ಅಭಿಪ್ರಾಯ / ಸಲಹೆಗಳು

ಹೆಂಗಸು ಕಾಣೆ ಪ್ರಕರಣ

ಕಡೂರು  ಪೊಲೀಸ್ ಠಾಣೆ .

ದಿನಾಂಕ 03.07.2021ರಂದು ವಿಜಯಕುಮಾರ ಬಿನ್ ಲೇಟ್ ವಿಶ್ವೇಶ್ವರಯ್ಯ, ಮಾಡಾಳು ಗ್ರಾಮವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ನನ್ನ ಹಿರಿಯ ಮಗಳಾದ ಸುಷ್ಮಾ , 21 ವರ್ಷ ಈಕೆಯು ಅರಸೀಕೆರೆಯ ಹೊಯ್ಸಳ ಕಾಲೇಜಿನಲ್ಲಿ ಅಂತಿಮ ಬಿ.ಎ.ವಿದ್ಯಾಭ್ಯಾಸ ಮಾಡುತ್ತಿದ್ದು ಅಲ್ಲಿಯೇ ಹಾಸ್ಟೆಲ್ ನಲ್ಲಿದ್ದಳು. ಕೊವಿಡ್ ಸಂಬಂಧ ಲಾಖ್ ಡೌನ್ ಇದ್ದುದ್ದರಿಂದ ಮನೆಗೆ ಬಂದಿದ್ದಳು. ದಿನಾಂಕ 01-07-2021 ರಂದು ರಾತ್ರಿ ಊಟ ಮುಗಿಸಿ ಎಲ್ಲರೂ ಮಲಗಿದ್ದು ನನ್ನ ಮಗಳು ಸುಷ್ಮಾ ರೂಂನಲ್ಲಿಯೇ ಮಲಗಿದ್ದಳು. ದಿನಾಂಖ 02-07-2021 ರಂದು ಬೆಳಗಿನ ಜಾವ 05-00 ಗಂಟೆಗೆ ಎದ್ದು ನೋಡಿದಾಗ ರೂಂನಲ್ಲಿ ಮಲಗಿದ್ದ ನನ್ನ ಮಗಳು ಕಾಣಲಿಲ್ಲ. ರೂಂನಲ್ಲಿ ನನ್ನ ಮಗಳು ಒಂದು ಲೆಟರ್ ಬರೆದಿಟ್ಟಿದ್ದು ಅದರಲ್ಲಿ ಅಪ್ಪ,ಅಮ್ಮ, ಕಿರಣ್ ನನ್ನನ್ನು ಕ್ಷಮಿಸಿ ಇಲ್ಲಿ ಇರಲು ನನಗೆ ಇಷ್ಟವಿಲ್ಲ. ನಾಣು ನನ್ನ ಗೆಳತಿಯೊಂದಿಗೆ ಬಂಗಳೂರಿಗೆ ಹೋಗುತ್ತಿದ್ದೇನೆ ,ನನ್ನನ್ನು ಹುಡುಕಬೇಡಿ ಎಂದು ಬರೆದಿಟ್ಟಿದ್ದು ಸಂಬಂಧಿಕರ ಮನೆಗಳಲ್ಲಿ ವಿಚಾರ ಮಾಡಲಾಗಿ ಇದುವರೆಗೂ ಪತ್ತೆಯಾಗಿರುವುದಿಲ್ಲ . ಆದ್ದರಿಂದ ಕಾಣೆಯಾಗಿರುವ  ಸುಷ್ಮಾಳನ್ನು ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಬಸವನಹಳ್ಳಿ  ಪೊಲೀಸ್ ಠಾಣೆ

