ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ. 

ಬೀರೂರು ಪೊಲೀಸ್ ಠಾಣೆ.

ದಿನಾಂಕ:03/03/2022 ರಂದು ಪಿರ್ಯಾದಿ ಕುಮಾರಸ್ವಾಮಿ ಬಿನ್ ಲೇಟ್ ಗೋವಿಂದಪ್ಪ ಜೋಡಿತಿಮ್ಮಾಫುರ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;02/03/2022 ರಂದು ಪಿರ್ಯಾದಿ ಅಣ್ಣ ತಿಮ್ಮಾರಾಯಪ್ಪ  ಕೆಎ-66 ಜೆ-0740 ಬೈಕಿನಲ್ಲಿ ಜೋಡಿತಿಮ್ಮಾಫುರ ಗ್ರಾಮದಿಂದ ಬೀರೂರು ಬರುತ್ತಿರುವಾಗ ಬೀರೂರು ತ್ರೀನೇತ್ರ ಕಲ್ಯಾಣ ಮಂಟಪ್ಪದ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-35 ಎಫ್-374 ಬಸ್ ಚಾಲಕ  ಬಸ್ಸನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಿಮ್ಮಾರಾಯಪ್ಪ ಚಾಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ  ತಿಮ್ಮಾರಾಯಪ್ಪನಿಗೆ ರಕ್ತಗಾಯವಾಗಿದ್ದು  ಸದರಿ ಅಪಘಾತಕ್ಕೆ ಕಾರಣವಾಗಿರುವ  ಕೆಎ-35 ಎಫ್-374 ಬಸ್ ಚಾಲಕ  ಚಂದ್ರಶೇಖರ ರವರ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:03/03/2022 ರಂದು ಪಿರ್ಯಾದಿ ಅನ್ನಪೂರ್ಣ ಕೋಂ ಕೃಷ್ಣಯ್ಯ ಸೀಗೋಡು ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;01/03/2022 ರಂದು ಪಿರ್ಯಾದಿ ಮಗ ಉಮೇಶನು ತನ್ನ ಸ್ನೇಹಿತ ಶ್ರೀನಾಥನ ಬಾಬ್ತು   ಕೆಎ-14-ಇಇ-2369 ನಂಬರಿನ ಬೈಕಿನಲ್ಲಿ ಬೈರಮಕ್ಕಿಗೆ ಚೇತನ್ ನನ್ನು ಕೂರಿಸಿಕೊಂಡು ಬಾಳೆಹೊನ್ನೂರು ಎಲೇಕಲ್ ಹತ್ತಿರ ರಾತ್ರಿ ಸುಮಾರು 10.00 ಗಂಟೆ ಸಮಯದಲ್ಲಿ ಬರುತ್ತಿರುವಾಗ ಉಮೇಶನು ಬೈಕ್ ನ್ನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದಿದ್ದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೂ ಪೆಟ್ಟಾಗಿದ್ದು  ಬೈಕ್ ಚಾಲಕ ಉಮೇಶನಿಗೆ ಹೆಚ್ಚಿನ ಪೆಟ್ಟಾಗಿ ಶಿವಮೊಗ್ಗ ಮೇಘನಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದು ಆಪಘಾತಕ್ಕೆ ಕಾರಣನಾದ ಚಾಲಕ  ಉಮೇಶರವರ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 03-03-2022 08:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080