ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:03/04/2022 ರಂದು ಪಿರ್ಯಾದಿ ಶ್ರೀ ಸತೀಶ ಬಿನ್ ಮೇಘರಾಜ, ವಾಸ ಚಿಕ್ಕಿಂಗಳ ಗ್ರಾಮ  ವಾಸಿ  ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಬಾವ ಯಧು@ ಯಶುಪಾಲ ಇವರು ಸಖರಾಯಪಟ್ಟಣದ ಮಧು ರವರ ಅಕ್ಷಯ ವೈನ್ಸ್ ನಲ್ಲಿ ಕ್ಯಾಷಿಯರ್ ಅಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:02/04/2022 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಯಧು@ ಯಶುಪಾಲ ವೈನ್ಸ್ ಶಾಪ್ ನಲ್ಲಿ  ಕೆಲಸ ಮಾಡಿಕೊಂಡಿದ್ದಾಗ, ಶ್ರೀಧರ, ಯತೀಶ , ರಘು , ಪ್ರಕಾಶ್ , ಮಂಜುನಾಥ ಮತ್ತು ಸಂಜಯ್ ರವರು ಬಂದು ಬೀರು ಬಾಟಲಿಗಳ ಚಿಲ್ಲರೆ ಹಣದ ವಿಚಾರದಲ್ಲಿ ಕ್ಯಾಷಿಯರ್ ಲಕ್ಷ್ಮೀಶನೊಂದಿಗೆ  ಜಗಳ ಮಾಡಿಕೊಂಡಿದ್ದು, ನಂತರ ಇದೇ ಸಿಟ್ಟಿನಿಂದ ಅಂಗಡಿ ಮುಂದೆ ನಿಂತಿದ್ದ ಬೈಕ್ ನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದು ಅದನ್ನು ಕೇಳಲು ಹೋದ ಯಧು@ ಯಶುಪಾಲನಿಗೆ, ಎಲ್ಲರೂ ಬೈದು ಕೈಯಿಂದ ತಳ್ಳಾಡಿ, ಇವನು ಗಾಂಚಲಿ ಮಾಡುತ್ತಿದ್ದಾನೆ. ಒಂದು ಗತಿ ಕಾಣಿಸಿ ಬಿಡೋಣಾ ಎಂದು ಯಧು@ ಯಶುಪಾಲ ನಿಗೆ ಎದೆಗೆ ಹಾಗೂ ಮೈ ಕೈ ಗೆ ಮುಷ್ಠಯಿಂದ ಹೊಡೆದು ಹೋಗಿದ್ದು ಯಧು@ ಯಶುಪಾಲ  ಮನೆಗೆ ಬಂದಾಗ ಎದೆ ನೋವು ಜಾಸ್ತಿಯಾಗಿದ್ದು ಚಿಕ್ಕಮಗಳೂರು ಅಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಹಾಸನಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು  ಯಧು@ ಯಶುಪಾಲ  ಸಾವಿಗೆ ಕಾರಣರಾದವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ; 03/04/2022 ರಂದು ಪಿರ್ಯಾದಿ ಚಂದ್ರನಾಯ್ಕ ಟಿ.ಜಿ. ಬಿನ್ ಲೇಟ್ ಗೋವಿಂದನಾಯ್ಕ 60 ಅಡಿ ರಸ್ತೆ, ನೆಹರು ನಗರ, ಚಿಕ್ಕಮಗಳೂರು ರವರು ನೀಡಿದ ದೂರಿನಲ್ಲಿ ದಿನಾಂಕ 01/04/2022 ರಂದು ಶುಕ್ರವಾರ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ; 02/04/2022 ರಂದು ಸಂಜೆ 6.00 ಗಂಟೆಗೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಕಬ್ಬಿಣದ ಸೇಪ್ಟಿ ಬಾಗಿಲನ್ನು ಮತ್ತು ಮರದ ಮುಖ್ಯ ಬಾಗಿಲನ್ನು ಒಡೆದು ಎರಡು ಇಂಟರ್ ಲಾಕ್ ಗಳನ್ನು ಮುರಿದು ಮನೆಯಲ್ಲಿದ್ದ ವಾಪಲ್ ರೂಫ್ ಬೀಗವನ್ನು ಮುರಿದು ಬ್ಯಾಗ್ ನಲ್ಲಿ ಇರಿಸಿದ್ದ ಸುಮಾರು 284 ಗ್ರಾಂ ತೂಕದ ಚಿನ್ನದ ವಡವೆಗಳು, 150 ಗ್ರಾಂ ತೂಕದ ಬೆಳ್ಳಿಯ ವಡವೆ ಮತ್ತು 10,000/- ರೂ ನಗದು ಹಣವನ್ನು ಒಟ್ಟು 13,10,000/- ರೂ ಗಳ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದ್ದರಿಂದ ಕಳ್ಳರನ್ನು ಪತ್ತೆ ಹಚ್ಚಿ ಕಳುವಾಗಿರುವ ಸ್ವತ್ತುಗಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಯಗಟಿ ಪೊಲೀಸ್ ಠಾಣೆ.

