊಡೆದು ಕೊಲೆ ಬೆದರಿಕೆ ಹಾಕಿರುತ್ತಾರೆ. ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಆರೋಪಿತರುಗಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ   ಪೊಲೀಸ್ ಠಾಣೆ.

ದಿನಾಂಕ 02/06/2021 ರಂದು ಪಿರ್ಯಾದುದಾರರಾದ ಅರ್ಜುನ್ ರವರು ಚಿಕ್ಕಪ್ಪನಾದ ಸಬೀತಕುಮಾರ ರವರೊಂದಿಗೆ ಹಕ್ಕಿಪಿಕ್ಕಿ ಕಾಲೋನಿ ಸರ್ಕಲ್ ನಲ್ಲಿ ಮಾತನಾಡುತ್ತಾ ನಿಂತಿರುವಾಗ  ಅಲ್ಲಿಗೆ ಬಂದ ಕನ್ವರ್, ಸೀನಾ, ಗೌತಮಿ ರವರುಗಳು ಕೊವಿಡ್-19 ಸಂಬಂಧ ಸರ್ಕಾರವು ಹೊರಡಿಸಿರುವ ಲಾಕ್ ಡೌನ್  ಆದೇಶವನ್ನು ಉಲ್ಲಂಘಿಸಿ ಗುಂಪುಕಟ್ಟಿಕೊಂಡು ಬಂದು ಸೈಟಿನ ವಿಚಾರದಲ್ಲಿ ಸಬೀತ್ ಕುಮಾರ್ ನೊಂದಿಗೆ ಜಗಳ ತೆಗೆದು ನನಗೂ ಹಾಗೂ ನನ್ನ ಚಿಕ್ಕಪ್ಪ ಸಬೀತ್ ಕುಮಾರರವರಿಗೆ ಅವಾಚ್ಯವಾಗಿ ಬೈದು , ಕೈಯಿಂದ ಗುದ್ದಿ ನೋವುಂಟುಮಾಡಿರುತ್ತಾರೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಆರೋಪಿತರುಗಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಬಾಳೂರು  ಪೊಲೀಸ್ ಠಾಣೆ.