ದಿನಾಂಕ 03/07/2021 ರಂದು ಚಿಕ್ಕಮಗಳೂರು ನಗರದ ಜಿಲ್ಲಾ ಕಾರಾಗೃಹದ ಬಲಭಾಗದ ಸ್ಮಶಾನದ ಖಾಲಿ ಜಾಗದಲ್ಲಿ  5 ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಕಾರಾಗೃಹದ ಬಲಭಾಗದ ಸ್ಮಶಾನದ ಖಾಲಿ ಜಾಗದಲ್ಲಿ  5 ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು  ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 1) ಸುಹೀಲ್ 2) ರಿಯಾಜ್ ಪಾಷ 3)ನಾಜೀಮ್ ಪಾಷ 4) ಸಚಿನ್ 5) ತಾಕೀರ್ ಪಾಷರವರನ್ನು ವಶಕ್ಕೆ ಪಡೆದಿದ್ದು , ಆರೋಪಿತರುಗಳ ವಶದಲ್ಲಿದ್ದ ಒಂದು ಹಳೆಯ ನ್ಯೂಸ್ ಪೇಪರ್ ,52 ಇಸ್ಪೀಟ್ ಎಲೆಗಳು, ಹಾಗೂ 3220 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಬಸವನಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಅಕ್ತರ್ಪಟೇಲ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ನಗರ  ಪೊಲೀಸ್ ಠಾಣೆ

ದಿನಾಂಕ 03/07/2021 ರಂದು ನಗರ ಠಾಣಾ ವ್ಯಾಪ್ತಿಯ ಸಂತೆ ಮಾರ್ಕೆಟ್ ಕಟ್ಟೆಯ ಮೇಲೆ ಸುಮಾರು 5-6 ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಸಂತೆ ಮಾರ್ಕೆಟ್ ಕಟ್ಟೆಯ ಮೇಲೆ ಸುಮಾರು 5-6 ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 1) ನಾಗರಾಜ 2) ವಿನಯ್ 3)ಶಾಂತಕುಮಾರ4) ಕೃಷ್ಣ 5) ಸಿದ್ದರಾಜು ರವರನ್ನು  ವಶಕ್ಕೆ ಪಡೆದಿದ್ದು , ಆರೋಪಿತರುಗಳ ವಶದಲ್ಲಿದ್ದ ಒರಿಜಿನಲ್ ಡಿಲೆಕ್ಸ್ ವಿಸ್ಕಿಯ ಬಾಕ್ಸ್ ನ ಖಾಕಿ ಬಣ್ಣದ ರಟ್ಟು ,52 ಇಸ್ಪೀಟ್ ಎಲೆಗಳು, ಹಾಗೂ 2610/-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ.ಗುರುಪ್ರಸಾದ್.ಎನ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ

ದಿನಾಂಕ 03/07/2021 ರಂದು ತರೀಕೆರೆ ನಗರ ಗಸ್ತಿನಲ್ಲಿರುವಾಗ ತರೀಕೆರೆ ಟೌನ್ ನ ಚಾಲುಕ್ಯ ಲಾಡ್ಜ್ ನಲ್ಲಿ ಹಲವಾರು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ತರೀಕೆರೆ ಟೌನ್ ನ ಚಾಲುಕ್ಯ ಲಾಡ್ಜ ನಲ್ಲಿ 7 ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದು ,  ಕನರ್ಾಟಕ ಸರ್ಕಾರವು ಕೊವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ 2 ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರದಂತೆ ಹಾಗೂ ವಿಕೇಂಡ್ ಕರ್ಫ್ಯೂ ಆದೇಶವನ್ನು ಉಲ್ಲಂಘಿಸಿ ಲಾಡ್ಜ್ ನಲ್ಲಿ ಜೂಜಾಟವಾಡುತ್ತಿದ್ದ 1)ರಘು @ ಅಂಡುರಘು 2) ರಮೇಶ 3)ವೆಂಕಟೇಶ 4)ಚಂದ್ರ 5) ಅಜಯ್ 6) ನವೀನ್ 7) ವಿಶ್ವನಾಥರವರುಗಳನ್ನು ವಶಕ್ಕೆ ಪಡೆದಿದ್ದು , ಆರೋಪಿತರುಗಳ ವಶದಲ್ಲಿದ್ದ ಒಂದು ಬಿಳಿಬಣ್ಣದ ಬಟ್ಟೆ .ವಿವೋ, ಹಾನರ್, ಓಪೋ, ಆಂಡ್ರಾಯಿಡ್ ಮೊಬೈಲ್ಗಳು,ಕೆಎ-02 ಜೆವಿ -9642 ನಂಬರಿನ ಸ್ಕೂಟಿ , 52 ಇಸ್ಪೀಟ್ ಎಲೆಗಳು ಹಾಗೂ 1960/-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿ.ಐ. ರಾಘವೇಂದ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 04-07-2021 08:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080