ದಿನಾಂಕ:03/04/2022 ರಂದು ಯಗಟಿ ಠಾಣಾ ಸರಹದ್ದಿನ ಬಿಸಲೆರೆ ಗ್ರಾಮದ ವಾಸಿ ಮಂಜುನಾಥ ಬಿನ್ ಗೋವಿಂದಪ್ಪ ಇವರು ಬಿಸಲೆರೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿತನ ವಶದಲ್ಲಿದ್ದ 90 ಎಂ.ಎಲ್. ನ 52 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ 1826/- ಅಗಿದ್ದು,   ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಶಿಕುಮಾರ್ ವೈ ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಮನುಷ್ಯ ಕಾಣೆ ಪ್ರಕರಣ.

ಲಿಂಗದಹಳ್ಳಿ  ಪೊಲೀಸ್ ಠಾಣೆ.

ದಿನಾಂಕ:03/04/2022 ರಂದು ಪಿರ್ಯಾದಿ ನರಸಿಂಹಪ್ಪ ಬಿನ್ ಗೋವಿಂದಪ್ಪ ವಾಸ ನಾಗಗೊಂಡನಹಳ್ಳಿ ಗ್ರಾಮ, ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ತಂಗಿ ನೇತ್ರಾವತಿ ಇವಳು ಲಿಂಗದಹಳ್ಳಿ ಗ್ರಾಮದ ಬೀರೂರು ರಸ್ತೆಯಲ್ಲಿನ ತನ್ನ ಗಂಡ ಮಹಾಲಿಂಗಪ್ಪನ  ಮನೆ ವಾಸಿವಾಗಿದ್ದು ದಿನಾಂಕ;02/04/2022 ರಂದು ಮನೆಯಲ್ಲಿ ಮಹಾಲಿಂಗಪ್ಪನೊಂದಿಗೆ ಇದ್ದವಳು ತನ್ನ ಮಗಳು ಮಾನ್ವಿಯನ್ನು ಸಹ ಕರೆದುಕೊಂಡು ಮನೆಯಿಂದ ಹೋಗಿದ್ದು, ಈ ವರೆಗೂ ಎಲ್ಲಾ ಕಡೆಯಲ್ಲಿಯೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ತನ್ನ ತಂಗಿ ನೇತ್ರಾವತಿ ಮತ್ತು ತಂಗಿ ಮಗಳು ಮಾನ್ವಿಯನ್ನು  ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ.

ದಿನಾಂಕ:03/04/2022 ರಂದು ಪಿರ್ಯಾದಿ ಶ್ರೀಮತಿ ವಸಂತ ಕೋಂ ಹೊನ್ನಪ್ಪ, ಬಳ್ಳಿಗನೂರು ಗ್ರಾಮ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳು ಕು; ಸಹಾನಾ ಇವಳು ಕಡೂರು ಪಟ್ಟಣದ ವೆಂಕಟೇಶ್ವರ ನಗರದ ವಾಸಿ ತನ್ನ ಅಣ್ಣ ಪರಮೇಶ ರವರು ಮನೆಯಲ್ಲಿ ಇದ್ದವಳು ದಿನಾಂಕ:31/03/2022 ರಂದು ರಂದು ಬೆಳಿಗ್ಗೆ ಟೈಲರಿಂಗ್ ಕಲಿಯಲು ಹೋದವಳು  ನಂತರ ಮನೆಗೆ ಬಾರದೇ ಕಾಣೆಯಾಗಿದ್ದು ಈ ವರೆಗೂ ಎಲ್ಲಾ ಕಡೆಯಲ್ಲಿಯೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಕು;ಸಹನಾ ಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:03/04/2022 ರಂದು ಪಿರ್ಯಾದಿ ತಿಪ್ಪೇಶಪ್ಪ ಬಿನ್ ತಿಮ್ಮಯ್ಯ  ವಾಸ ಗಡಿಗಿರಿಯಾಪುರ ಗ್ರಾಮ, ಅಜ್ಜಂಪುರ ತಾಲ್ಲೋಕು ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳು ರಂಜಿತಾಳು ಇವಳು ದಿನಾಂಕ;02/04/2022 ರಂದು ರಾತ್ರಿ ಮನೆಯಲ್ಲಿ ಪಿರ್ಯಾದಿಯೊಂದಿಗೆ ಇದ್ದವಳು ಬೆಳಿಗ್ಗೆ ಎದ್ದು ನೋಡಲಾಗಿ ಮನೆಯಲ್ಲಿ ಇರಲಿಲ್ಲ, ಈ ವರೆಗೂ ಎಲ್ಲಾ ಕಡೆಯಲ್ಲಿಯೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ರಂಜಿತಾ, 19 ವರ್ಷ, 5.0 ಅಡಿ ಎತ್ತರ, ದುಂಡುಮುಖ, ಧೃಡಕಾಯ ಶರೀರ, ಆಕಾಶ ನೀಲಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 03-04-2022 08:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080