ದಿನಾಂಕ 02/06/2021 ರಂದು ಬಾಳೂರು ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ಜಾವಳಿ ಗ್ರಾಮದ ದೊಡ್ಡಿನಕೊಪ್ಪ ಹಳ್ಳದ ಬಳಿ ಮಲೆಮನೆ ಗ್ರಾಮದ ಬಿಳಿಯಪ್ಪ ಹಾಗೂ ರಾಮಪ್ಪ ಎಂಬುವವರು ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ  ಮೇರೆಗೆ ದಾಳಿ ನಡೆಸಿದ್ದು ನಮ್ಮಗಳನ್ನು ನೋಡಿ ಇಬ್ಬರು ಆಸಾಮಿಗಳು ಓಡಿಹೋಗಿರುತ್ತಾರೆ. ಓಡಿಹೋದ ಆಸಾಮಿಗಳ ಹೆಸರು ತಿಳಿಯಲಾಗಿ ಮಲೆಮನೆ ಗ್ರಾಮದ ಬಿಳಿಯಪ್ಪ ಹಾಗೂ ರಾಮಪ್ಪ ಎಂದು ತಿಳಿದುಬಂದಿರುತ್ತೆ.  ಆರೋಪಿಗಳು ಬಿಟ್ಟುಹೋಗಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ 500 ಎಂ.ಎಲ್ .ನಷ್ಟು ಕಳ್ಳಭಟ್ಟಿ ಹಾಗೂ ಮತ್ತೊಂದು ಬಿಳಿಬಣ್ಣದ ಕ್ಯಾನಿನಲ್ಲಿ 4 ಲೀಟರ್ನಷ್ಟು ಕಳ್ಳಭಟ್ಟಿ ಸಾರಾಯಿ ಇದ್ದು, ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು  ಮಾರಾಟ ಮಾಡುತ್ತಿದ್ದ  ಆರೋಪಿಗಳ  ವಿರುದ್ದ ಬಾಳೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಶ್ರೀಮತಿ.ರೇಣುಕಮ್ಮ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ 02/06/2021 ರಂದು ಮೂಡಿಗೆರೆ ಠಾಣಾ ಸರಹದ್ದಿನ ದಾರದಹಳ್ಳಿ ಗ್ರಾಮದಲ್ಲಿ ರೌಂಡ್ಸ್  ಮಾಡುತ್ತಿರುವಾಗ  ಒಂದು ಅಂಗಡಿ ಮುಂಭಾಗ ಸುಮಾರು ಜಿ.ಹೊಸಳ್ಳಿ ಗ್ರಾಮದಲ್ಲಿ ಪ್ರಕಾಶ್ ಎಂಬುವವರು ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ  ಕಳ್ಳಭಟ್ಟಿ ಮದ್ಯವನ್ನು ಇಟ್ಟುಕೊಂಡು ಮಾರಾಟ  ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಆರೋಪಿಯು ಓಡಿಹೋಗಿದ್ದು ಆತನ ಹೆಸರು ತಿಳಿಯಲಾಗಿ ಪ್ರಕಾಶ್ ಬಿನ್ ಲೇಟ್ ರಾಮೇಗೌಡ, ಜಿ.ಹೊಸಳ್ಳಿ ಗ್ರಾಮ ವಾಸಿಯಾಗಿದ್ದು, ಆತನು ಬಿಟ್ಟುಹೋಗಿದ್ದ 2 ಪ್ಲಾಸ್ಟಿಕ್ ಬಾಟಲಿಗಳನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ 2 ಲೀಟರ್ನಷ್ಟು ಕಳ್ಳಭಟ್ಟಿ ಹಾಗೂ ಇನ್ನೊಂದು ಪ್ಲಾಸ್ಟಿಕ್ ಬಾಟಲಿಯಲ್ಲಿ 2 ಕ್ವಾಟರ್ನಷ್ಟು ಕಳ್ಳಭಟ್ಟಿ ಸಾರಾಯಿ ಇದ್ದು, ಕಳ್ಳಭಟ್ಟಿ ಮದ್ಯದ ಅಂದಾಜು ಬೆಲೆ 360 ರೂ ಆಗಿರುತ್ತೆ. ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು   ಮಾರಾಟ ಮಾಡುತ್ತಿದ್ದ ಆರೋಪಿ  ಪ್ರಕಾಶ್ರವರ ವಿರುದ್ದ ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ ರವಿ.ಜಿ.ಎ.ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಲಕ್ಕವಳ್ಳಿ  ಪೊಲೀಸ್ ಠಾಣೆ

ದಿನಾಂಕ 01/06/2021 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ಲಕ್ಕವಳ್ಳಿ ಭದ್ರಾ ರೆಸಾರ್ಟ ಕಡೆಗೆ ಹೋಗುವ ರಂಗನಾಥಸ್ವಾಮಿ ದೇವಸ್ಥಾನದ  ಮುಂಭಾಗದ ಬನ್ನಿ ಮರದ ಕೆಳಗೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ರಂಗನಾಥಸ್ವಾಮಿ ದೇವಸ್ಥಾನದ  ಮುಂಭಾಗದ ಬನ್ನಿ ಮರದ ಕೆಳಗೆ ಕರ್ನಾಟಕ ಸರ್ಕಾರವು ಸಾಂಕ್ರಾಮಿಕ ರೋಗ ಹರಡದಂತೆ 2 ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರದಂತೆ ಆದೇಶಮಾಡಿದ್ದರೂ ಸಹ ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ  5 ಜನ ಆರೋಪಿಗಳ ಮೇಲೆ ದಾಳಿ ಮಾಡಿದ್ದು ಅದರಲ್ಲಿ 3 ಜನರನ್ನು ವಶಕ್ಕೆ ಪಡೆದಿದ್ದು , 2 ಜನರು ಓಡಿಹೋಗಿರುತ್ತಾರೆ. ಆರೋಪಿತರುಗಳ ವಶದಲ್ಲಿದ್ದ ಒಂದು ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳು ಹಾಗೂ 5000 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ.ಮೇಘ.ಟಿ.ಎನ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-06-2021 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080