ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ  ಪ್ರಕರಣ

ಯಗಟಿ  ಪೊಲೀಸ್ ಠಾಣೆ.

ದಿನಾಂಕ:02-02-2022 ರಂದು ಮದ್ಯಾಹ್ನ ಯಗಟಿ ಠಾಣಾ ಸರಹದ್ದಿನ ಕೆಇಬಿ ಎಂ.ಎಸ್. ಹಿಂಭಾಗ ಸರ್ಕಾರಿ ಜಾಗದಲ್ಲಿ  ಗ್ರಾಮದಲ್ಲಿರುವ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 1] ಶಿವ ಬಿನ್ ಚಂದ್ರಪ್ಪ ಕೆ.ಹೆಚ್. 2] ರವಿಕುಮಾರ ಬಿನ್ ರಾಮಪ್ಪ 3] ಗಂಗಾಧರಪ್ಪ ಬಿನ್ ಸಿದ್ದಲಿಂಗಪ್ಪ 4] ಮೂರ್ತಿ ಬಿನ್ ಪರಮೇಶ್ವರಪ್ಪ 5] ನಟರಾಜು ಬಿನ್ ತಿಮ್ಮಪ್ಪ ರವರನ್ನು ವಶಕ್ಕೆ ಪಡೆದುಕೊಂಡಿದ್ದು ಜೂಜಾಟಕ್ಕೆ ಅರೋಪಿತರು ಉಪಯೋಗಿಸಿದ 8040/- ರೂ ನಗದು ಹಣವನ್ನು 52 ಇಸ್ಪೀಟ್ ಎಲೆಗಳು , ನೀಲಿಬಣ್ಣದ ಟವಲ್ ಅನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತರ ವಿರುದ್ದ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಬೀರೂರು ವೃತ್ತ ನಿರೀಕ್ಷಕರಾದ ಶ್ರೀ ಶಿವಕುಮಾರ್. ಕೆ.ಎಂ. ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ತರೀಕೆರೆ ಪೊಲೀಸ್ ಠಾಣೆ

ದಿನಾಂಕ:02-02-2022 ರಂದು ಮದ್ಯಾಹ್ನ ತರೀಕೆರೆ ಠಾಣಾ ಸರಹದ್ದಿನ ಗಾಳಿಹಳ್ಳಿ ಕ್ರಾಸ್ ಬಳಿ ಇರುವ  ರಾಮಣ್ಣನ ಕೆರೆ ಪಕ್ಕದ ಸರ್ಕಾರಿ ಖಾಲಿ ಜಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 1] ಸಲೀಂ ಬಿನ್ ಬಾಷಾ ಸಾಬ್ 2] ಅಲ್ಬಾಜ್ ಬಿನ್ ಮಹಮದ್ ರಫೀ 3] ಜಬೀವುಲ್ಲಾ ಬಿನ್ ಸನಾವುಲ್ಲಾ , 4] ಜಾಫರ್ ಬಿನ್ ಮಹಮ್ಮದ್ ರಫೀ 5] ನಿಸಾರ್ ಅಹಮದ್ಮ ಬಿನ್ ಅಬ್ದುಲ್ ಸತ್ತರ್ 6] ಅಲ್ಲಾಭಕ್ ಬಿನ್ ಮೊಹಬೂಬ್ ಸಾಬ್ 7] ಮಂಜು ಬಿನ್ ರಾಜಪ್ಪ 8] ಅಬ್ಬಾಸ್ ಬಿನ್ ಮುಸ್ತಾಪ 9] ಬಾಬು ಬಿನ್ ಖಲಂದರ್ ಸಾಬ್ 10] ಸೈಯದ್ ಅಬ್ದುಲ್ ಬಿನ್ ಜಾನಿ ತರೀಕೆರೆ ವಾಸಿಗಳು  ರವರನ್ನು ವಶಕ್ಕೆ ಪಡೆದುಕೊಂಡಿದ್ದು ಜೂಜಾಟಕ್ಕೆ ಅರೋಪಿತರು ಉಪಯೋಗಿಸಿದ 8500/- ರೂ ನಗದು ಹಣವನ್ನು 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಕವರ್  ಅನ್ನು ಅಮಾನತ್ತು ಪಡಿಸಿಕೊಂಡು, ಬಂದು ಅರೋಫಿತರ ವಿರುದ್ದ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಶ್ರೀ ರಾಘವೇಂದ್ರ , ಪಿ.ಎಸ್.ಐ. ಕೃಷ್ಣಾನಾಯ್ಕ  ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ

