ಅಭಿಪ್ರಾಯ / ಸಲಹೆಗಳು

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ;02/07/2022 ರಂದು ಪಿರ್ಯಾದುದಾರರಾದ ರಾಮು ಎ. ಎ ಬಿನ್ ಲೇಟ್ ಅಪ್ಪು ಕುನ್ನಿ ವಾಸ ಲಕ್ಷ್ಮೀಪುರ ಗೋಣಿಬೀಡು ಗ್ರಾಮ ಕಡೂರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;02/07/2022 ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ಪಿರ್ಯಾದುದಾರರ ಮಗ ರಕ್ಷಿತ್  ತನ್ನ ಬಾಬ್ತು ಕೆಎ.-18 ಇಜಿ-2544 ನಂಬರಿನ ಹೊಂಡಾ ಶೈನ್ ಬೈಕ್ ಚಾಲನೆ ಮಾಡಿಕೊಂಡು ಮೂಡಿಗೆರೆ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಟಿಂಬರ್ ತುಂಬಿದ್ದ ಟ್ರೈಲರ್ ಟ್ಯಾಕ್ಟರ್ ಚಾಲಕನು ರಸ್ತೆಯಲ್ಲಿ ಯವುದೇ ಸೂಚನೆ ಹಾಗೂ ಮುಂಜಾಗ್ರತೆ ಕ್ರಮ ವಹಿಸದೇ ನಿರ್ಲಕ್ಷತನದಿಂದ ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ಬೈಕ್ ಚಾಲಕ ಟ್ಯಾಕ್ಟರ್ ನ ಟ್ರೈಲರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.  ಅಪಘಾತಕ್ಕೆ ಕಾರಣವಾದ ಟ್ಯಾಕ್ಟರ್ ಚಾಲಕ ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;02/07/2022 ರಂದು ಪಿರ್ಯಾದುದಾರರಾದ ಪ್ರಶಾಂತ ಬಿನ್ ರಾಜಪ್ಪ , ವಾಸ ಕೋಡಿ ಕ್ಯಾಂಪ್ ತರೀಕೆರೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;02/07/2022 ರಂದು ಸಂಜೆ ಸಮಯದಲ್ಲಿ ಪಿರ್ಯಾದುದಾರರ ಹೆಂಡತಿ  ಮತ್ತು ಮಗ ಕನುಷ್ 3 ಜನ ಕೆಎ-11- ಈಈ-9085 ರ ಅಕ್ಟೀವ್ ಹೊಂಡಾನಲ್ಲಿ  ಚಾಲನೆ ಮಾಡಿಕೊಂಡು ಬೆಟ್ಟದತಾವರೆಕೆರೆ ಮುಂದೆ ಹೋಗುತ್ತಿರುವಾಗ ಕೆಎ-18- ಡಬ್ಲ್ಯೂ-8420 ರ ಬೈಕ್ ಚಾಲಕ  ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಕ್ಟೀವ್ ಹೊಂಡಾಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿಗೆ , ಪಿರ್ಯಾದಿ ಅಣ್ಣನಿಗೆ ಹಾಗೂ ಮಗನಿಗೆ ಪೆಟ್ಟಾಗಿದ್ದು, ಬೈಕ್ ಚಾಲಕನಿಗೂ ಪೆಟ್ಟಾಗಿ ಬೈಕ್ ಚಾಲಕನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯೆದಲ್ಲಿ  ಮೃತಪಟ್ಟಿರುತ್ತಾನೆ.  ಅಪಘಾತಕ್ಕೆ ಕಾರಣವಾದ ಬೈಕ್ ಚಾಲಕ ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕಸ್ಮಿಕ ಸಾವು ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ:02/07/2022 ರಂದು ಬಿ.