ಅಭಿಪ್ರಾಯ / ಸಲಹೆಗಳು

 ಮನುಷ್ಯ ಕಾಣೆ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 03-09-2021 ರಂದು ಮಂಜುನಾಥ ಬಿನ್ ನಿಂಗಪ್ಪ, ಭದ್ರಾ ಎಸ್ಟೇಟ್ ಟ್ ವಾಸಿರವರು ನೀಡಿದ ದೂರೇನೆಂದರೆ , ಈಗ್ಗೆ 4 ವರ್ಷಗಳಿಂದ ನಾನು ನನ್ನ ಸಂಸಾರದೊಂದಿಗೆ ಭದ್ರಾ ಎಸ್ಟೇಟ್ ನಲ್ಲಿಕೂಲಿ ಕಲೆಸ ಮಾಡಿಕೊಂಡು ವಾಸವಾಗಿದ್ದು , ನನ್ನ ಅಕ್ಕನೂ ಸಹ ಇದೇ ಎಸ್ಟೇಟ್ ನಲ್ಲಿ  ಅವರ ಸಂಸಾರದೊಂದಿಗೆಕೂಲಿಕೆಲಸ ಮಾಡಿಕೊಂಡು ವಾಸವಾಗಿರುತ್ತಾಳೆ. ನನ್ನ ಅಕ್ಕನ ಮಗಳಾದ ರಾಧಿಕಾ, 20 ವರ್ಷ ಇವಳು ದಿನಾಂಕ 02-09-2021 ರಂದು ಬೆಳಿಗ್ಗೆ ಆರೋಗ್ಯ ಸರಿಯಿಲ್ಲವೆಂದು ಕೊಪ್ಪ ಆಸ್ಪತ್ರೆಗೆ ಹೋಗಿ ಬರುವುದಾಗಿ  ಹೇಳಿ ಹೋದವಳು ಮನೆಗ ವಾಪಾಸ್ ಬಂದಿರುವುದಿಲ್ಲ. ಮೊಬೈಲ್ ಪೋನ್  ಸಹ ಸ್ವಿಚ್ ಆಫ್ ಆಗಿರುತ್ತದೆ. ನನ್ನ ಅಕ್ಕನ ಮಗಳಾದ ರಾಧಿಕಾಳನ್ನು ಪತ್ತೆ ಮಾಡಿಕೊಡಬೇಕೆಂದು  ನೀಡಿದ ದೂರಿನ ಮೇರೆಗೆ ಬಾಳೊಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ಬಸವನಹಳ್ಳಿ  ಪೊಲೀಸ್ ಠಾಣೆ .

ದಿನಾಂಕ: 03/09/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ನೂರಾನಿ ಮಸೀದಿಯ ಮುಂಭಾಗದ ಖಾಲಿ ನಿವೇಶನದಲ್ಲಿ   ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು , ಆರೋಪಿಯಾದ ಮಹಮದ್ ಬಿಲಾಲ್ ಬಿನ್ ಲೇಟ್ ಅಬ್ದುಲ್ ವಹಾಬ್ , ನೂರಾನಿ ಮಸೀದಿ ಹಿಂಭಾಗ, ಚಿಕ್ಕಮಗಳೂರು ವಾಸಿ ಈತನನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಸುಮಾರು 23 ಕೆ.ಜಿ. ತೂಕದಷ್ಟು ದನದ ಮಾಂಸವಿದ್ದು, 11 ಕೆ.ಜಿ. ದನದ ಮಾಂಸದ ಮಾರಾಟದಿಂದ ಬಂದಿದ್ದ 2,200 /- ರೂಗಳನ್ನು  ವಶಕ್ಕೆ ಪಡೆದು  ಆರೋಪಿಯ ವಿರುದ್ದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಕಿರಣ್ ಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಇತ್ತೀಚಿನ ನವೀಕರಣ​ : 03-09-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080