ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಸಖರಾಯಪಟ್ಟಣ  ಪೊಲೀಸ್ ಠಾಣೆ,

ದಿನಾಂಕ 02-10-2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಹೋಚಿಹಳ್ಳಿ ಗೇಟ್ ಬಳಿ ಈಶ್ವರಪ್ಪ ಬಿನ್ ತಿಮ್ಮಶೆಟ್ಟಿ ವಾಸ ಹೋಚಿಹಳ್ಳಿ ಗೇಟ್  ವಾಸಿ ಈತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನು  ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ ರಾಜಾ ವಿಸ್ಕಿಯ 29 ಪೌಚ್ ಗಳು ಹಾಗೂ 180 ಎಂ.ಎಲ್. ನ ಬ್ಯಾಗ್ ಪೈಪರ್ ವಿಸ್ಕಿಯ 2 ಪೌಚ್ ಗಳು ಹಗೂ ಮದ್ಯ ಮಾರಾಟದಿಂದ ಗಳಿಸಿದ ಹಣ 750/- ರೂ ನಗದು ಹಣವನ್ನು  ಅಮಾನತ್ತುಪಡಿಸಿಕೊಂಡಿದ್ದು ಆರೋಪಿತರ ವಿರುದ್ದ  ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪ್ರೋಬೆಷನರಿ ಡಿವೈ.ಎಸ್.ಪಿ. ಶ್ರೀ ಗಿರಿಮಲ್ಲ ಹೆಚ್. ತಳಕಟ್ಟಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ 03/10/2021 ರಂದು ಚಿಕ್ಕಮಗಳೂರು ದಂಟರಮಕ್ಕಿ ವಾಸಿ ಕೆ.ಆರ್. ನಾಗರಾಜು ಬಿನ್ ಕೆ.ಎಸ್. ರಾಮಪ್ಪ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;25-09-2021 ರಂದು ಸಂಜೆ ಪಿರ್ಯಾದಿಯು ತನ್ನ ತಂಗಿ ಸವಿತಾ ರಮೇಶ್, ರೈಲ್ವೇ ಸ್ಟೇಷನ್ ರಸ್ತೆ ಬೀರೂರು ಇವರ ಮನೆಯ ಮುಂದೆ ನಿಲ್ಲಿಸಿದ್ದ ಕೆಎ-54-ಹೆಚ್-8743 ನಂಬರಿನ ಹೊಂಡಾ ಸಿಬಿ ಶೈನ್ 125 ಬೈಕನ್ನು  ದಿನಾಂಕ:26/09/2021 ರಂದು ನೋಡಿದಾಗ ಬೈಕ್ ನಿಲ್ಲಿಸದ ಜಾಗದಲ್ಲಿ ಇರುವುದಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಬೈಕಿನ ಮೌಲ್ಯ 25000/- ರೂ.  ಅಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ನೀಡಿದ  ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ:03/10/2021 ರಂದು ಲಕ್ಕವಳ್ಳಿ ಗ್ರಾಮ ವಾಸಿ ಚಿಕ್ಕಪ್ಪ ಬಿನ್ ಸಿದ್ದಪ್ಪ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮಗಳು ಭೂಮಿಕ, 19 ವರ್ಷ,  ಇವಳು ಬಿ.ಆರ್. ಪ್ರಾಜೆಕ್ಟ್ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ದಿನಾಂಕ: 02/10/2021 ರಂದು  ಸ್ನೇಹಿತರೊಂದಿಗೆ ಶಂಕರಘಟ್ಟದಲ್ಲಿ ಪೋಟೋ ಶೂಟ್ ತೆಗೆಸಿಕೊಳ್ಳಬೇಕು ಎಂದು ಹೇಳಿ ಹೋದವಳು ಮನೆಯಿಂದ ಕಾಣೆಯಾಗಿರುವುದಾಗಿ ಕಾಣೆಯಾಗಿರುವ ತನ್ನ ಮಗಳು ಭೂಮಿಕಾ ಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ  ದೂರಿನ ಮೇರೆಗೆ ಲಕ್ಕವಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 03-10-2021 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080