ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 03/06/2021 ರಂದು ಕರಗಣೆ ಗ್ರಾಮದ ವಾಸಿಯಾದ ಗಣೇಶ ಬಿನ್ ನಾಗೇಶ ಎಂಬುವವರು ತಮ್ಮ ಮನೆಯ ಪಕ್ಕದ  ತೋಟದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು  ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನಾದ ಗಣೇಶನನ್ನು  ವಶಕ್ಕೆ ಪಡೆದು ಆತನ ಬಳಿಯಿದ್ದ  ಪ್ಲಾಸ್ಟಿಕ್ ಬಾಟಲಿ ಹಾಗೂ ಕ್ಯಾನ್ ಗಳಲ್ಲಿ ಇದ್ದ ಸುಮಾರು 6 ಲೀಟರ್ ನಷ್ಟು ಕಳ್ಳಭಟ್ಟಿ ಸಾರಾಯಿಯಿದ್ದು  ಕಳ್ಳಭಟ್ಟಿ ಸಾರಾಯಿಯ ಮದ್ಯದ ಅಂದಾಜು ಬೆಲೆ 950/- ರೂ ಅಗಿದ್ದು ಆರೋಪಿತನ ವಿರುದ್ದ  ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ. ನೀತು.ಆರ್.ಗುಡೆ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 03/06/2021 ರಂದು ಮಾಕೋನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ ನಾಗಲಾಪುರ ಗ್ರಾಮದ ವಾಸಿಯಾದ ರಮೇಶ ಬಿನ್ ಮಂಜಾಚಾರಿರವರು ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನಾದ ರಮೇಶನನ್ನು   ವಶಕ್ಕೆ ಪಡೆದು ಆತನ ಬಳಿಯಿದ್ದ  1. Amrut’s Silver-Cup Rare Indian Brandy ಯ 90 ML 34 ಟೆಟ್ರಾ ಪೌಚ್  2] Original choice deluxe whisky  ಯ 90 ML 25 ಟೆಟ್ರಾ ಪೌಚ್ ಇದ್ದ ಮದ್ಯದ ಅಂದಾಜು ಬೆಲೆ 950/- ರೂ ಅಗಿದ್ದು ಆರೋಪಿತನ ವಿರುದ್ದ  ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ. ರವಿ.ಜಿಎ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಹಾಗೂ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ಆಲ್ದೂರು   ಪೊಲೀಸ್ ಠಾಣೆ.

ದಿನಾಂಕ 03/06/2021 ರಂದು ಪಿರ್ಯಾದುದಾರರಾದ ಸಂಶುನ್ ನಹಾರ್ ನೀಡಿದ ದೂರಿನ ಸಾರಾಂಶವೆನೆಂದರೆ ಈ ದಿವಸ ದೊಡ್ಡಮಾಗರವಳ್ಳಿ ಗ್ರಾಮಪಂಚಾಯ್ತಿ  ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮೇಘನಾ ಗ್ರಾಮ ಪಂಚಾಯ್ತಿ ಸದಸ್ಯರು ಅವರ ಗಂಡ ಕೃಷ್ಣೇಗೌಡ ವಕೀಲರಾದ ಮಂಜೇಗೌಡ ,ಗೌತಮ್ , ರಾಕೇಶ್ ರವರುಗಳು ಏಕಾಏಕಿ ಬಂದು ಸರ್ಕಾರವು ಹೊರಡಿಸಿರುವ ಲಾಖ್ ಡೌನ್ ಆದೇಶವನ್ನು ಉಲ್ಲಂಘಿಸಿ ಗುಂಪುಕಟ್ಟಿಕೊಂಡು ಬಂದು  ಕ್ರಿಯಾ ಯೋಜನೆ ಹಾಗೂ ಆಗಿರುವ ಬಿಲ್ ಗಳ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ದೂರು ಇಲ್ಲದೆ ಮಾಹಿತಿ ಕೊಡು ಎಂದು ಅವಾಚ್ಯವಾಗಿ ಬೈದು ಜಾತಿ & ಧರ್ಮಕ್ಕೆ ಕೆಟ್ಟದಾಗಿ ನಿಂದಿಸಿ ಸರ್ಕಾರಿ  ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದುರನ್ನು ಸ್ವೀಕರಿಸಿಕೊಂಡು ಆರೋಪಿತರುಗಳ ವಿರುದ್ದ ಆಲ್ದೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಗೋಣಿಬೀಡು  ಪೊಲೀಸ್ ಠಾಣೆ.

ದಿನಾಂಕ 03/06/2021 ರಂದು ಗೋಣಿಬೀಡು ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ಕಲ್ಲಗುಡ್ಡ  ಗ್ರಾಮದ ಚನ್ನಕೇಶವ ಎಂಬುವವರು ತಮ್ಮ ಅಂಗಡಿಯ ಮುಂಭಾಗದ ಕಟ್ಟೆಯ ಮೇಲೆ ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡುತ್ತಿದ್ದಾರೆಂದು ಬಂದ ಮಹಿತಿ  ಮೇರೆಗೆ ದಾಳಿ ನಡೆಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆನತ ಬಳಿ ಪ್ಲಾಸ್ಟಿಕ್ ಚೀಲದಲ್ಲಿದ್ದ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 111 ಟೆಟ್ರಾ ಪೌಚ್ಗಳಿದ್ದು,ಮದ್ಯದ ಅಂದಾಜು ಬೆಲೆ 3885 ರೂ ಆಗಿರುತ್ತೆ. ಆರೋಪಿಯು  ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡುತ್ತಿದ್ದು  ಆರೋಪಿತನ ವಿರುದ್ದ ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ. ಶ್ರೀಮತಿ.ಗಾಯಿತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ 03/06/2021 ರಂದು ಮೂಡಿಗೆರೆ ಠಾಣಾ ಸರಹದ್ದಿನ ಮಾಕೋನಹಳ್ಳಿ ನಾಗಲಾಪುರದ ವಾಸಿಯಾದ ಪುಟ್ಟಸ್ವಾಮಿ ರವರು  ತಮ್ಮ ಮನೆಯ ಹಿಂಭಾಗ ಸಾರ್ವಜನಿಕರಿಗೆ  ಅಕ್ರಮವಾಗಿ  ಮದ್ಯವನ್ನು ಇಟ್ಟುಕೊಂಡು ಮಾರಾಟ  ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆತನ ಬಳಿ ಪ್ಲಾಸ್ಟಿಕ್ ಚೀಲದಲ್ಲಿದ್ದ  Amrut’s Silver-Cup Rare Indian Brandy ಯ 90 ML ನ 77  ಪೌಚ್ ಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಯು  ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡುತ್ತಿದ್ದು  ಆರೋಪಿ ಪುಟ್ಟಸ್ವಾಮಿರವರ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿಎಸ್ಐ ರವಿ.ಜಿ.ಎ.. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-06-2021 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080