ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಮಲ್ಲಂದೂರು ಪೊಲೀಸ್ ಠಾಣೆ.

ದಿನಾಂಕ: 02-12-2021 ರಂದು  ಮಲ್ಲಂದೂರು  ಪೊಲೀಸ್ ಠಾಣಾ ಸರಹದ್ದಿನ  ಕಳವಾಸೆ ಗ್ರಾಮದ ಶಿವಣ್ಣ ಪೂಜಾರಿ ಬಿನ್ ಸುಬ್ಬಣ್ಣ ಪೂಜಾರಿ ಇವರು ತಮ್ಮ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಫಿಯನ್ನು ವಶಕ್ಕೆ ಪಡೆದು ಆರೋಪಿಯು ಅಕ್ರಮವಾಗಿ ಹೊಂದಿದ್ದ 180 ಎಂ.ಎಲ್.ನ 35 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು ಮದ್ಯ ಮಾರಾಟದಿಂದ ಅರೋಪಿ ಸಂಗ್ರಹಿಸಿದ 500/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು, ಮದ್ಯದ ಅಂದಾಜು ಬೆಲೆ 3036/- ರೂ ಅಗಿದ್ದು,  ಅರೋಫಿತನ ವಿರುದ್ದ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ನಂದಿನಿಶೆಟ್ಟಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ.

ಯಗಟಿ  ಪೊಲೀಸ್ ಠಾಣೆ.

ದಿನಾಂಕ: 03-12-2021 ರಂದು  ಯಗಟಿ  ಪೊಲೀಸ್ ಠಾಣಾ ಸರಹದ್ದಿನ ಯಗಟಿಪುರದಿಂದ ಹರಿಸಮುದ್ರಕ್ಕೆ ಹೋಗುವ ರಸ್ತೆಯಲ್ಲಿ ನಾಗಣ್ಣರ ಮೂರ್ತಪ್ಪ ರವರ ತೋಟದ ಮಾವಿನ ಮರದ ಕೆಳಗೆ ಅಕ್ರಮವಾಗಿ ಅಂದರ್ -ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1. ವಿಜಯ ಬಿನ್ ರಾಮಸ್ವಾಮಿ 2. ಮೋಹನ ಬಿನ್ ಹೆಚ್.ಎಸ್. ಗುರುಮೂರ್ತಿ  3. ತಿಪ್ಪೆಸ್ವಾಮಿ ಬಿನ್ ಮರುಳಚಾರಿ 4. ದೇವಿಕರಿಯಪ್ಪ ಬಿನ್  ರಾಮಪ್ಪ ರವರನ್ನು ವಶಕ್ಕೆ ಪಡೆದುಕೊಂಡಿದ್ದು ಕಲ್ಲೇಶ ಬಿನ್ ಯಾಟೆಮಲ್ಲಪ್ಪ ನು ತಪ್ಪಿಸಿಕೊಂಡು ಹೋಗಿದ್ದು ಆರೋಪಿತರು ಜೂಜಾಡಲು ಉಪಯೋಗಿಸಿದ 2300/- ರೂ ಗಳನ್ನು ಅಮಾನತ್ತುಪಡಿಸಿಕೊಂಡು, ಅರೋಫಿತರ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀ ಶಶಿಕುಮಾರ್ ವೈ ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 03-12-2021 ರಂದು ಚೌಳಹಿರಿಯೂರು ಹೋಬಳಿ ಕಲ್ಕೆರೆ ವಾಸಿ ಪಿರ್ಯಾದಿ ಪುಟ್ಟಸ್ವಾಮಿ ಬಿನ್ ನಾಗೇಂದ್ರಪ್ಪ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು  ಹೆಚ್.ಎಫ್. ಸಿಂದಿ ಹಸುಗಳು ಹಾಗೂ ಒಂದು ಕರುವನ್ನು ತೋಟದ ಮನೆಯಲ್ಲಿ ಸಾಕಿಕೊಂಡಿದ್ದು ದಿನಾಂಕ 18-11-2021 ರಂದು ರಾತ್ರಿ 10-00 ಗಂಟೆಗೆ ಕೊಟ್ಟಿಗೆ ಬೀಗ ಹಾಕಿಕೊಂಡು ಬಂದಿದು ದಿನಾಂಕ:19-11-2021 ರಂದು ಬೆಳಿಗ್ಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ಕೊಟ್ಟಿಗೆಯ ಬೀಗ ಹೊಡೆದು 3 ಹಸುಗಳಲ್ಲಿ  2 ಹೆಚ್.ಎಫ್. ಸಿಂದಿ ಹಸುಗಳು ಹಾಗೂ ಒಂದು  ಹೆಣ್ಣು ಕರು ಕಳ್ಳತನ ಮಾಡಿದ್ದು , ಹಸು ಮತ್ತು ಕರುವಿನ ಬೆಲೆ   1,40,000/- ರೂ ಅಗಿದ್ದು ಕಳ್ಳರು ಪತ್ತೆ ಮಾಡಿ ಕಳುವಾಗಿರುವ ಹಸುಗಳು ಮತ್ತು ಕರುವನ್ನು  ಪತ್ತೆ ಮಾಡಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಗ್ರಾಮಾಂತರ  ಠಾಣೆ.

ದಿನಾಂಕ:02-12-2021 ರಂದು ಗ್ರಾಮಾಂತರ ಠಾಣಾ  ವ್ಯಾಪ್ತಿ ಹುಲಿಯಾರು ಹಳ್ಳಿ  ವಾಸಿ  ಪಿರ್ಯಾದಿ ಲೋಕೇಶ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ:02-12-2021 ರಂದು ಪಿರ್ಯಾದಿ ಮಂಗಳೂರಿಗೆ ಹೋಗಿದ್ದು ತನ್ನ ಹೆಂಡತಿ ಹೊಲಕ್ಕೆ ಕೆಲಸಕ್ಕೆ ಹೋಗಿದ್ದಾಗ ಮಗಳು ಸೃಷ್ಠಿ ಮನೆಯಲ್ಲಿ ಇದ್ದವಳು  ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಒಂದು ಜೊತೆ ಚಿನ್ನ ಓಲೆಗಳನ್ನು ಮತ್ತು ಒಂದು ಜೊತೆ ಚಿನ್ನದ ಕೈ ಬಳೆಗಳನ್ನು ಮತ್ತು 10,000/- ರೂ ಗಳನ್ನು ತೆಗೆದುಕೊಂಡು ಮತ್ತು ಎರಡು ರೇಷ್ಮ ಸೀರೆಗಳನ್ನು  ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಎಲ್ಲಿಗೂ ಹೋಗಿರುತ್ತಾಳೆ. ಮನೆಯಿಂದ  ಹೋದವಳು ವಾಪಾಸ್ಸು ಬಾರದೇ ಇದ್ದು ಈವರೆಗೂ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ತನ್ನ ಮಗಳು ಸೃಷ್ಠಿ  ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಮಗಳು ಕೋಲುಮುಖ ಸಾದಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾಳೆ. ಗೋದಿ ಮೈಬಣ್ಣ  5 ಅಡಿ ಎತ್ತರ  ಇರುತ್ತಾಳೆ. ಕಾಣೆಯಾಗಿರುವ ಸೃಷ್ಠಿ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 03-12-2021 08:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080