ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಆಲ್ದೂರು  ಪೊಲೀಸ್ ಠಾಣೆ.

ದಿನಾಂಕ:03/07/2021 ರಂದು ಹಾಂದಿ ಗ್ರಾಮದಲ್ಲಿ ಗಸ್ತಿನಲ್ಲಿರುವಾಗ ಹಾಂದಿಗ್ರಾಮದ ಭದ್ರನಗರದ ವಾಸಿ ರಾಜುರವರು ತಮ್ಮ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆ ಬಳಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ  ದಾಳಿ ನಡೆಸಿದ್ದು ರಾಜುರವರು ತಮ್ಮ ಮನೆಯಬಳಿ ಇರುವ  ಕೊಟ್ಟಿಗೆ ಸಮೀಪ   ಒಂದು ಹಳದಿ ಪ್ಲಾಸ್ಟಿಕ್ ಕವರ್ ನ್ನು ಹಿಡಿದುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಪ್ಲಾಸ್ಟಿಕ್ ಕವರ್ ನ್ನು ಪರಿಶೀಲಿಸಲಾಗಿ 180 ಎಂ.ಎಲ್.ನ  ಕ್ಯಾಪ್ಟನ್ ಮಾರ್ಟಿನ್ ಸ್ಪೆಷಲ್ ವಿಸ್ಕಿಯ 24 ಮದ್ಯದ ಟೆಟ್ರಾಪೌಚ್ಗಳು ಹಾಗೂ 90 ಎಂ.ಎಲ್ ನ ವಿನ್ಡಸರ್ ಡಿಲೆಕ್ಸ್ ವಿಸ್ಕಿಯ 12 ಮದ್ಯದ ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 2107/- ರೂ ಆಗಿದ್ದು, ಆರೋಪಿತನಾದ ರಾಜುರವರ ವಿರುದ್ದ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶ್ರೀಮತಿ.ಶಿವರುದ್ರಮ್ಮ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಜಾನುವಾರು ಕಳ್ಳತನ &  ಜಾನುವಾರು ಹತ್ಯಾ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:03-07-2021 ರಂದು ಬಾಬು ಬಿನ್ ನಾಗೇಶ್, ಕಡುಬಗೆರೆ ದೇವದಾನ ಗ್ರಾಮ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 03-07-2021 ರಂದು  ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ತೋಟಕ್ಕೆ ಹೋಗುವಾಗ  ವಿಜಯಗಿರಿ ಎಸ್ಟೇಟ್ ಹತ್ತಿರ ಬಡಗನಹಡ್ಲು ಹಳ್ಳದ ಬಳಿ ರಸ್ತೆಯಲ್ಲಿ ಒಂದು ಕೆಎ-18-ಬಿ-8209 ಗೂಡ್ಸ್ ಆಟೋ ನಿಂತಿದ್ದು ಆಟೋದಿಂದ ಸ್ವಲ್ಪ ದೂರದಲ್ಲಿ ಹಳ್ಳದ ಬಳಿ ಬಿದಿರು ಪೊದೆ ಹತ್ತಿರ ಯಾರೋ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಚೀಲದ ಮೇಲೆ ಮರದ ತುಂಡನ್ನು ಇಟ್ಟುಕೊಂಡು ಮಾಂಸವನ್ನು ಕಡಿಯುತ್ತಿರುವುದನ್ನು ಕಂಡು ಹತ್ತಿರ ಹೋಗಿ ನೋಡಿದಾಗ, ಇಬ್ಬರು ವ್ಯಕ್ತಿಗಳು ಕಾಡಿನಲ್ಲಿ ಮೇಯಲು ಬಂದಿದ್ದ 01 ವರ್ಷ ಪ್ರಾಯದ ಕಂದು ಬಣ್ಣದ ಹೆಣ್ಣು ಕರುವನ್ನು ಹಿಡಿದು ಕತ್ತಿಯಿಂದ ಕಡಿದು ಮಾಂಸ ಮಾಡುತ್ತಿರುವುದನ್ನು ನಾನು ಕೂಡಲೇ ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದು ಅವರುಗಳು ಸ್ಥಳಕ್ಕೆ ಬಂದು ನೋಡಲಾಗಿ ಇಬ್ಬರು ವ್ಯಕ್ತಿಗಳು ಕಾಡಿನಲ್ಲಿ ಮೇಯಲು ಬಂದಿದ್ದ 01 ವರ್ಷ ಪ್ರಾಯದ ಕಂದು ಬಣ್ಣದ ಹೆಣ್ಣು ಕರುವನ್ನು ಕಳ್ಳತನದಿಂದ  ಹಿಡಿದು ಕತ್ತಿಯಿಂದ ಕಡಿದು ಮಾಂಸ ಮಾಡುತ್ತಿರುವುದು ಕಂಡುಬಂದಿದ್ದು ಆ ಇಬ್ಬರು ವ್ಯಕ್ತಿಗಳನ್ನು ಹಿಡಿದುಕೊಂಡು ಹೆಸರು ವಿಳಾಸ ತಿಳಿಯಲಾಗಿ 1) ಇಬ್ಬು @ ಇಬ್ರಾಹಿಂ, ವಾಸ ಕಡ್ಲೆಮಕ್ಕಿ ಎಂದು 2) ಮಹಮದ್ ಹನೀಫ್, ಕಡ್ಲೆಮಕ್ಕಿ , ಬಾಳೆಹೊನ್ನೂರು ವಾಸಿಗಳೆಂದು ತಿಳಿಸಿರುತ್ತಾರೆ.  01 ವರ್ಷ ಪ್ರಾಯದ ಹೆಣ್ಣು ಕರುವಿನ ಅಂದಾಜು ಬೆಲೆ 2000/- ರೂ ಗಳಾಗಿರುತ್ತೆ, ಇಬ್ರಾಹಿಂ ಹಾಗೂ ಮಹಮದ್ ಹನೀಫ್ ರವರು ಜಾನುವಾರುವನ್ನು ಕಳ್ಳತನದಿಂದ ಹಿಡಿದು ಕಡಿದು ಮಾಂಸ ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ.

