ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 03-11-2021 ರಂದು ಅಜ್ಜಂಫುರ  ಠಾಣಾ ಸರಹದ್ದಿನ ಅತ್ತಿಮೊಗ್ಗೆ ಗ್ರಾಮದ ಕ್ರಾಸ್ ಬಳಿ ಸುರೇಶ್ ನಾಯ್ಕ ಬಿನ್ ನಾಗ್ಯನಾಯ್ಕ ಈತನು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯು ದಾಳಿ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದು ಆರೋಪಿ ಬಳಿಯಿದ್ದ 90 ಎಂ.ಎಲ್. 32 ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1124/-ರೂ ಆಗಿದ್ದು, ಆರೋಪಿಯ ವಿರುದ್ದ  ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಫುರ ಪಿ.ಐ, ಶ್ರೀ ಲಿಂಗರಾಜು ಹೆಚ್.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 03-11-2021 ರಂದು ಅಜ್ಜಂಫುರ  ಠಾಣಾ ಸರಹದ್ದಿನ ಮಾಕನಹಳ್ಳಿ ಗ್ರಾಮದ ಗೇಟ್ ಬಳಿ  ಶಂಕರನಾಯ್ಕ  ಬಿನ್ ದ್ಯಾವ್ಯಾನಾಯ್ಕ  ಈತನು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯು ದಾಳಿ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದು ಆರೋಪಿ  ಬಳಿಯಿದ್ದ 90 ಎಂ.ಎಲ್. 96 ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 3373/-ರೂ  ಆಗಿದ್ದು, ಆರೋಪಿಯ ವಿರುದ್ದ  ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಫುರ ಪಿ.ಐ, ಶ್ರೀ ಲಿಂಗರಾಜು ಹೆಚ್.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 ಕೊಲೆ ಪ್ರಕರಣ

 ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 03/11/2021 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಮತ್ತಾವಾರ ಗ್ರಾಮದ ವಾಸಿ ಗುರುಮೂರ್ತಿ ಎಂ.ಎಸ್. ಬಿನ್ ಸಿದ್ದೇಗೌಡ ಇವರು ನೀಡಿದ ದೂರಿನಲ್ಲಿ ಈ ದಿನ ಬೆಳಿಗ್ಗೆ  7.30 ಗಂಟೆ ಸಮಯದಲ್ಲಿ  ಬೊಮ್ಮನಕಟ್ಟೆಯಲ್ಲಿ ಪಿರ್ಯಾದಿಯ ಅಕ್ಕನ ಮಗ ಪ್ರಕೃತ್ ಬೈಕಿನಲ್ಲಿ ಕಾಫಿ ಮೂಟೆಯನ್ನು ತೆಗೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಅಸ್ತಿ ವಿವಾದದ ಹಳೇಯ ದ್ವಷದಿಂದ ಲೇ;ಕೆಂಚೇಗೌಡ್ರು ಮಗನಾದ ಮತ್ತಾವಾರ ವಾಸಿ ನಾಗರಾಜನು ಪ್ರಕೃತ್ ಗೆ ಅಡ್ಡಲಾಗಿ ನಿಂತು ಪ್ರಕೃತ್ ನ ಕುತ್ತಿಗೆಗೆ ಮತ್ತು ತಲೆಗೆ ಕತ್ತಿಯಿಂದ ಹೊಡೆದು ಕೊಲೆ ಮಾಡಿರುವುದಾಗಿ,  ಈ ಕೊಲೆ ಮಾಡಲು ನಾಗರಾಜ್ ರವರಿಗೆ ಚಂದ್ರೇಗೌಡ ಮತ್ತು ಬೈರೆಗೌಡ ರವರು ಕುಮ್ಮಕ್ಕು ನೀಡಿರುವುದಾಗಿ ನೀಡಿದ ದೂರಿನ ಮೇರೆಗೆ ಆರೋಪಿತರ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ  ಪ್ರಕರಣ.

ಹರಿಹರಪುರ  ಪೊಲೀಸ್ ಠಾಣೆ,

ದಿನಾಂಕ 02-11-2021 ರಂದು ಹರಿಹರಪುರ ಠಾಣಾ ಸರಹದ್ದಿನ ಬೊಮ್ಲಾಪುರ ಶ್ರೀ ತ್ರಿಪುರಾಂತೀಕ ಅಮ್ಮನವರ ದೇವಸ್ಥಾನದ ಕಮಿಟಿ ಅದ್ಯಕ್ಷರಾದ ಶ್ರಿ ಎಸ್. ಎನ್. ರಾಮಸ್ವಾಮಿ ಇವರು ನೀಡಿದ ದೂರಿನಲ್ಲಿ ದಿನಾಂಕ 02/11/2021 ರ ಸಂಜೆ 5-30 ಗಂಟೆ ಸಮಯದಲ್ಲಿ ಶ್ರೀ ತ್ರಿಪುರಾಂತೀಕ ಅಮ್ಮನವರ ದೇವಸ್ಥಾನದ ಹುಂಡಿಯಲ್ಲಿದ್ದ ಸುಮಾರು 1000 ರಿಂದ 2000 ರೂ ಹಣವನ್ನು ಯಾರೋ ಮೂರು ಜನ  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಹುಂಡಿ ಹಣವನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 03-11-2021 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080