ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 03/08/2021 ರಂದು ಮುಗುಳವಳ್ಳಿ ಗ್ರಾಮದ ವೀರಭದ್ರೇಶ್ವರ ದೇವಾಲಯದ ಎದುರಿನ ಅಂಗಡಿಯ ಮುಂಭಾಗದ ರಸ್ತೆಯಲ್ಲಿ  ರಟ್ಟಿನ ಬಾಕ್ಸ್ ನಲ್ಲಿ  ಮದ್ಯವನ್ನಿಟ್ಟುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಹಾಲಪ್ಪ ಹಾಗೂ ರಮೇಶ ರವರನ್ನು ವಶಕ್ಕೆ ಪಡೆದು ಆರೋಪಿತರುಗಳ ವಶದಲ್ಲಿದ್ದ 90 ಎಂ.ಎಲ್.ನ  ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 117 ಮದ್ಯದ ಟೆಟ್ರಾಪೌಚ್ಗಳನ್ನು ವಶಕ್ಕೆ ಪಡೆದಿದ್ದು,  ಮದ್ಯದ ಅಂದಾಜು ಬೆಲೆ 4110/- ರೂ ಆಗಿದ್ದು , ಆರೋಪಿತನಾದ ಹಾಲಪ್ಪ ಹಾಗೂ  ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿಎಸ್ಐ ಮಹಾಂತೇಶ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಬಾಳೂರು ಪೊಲೀಸ್ ಠಾಣೆ

ದಿನಾಂಕ 02/08/2021 ರಂದು ಮದ್ಯಾಹ್ನ 04-30 ಗಂಟೆ ಸಮಯದಲ್ಲಿ ನಿಡುವಾಳೆ ಗ್ರಾಮದ ವಾಟೇಖಾನ್ ನಲ್ಲಿರುವ ಸುರೇಶ್ ಎಂಬುವವರ ಮನೆಯ ಹಿಂಭಾಗದ  ಕಾಫಿ ತೋಟದ ಹತ್ತಿರ  ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಜೂಜಾಡುತ್ತಿದ್ದ 7 ಜನರನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಟಾರ್ಪಲ್ , ಹಾಗೂ 2200 /- ರೂ ನಗದು ಹಣವನ್ನು  ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ  ಬಾಳೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ರೇಣುಕಮ್ಮ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ 02-08-2021 ರಂದು ಮನುಸತ್ಯನ್ ರವರು ತನ್ನ ಗೆಳೆಯನಾದ ಸಂತೋಷ( ಅನ್ನಿ) ರವರನ್ನು ಕುದುರೆಗುಂಡಿ ಗ್ರಾಮಕ್ಕೆ ಬಿಟ್ಟುಬರಲು ರಾಜೇಂದ್ರರವರ ಬಾಬ್ತು ಕೆಎ-18 ಇಜಿ- 3108 ಬೈಕಿನಲ್ಲಿ  ರಾತ್ರಿ 08-30 ಗಂಟೆ ಸಮಯದಲ್ಲಿ ಕೊಪ್ಪ- ನ.ರಾ.ಪುರ ರಸ್ತೆಯ ರಾಧಾಕೃಷ್ಣರವರ ಮನೆಯ ಮುಂದಿನ ಟಾರು ರಸ್ತೆಯಲ್ಲಿ ಬರುತ್ತಿರುವಾಗ ಬೈಕನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎದುರಿಗೆ ಬಂದ ಎಮ್ಮೆಗೆ ಡಿಕ್ಕಿ ಹೊಡೆಸಿದ ಪರಿಣಾಮ  ಮನುಸತ್ಯನ್ ರವರ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾಗಿರುತ್ತದೆಂದು  ನೀಡಿದ ದೂರಿನ ಮೇರೆಗೆ ಕೊಪ್ಪ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 03-08-2021 07:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080