ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:03-01-2022 ರಂದು  ಪಿರ್ಯಾದಿ ಮಂಜಪ್ಪ ಇವರು ನೀಡಿದ ದೂರಿನಲ್ಲಿ  ದಿನಾಂಕ:03-01-2022 ರಂದು ಪಿರ್ಯಾದಿಯವರ  ತಮ್ಮ ಶೇಖರಪ್ಪ ರವರು ಈ ದಿನ ಬೆಳಿಗ್ಗೆ 10-15 ಗಂಟೆ ಸಮಯದಲ್ಲಿ ತಮ್ಮ ಬಾಬ್ತು ಕೆಎ-18-ಇಡಿ-9352 ಬೈಕಿನಲ್ಲಿ ತರೀಕೆರೆ ಕಡೆಯಿಂದ ಭದ್ರಾವರತಿ ಕಡೆಗೆ ಹೋಗುತ್ತಿರುವಾಗ ಬೈಕಿ ನ ಹಿಂದೆ ಯಾವುದೋ ಅಪರಿಚಿತ ವಾಹನದ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಪಿರ್ಯಾದಿ ತಮ್ಮನ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಬಿದ್ದು ಶೇಖರಪ್ಪ ನಿಗೆ ತಲೆಗೆ ತೀವ್ರ ರಕ್ತಗಾಯವಾಗಿ ಶೇಖರಪ್ಪನು ಅಸಪತ್ರೆಗೆ ಚಿಕಿತ್ಸೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಮನುಷ್ಯ ಕಾಣೆ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

 ದಿನಾಂಕ;03-01-2022 ರಂದು ಪಿರ್ಯಾದಿ ಆದರ್ಶ ಸಿ.ಬಿನ್. ಲೇಟ್ ಸುರೇಶ್ ಗೌಡ ನಾರಾಯಣಪುರ ಬಸವನಹಳ್ಳಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ತಾಯಿ ಸುಶೀಲಮ್ಮ ಕೋಂ ಲೇಟ್ ಸುರೇಶ್  ಇವರು ದಿನಾಂಕ:31-12-2021 ರಂದು ಮದ್ಯಾಹ್ನ 12.30 ಸಮಯದಲ್ಲಿ ಮನೆಯಿಂದ ಹೊರಗಡೆ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಈವರೆಗೂ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆ ಯಾಗಿಲ್ಲವೆಂದು ಕಾಣೆಯಾಗಿರುವ ಸುಶೀಲಮ್ಮ, 60 ವರ್ಷ ಪ್ರಾಯ, 5.00 ಅಡಿ ಎತ್ತರ, ದುಂಡುಮುಖ, ಕಪ್ಪುಮಿಶ್ರೀತ ಬಣ್ಣ ಸಾದಾರಣ ಮೈಕಟ್ಟು ಕೆಂಪು ಸೀರೆ ಕೆಂಪು ಬಣ್ಣದ ಸ್ವೆಟರ್ ಒಂದು ಬಿಳಿ ಬಣ್ಣದ ಟವಲ್ ಧರಿಸಿರುತ್ತಾರೆ. ಕಾಣೆಯಾಗಿರುವ ತಮ್ಮ ತಾಯಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಳ್ಳತನ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

 ದಿನಾಂಕ03-01-2022 ರಂದು ಅಜ್ಜಂಪುರ ಪಟ್ಟಣ ವಾಸಿ ಮಹೇಂದ್ರಪ್ಪ  ಸಿ.ಕೆ. ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಬಾಭ್ತು ಕೆಎ-18-ಎಲ್ 1699 ಹಿರೋಹೊಂಡಾ ಸ್ಲೆಂಡರ್ ಪ್ಲಸ್ ಬೈಕ್ ನ್ನು ದಿನಾಂಕ 02-01-2022 ರಂದು ರಾತ್ರಿ ಮನೆಯ ಪೋಟಿಕಾದಲ್ಲಿ ನಿಲ್ಲಿಸಿದ್ದು  ಈ  ದಿನ ಬೆಳಿಗ್ಗೆ ಎದ್ದು ನೋಡಲಾಗಿ  ನಿಲ್ಲಿಸಿದ್ದ  ಕೆಎ-18-ಎಲ್ 1699 ಹಿರೋಹೊಂಡಾ ಸ್ಲೆಂಡರ್ ಪ್ಲಸ್ ಬೈಕ್ ನ್ನು  ಯರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾಗಿರುವ ಬೈಕ್ ನ್ನು  ಪತ್ತೆ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುವ ವ್ಯಕ್ತಿಯ ಮೇಲೆ ಕಾನೂನು ರೀತಿಯ ಕ್ರಮ ಜರೂಗಿಸುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಇತ್ತೀಚಿನ ನವೀಕರಣ​ : 03-01-2022 07:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080