ಹೆಂಗಸು ಕಾಣೆ ಪ್ರಕರಣ

ಶೃಂಗೇರಿ   ಪೊಲೀಸ್ ಠಾಣೆ .

ದಿನಾಂಕ 02.07.2021 ರಂದು ಪುಟ್ಟಪ್ಪ ಬಿನ್ ಲೇಟ್ ಮಂಜಪ್ಪಗೌಡ, ಶಿರೂರು ಗ್ರಾಮವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ನನಗೆ 02 ಜನ ಮಕ್ಕಳಿದ್ದು ಮೊದಲನೆಯವಳು ಪ್ರಣೀತಾ ಹಾಗೂ ಎರಡನೆಯವನು ಪ್ರಜ್ವಲ್ ಆಗಿದ್ದು , ಮಗಳು ಪ್ರಣೀತಾಳು ಶೃಂಗೇರಿಯ ಮೆಣಸೆ ಸರ್ಕಾರಿ ಕಾಲೇಜಿನಲ್ಲಿ ಬಿ,ಕಾಂ. ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ದಿನಾಂಕ 01-07-2021 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದು ನನ್ನ ಮಗಳು ಪ್ರಣೀತಾಳು ಸಹ ಜಗುಲಿಯ ಮೇಲೆ ಮಲಗಿರುತ್ತಾಳೆ. ರಾತ್ರಿ ಸುಮಾರು 11-00 ಗಂಟೆಗೆ ಎದ್ದು ನೋಡಲಾಗಿ ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ನೋಡಿದಾಗ ಅವಳು ಬಟ್ಟೆಯನ್ನು ಪ್ಯಾಕ್ ಮಾಡಿಕೊಂಡು ಮನೆಯಿಂದ ಕಾಣೆಯಾಗಿರುತ್ತಾಳೆ.  ನಾನು, ನನ್ನ ಹೆಂಡತಿ ಹಾಗೂ ಮಗ ಸೇರಿಕೊಂಡು   ಅಕ್ಕಪಕ್ಕದ ಮನೆಯವರಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ . ಆದ್ದರಿಂದ ಕಾಣೆಯಾಗಿರುವ  ಪ್ರಣೀತಾಳನ್ನು ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಶೃಂಗೇರಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ .

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 02-07-2021 ರಂದು ಪಿರ್ಯಾದುದಾರರಾದ ರೇವಣ್ಣರವರು ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 29-06-2021 ರಂದು ಬೆಳಿಗ್ಗೆ ನನ್ನ ಬಾಬ್ತು ಕೆಎ-66 ಇ-2938 ಸ್ಕೂಟಿಯಲ್ಲಿ ನನ್ನ ಮಗಳಾದ ಕಾವ್ಯಾಳನ್ನು ತರೀಕೆರೆಗೆ ಕರೆದುಕೊಂಡು ಬಂದು ಕೆಲಸ ಮುಗಿಸಿ ವಾಪಾಸ್ ಮದ್ಯಾಹ್ನ ಹಾದಿಕೆರೆ ರಸ್ತೆ ಲಕ್ಷ್ಮೀ ಸಾಗರ ತಿರುವಿನಲ್ಲಿ ಹೋಗುತ್ತಿರುವಾಗ ಹಾದಿಕೆರೆಯಿಂದ ಬಂದ ಕೆಎ-14 ಎ-1061 ಆಟೋ ಚಾಲಕ ತನ್ನ ವಾಹನವನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಕೂಟಿ ಸಮೇತ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದು ನನ್ನ ಮಗಳು ಕಾವ್ಯಾಳ ಬಲಗೈಗೆ ಪೆಟ್ಟಾಗಿ  ಮೂಳೆ ಮುರಿದಿರುತ್ತೆ. ಹಾಗೂ ನನಗೂ ಸಹ ಎಡಗೈ , ಎಡಗಾಲಿಗೆ ಪೆಟ್ಟಾಗಿದ್ದು ಆಟೋ ಚಾಲಕನ ಹೆಸರು, ವಿಳಾಸ ಸತೀಶ ಬಿನ್ ರಾಮಣ್ಣ , ಬಾಪೂಜಿ ಕಾಲೋನಿ, ತರೀಕೆರೆ ಟೌನ್ ವಾಸಿಯಾಗಿದ್ದು  ಆಟೋಚಾಲಕನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ .

ಸಖರಾಯಪಟ್ಟಣ  ಪೊಲೀಸ್ ಠಾಣೆ.

ದಿನಾಂಕ 02-07-2021 ರಂದು ಪಿರ್ಯಾದುದಾರರಾದ ಚನ್ನಪ್ಪರವರು  ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಮಗನಾದ ಅಕ್ಷಯ್ ಚಿಕ್ಕಮಗಳೂರಿನ ಬಜಾಜ್ ಪೈನಾನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಈ ದಿವಸ ತನ್ನ ಬಾಬ್ತು ಕೆಎ-18 ಇಸಿ-3882 ಹೊಂಡಾಶೈನ್ ಬಜಾಜ್ ಬೈಕಿನಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಕೆಲಸ ಮುಗಿಸಿ ವಾಪಾಸ್ ಮನೆಗೆ ಬರುತ್ತಿರುವಾಗ ಜೋಗಿಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಎದುರುಗಡೆಯಿಂದ ಬಂದ ಕೆಎ-66 0781 ಟಾಟಾ ಏಸಿ ವಾಹನದ ಚಾಲಕ  ತನ್ನ ವಾಹನವನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ  ಹೊಡೆಸಿದ ಪರಿಣಾಮ ಬೈಕ್  ಸಮೇತ ನನ್ನ ಮಗ ಕೆಳಗೆ ಬಿದ್ದಿದ್ದು ತಲೆಗೆ ಹಾಗೂ ಮೈಕೈಗೆ ಪೆಟ್ಟಾಗಿ ರಕ್ತಗಾಯವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ, ಅಪಘಾತ ಉಂಟುಮಾಡಿ ನನ್ನ ಮಗ ಅಕ್ಷಯ್ ನ ಸಾವಿಗೆ ಕಾರಣನಾದ ಟಾಟಾಏಸಿ ಚಾಲಕನ  ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 03-07-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080