ಅರ್. ಬಸವರಾಜಪ್ಪ ಬಿನ್ ಲೇಟ್ ರಾಮಪ್ಪ ವಾಸ ಬಗ್ಗವಳ್ಳಿ ಗ್ರಾಮ ಅಜ್ಜಂಫುರ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗ ದೇವರಾಜ ಬೀರೂರಿನಲ್ಲಿ ಮೆಸ್ಕಾಂ ನಲ್ಲಿ ಪವರ್ ಮ್ಯನ್ ಅಗಿ ಕೆಲಸ ಮಾಡುತ್ತಿದ್ದು ದಿನಾಂಕ;02/07/2022 ರಂದು ಸಂಜೆ ಹೆಳವರ ಹಟ್ಟಿ ಗ್ರಾಮದಲ್ಲಿ ಅಡಿಕೆ ತೋಟದಲ್ಲಿ ಅಡಿಕೆ ಮತ್ತು ಬಳೆ ಮರದ ಗರಿಗಳನ್ನು ಕೊಯ್ಯುತ್ತಿರುವಾಗ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದ್ದು, ಮೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳು ಪವರ್ ಮ್ಯಾನ್ ದೇವರಾಜ ರವರನ್ನು ಒಬ್ಬರನೇ ಕರ್ತವ್ಯಕ್ಕೆ ನೇಮಿಸಿ ಎ.ಇ. ಮತ್ತು ಎ.ಇ.ಇ. ರವರ ನಿರ್ಲಕ್ಷತನದಿಂದ ಸಾವು ಸಂಭವಿಸಿದ್ದು, ಅರೋಫಿತರ ವಿರುದ್ದ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;03/07/2022 ರಂದು ಪಿರ್ಯಾದಿ ಕಾಂತಮ್ಮ ಕೊಂ ಶ್ರೀನಿವಾಸ ವಾಸ ಬಾಪೂಜಿ ಕಾಲೋನಿ, ತರೀಕೆರೆ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಗಂಡ ಶ್ರೀನಿವಾಸ ಇವನು ದಿನಾಂಕ;23/06/2022 ರಂದು ಮನೆಯಿಂದ ಹೋದವನು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಗಂಡ ಶ್ರೀನಿವಾಸ  48 ವರ್ಷ, 5.0. ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಬಣ್ಣ, ಕಪ್ಪು ಕೂದಲು ದೃಡಕಾಯ ಶರೀರ ಬಿಳಿ ಬಣ್ನದ ಶರಟು ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ ಮಾತಾನಾಡುತ್ತಾರೆ. ವಿದ್ಯಾಬ್ಯಾಸ ಎಸ್.ಎಸ್.ಎಲ್.ಸಿ. ಎಡಗೈಯಲ್ಲಿ ಅನಿತಾ ಎಂದು ಬಲಗೈಯಲ್ಲಿ ಅಣ್ಣಯ್ಯ ಎಂದು ಹಚ್ಚೆ ಇರುತ್ತದೆ. ಕಾಣೆಯಾಗಿರುವ ತನ್ನ ಗಂಡ ಶ್ರೀನಿವಾಸನನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬೈಕ್ ಕಳ್ಳತನ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;03/07/2022 ರಂದು ಪಿರ್ಯಾದುದಾರರಾದ ಪ್ರಶಾಂತ ಬಿನ್ ಜಯಣ್ಣ ಕೋಟೆ ಚಿಕ್ಕಮಗಳೂರು ಟೌನ್  ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯು ಬಾಬ್ತು ಕೆಎ-46-ಜೆ-2227 ರ ನಂಬರಿನ ಬೈಕ್ ಅನ್ನು ದಿನಾಂಕ;20/04/2022 ರಂದು ಕಬ್ಬಿಗರಹಳ್ಳಿ ವಾಸಿ ಬಸವರಾಜರವರ ಮನೆಗೆ ಹೊರಗೆ ನಿಲ್ಲಿಸಿದ್ದು ದಿನಾಂಕ; 21/04/2022 ರಂದು  ಬೆಳಿಗ್ಗೆ ನೋಡಲಾಗಿ ಯಾರೋ ಕಳ್ಳರು ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು  20.000/- ರೂ ಬೆಲೆಬಾಳುವ  ಬೈಕ್ ಅನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೈಕ್ ಅನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 03-07-2022 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080