ದಿನಾಂಕ:02-02-2022 ರಂದು ಮದ್ಯಾಹ್ನ ಕಡೂರು ಠಾಣಾ ಸರಹದ್ದಿನ ಚಿಕ್ಕಂಗಳ ಗ್ರಾಮ ಸಮೀಪ ಒಂದು ಹುಣಸೆ ಕೆಳಗೆ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 1] ಉಮೇಶ ಬಿನ್ ಬಸವನಾಯ್ಕ 2] ಸೋಮ್ಲ ನಾಯ್ಕ ಬಿನ್ ಲೇ: ಕೇಮ್ಯಾನಾಯ್ಕ ಇವರನ್ನು ವಶಕ್ಕೆ ಪಡೆದುಕೊಂಡಿದ್ದು 3] ಶ್ರೀನಿವಾಸ ನಾಯ್ಕ ಬಿನ್ ಚಂದ್ರಾನಾಯ್ಕ 4] ಮಂಜಾನಾಯ್ಕ ಬಿನ್ ಲೇ: ಮಲ್ಲೇಶ್ ನಾಯ್ಕ 5} ಮಲ್ಲೇಶನಾಯ್ಕ ಬಿನ್ ಹೊನ್ನಾನಾಯ್ಕ  ರವರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ಜೂಜಾಟಕ್ಕೆ ಅರೋಪಿತರು ಉಪಯೋಗಿಸಿದ 8400/- ರೂ ನಗದು ಹಣವನ್ನು 52 ಇಸ್ಪೀಟ್ ಎಲೆಗಳು, ಒಂದು ಕಪ್ಪುಬಣ್ಣದ ಟಾರ್ಪಲ್   ಅನ್ನು ಅಮಾನತ್ತು ಪಡಿಸಿಕೊಂಡು, ಬಂದು ಅರೋಫಿತರ ವಿರುದ್ದ ಕಡೂರು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್ಐ. ಶ್ರೀಮತಿ ರಮ್ಯ ಎನ್.ಕೆ. ಮತ್ತು  ಸಿಬ್ಬಂದಿಯವರಾದ ಚಂದ್ರಶೇಖರ, ಸಿ.ಟಿ. ರಮೇಶ್, ಓಂಕಾರ ಮತ್ತು ಹಾಲೇಶ್  ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ

ದಿನಾಂಕ 02-02-2022 ರಂದು ಮೂಡಿಗೆರೆ ಛತ್ರಮೈದಾನ ವಾಸಿ ರತ್ನ ಬಿ.ಹೆಚ್. ಬಿನ್ ಲೇಟ್ ಮಹಾಲಿಂಗಂ  ರವರು ನೀಡಿದ ದೂರಿನಲ್ಲಿ ದಿನಾಂಕ;22-12-2021 ರಂದು ಪಿರ್ಯಾದಿ ಬಾಭ್ತು ಕೆಎ-18-ಇಜಿ-0325  ಟಿವಿಎಸ್ ಜ್ಯೂಪಿಟರ್ ಸ್ಕೂಟಿಯನ್ನುಮನೆಯ ಮುಂದೆ ನಿಲ್ಲಿಸಿ ಹೋಗಿದ್ದು ನಂತರ ದಿನಾಂಕ 26/12/2021 ರಂದು ಬಂದು ನೋಡಿದಾಗ ಸದರಿ ಸ್ಕೂಟಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಸ್ಕೂಟಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ ;03-02-2022 ರಂದು ಪಿರ್ಯಾದಿ ಭದ್ರೇಗೌಡ ಬಿನ್ ಲೇಟ್ ಬಸವೇಗೌಡ ಇವರು ನೀಡಿದ ದೂರಿನಲ್ಲಿ ದಿನಾಂಕ 03-02-2022 ರಂದು ಬೆಳಿಗ್ಗೆ ಪಿರ್ಯಾದಿ ಮಗಳು ಚಂದನ್ ಎಂ. ಬಿ. ಇವಳು  ಮನೆಯಿಂದ  ಹೊಗಿದ್ದು ವಾಪಾಸ್ಸು ಈ ವರೆಗೂ ಮನೆಗೆ ಬಂದಿಲ್ಲವೆಂದು ಕಾಣೆಯಾಗಿರುತ್ತಾಳೆಂದು ಕಾಣೆಯಾಗಿರುವ ಚಂದನ್ , 26 ವರ್ಷ , ದುಂಡುಮುಖ , ಬಿಳಿ ಮೈ ಬಣ್ಣ, 5 ಅಡಿ 8 ಇಂಚು ಎತ್ತರ , ಎಂ.ಎ. ವಿದ್ಯಾಬ್ಯಾಸ , ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಕಡೂರು  ಪೊಲೀಸ್ ಠಾಣೆ.

ದಿನಾಂಕ:02-02-2022 ರಂದು ಕಡೂರು ಠಾಣಾ ಸರಹದ್ದಿನ ಸೇವಾಪುರ ತಂಡ್ಯ ದೊಡ್ಡಹಟ್ಟಿ ವಾಸಿ ಮಲ್ಲಿಕಾರ್ಜುನಾ ವಿನ್ ಚನ್ನಾಚಾರಿ  ಈತನು ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 30 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1053/- ರೂ ಅಗಿದ್ದು, ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಶ್ರೀಮತಿ ರಮ್ಯ ಎನ್.ಕೆ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 03-02-2022 05:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080