ಅಭಿಪ್ರಾಯ / ಸಲಹೆಗಳು

ಗಾಂಜಾ ಸೇವನೆ ಪ್ರಕರಣ.

ಬಸವನಹಳ್ಳಿ ಪೊಲೀಸ್ ಠಾಣೆ,

ದಿನಾಂಕ 01-08-2021 ರಂದು ಚಿಕ್ಕಮಗಳೂರು ನಗರದ ಉಪ್ಪಳ್ಳಿಯ ಭಾನುಪ್ರಕಾಶ್ ಶಾಲೆಯ ಹತ್ತಿರ ಪಾಳು ಬಿದ್ದ ಜಾಗದಲ್ಲಿ 1) ಪಾದಿಲ್ ಪಾಷಾ ಬಿನ್ ಇಲಿಯಾಜ್ ಪಾಷ 2) ಆದಿಲ್ ಬಿನ್ ಯೂಸಪ್ ಅಹಮದ್ 3)ಮಹಮದ್ ಪೈಜಾನ್ ಬಿನ್ ಸಲೀಮ್ ಪಾಷ ಇವರು ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದು ಸದರಿಯವರನ್ನು ವಶಕ್ಕೆ ಪಡೆದು ಸದರಿಯವರು  ಗಾಂಜಾ ಸೇವನೆ ಮಾಢಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿದ್ದರಿಂದ ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಕಿರಣ್ ಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಗ್ರಾಮಾಂತರ  ಪೊಲೀಸ್ ಠಾಣೆ

ದಿನಾಂಕ 01/08/2021 ರಂದು ಕೆ.ಆರ್.ಪೇಟೆ ಗ್ರಾಮದ ಎಂಇಎಸ್ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಜೂಜಾಡುತ್ತಿದ್ದ 6 ಜನರನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, ಒಂದು ಬೆಡ್ ಶೀಟ್ ಹಾಗೂ 11630 /- ರೂ ನಗದು ಹಣವನ್ನು  ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ   ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸ್ವರ್ಣ ಜಿ.ಎಸ್. ಪಿ.ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ.

ಕಡೂರು ಪೊಲೀಸ್ ಠಾಣೆ.

ದಿನಾಂಕ 02-08-2021 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಶೇಖ್ ಸಾಬ್ ರವರು  ಕಡೂರಿನ ಹಳೆ ಬಸ್ ನಿಲ್ದಾಣದ ರೈಲ್ವೇ ಕಾಂಪೌಂಡ್ ಪಕ್ಕದ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಕೆಎ-18 ಎಂ-7883 ಸ್ಕಾರ್ಪಿಯೋ ಕಾರನ್ನು ಅದರ ಚಾಲಕ  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶೇಖ್ ಸಾಬ್ ರವರ ಕಾಲಿಗೆ  ಪೆಟ್ಟಾಗಿದ್ದು  ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ   ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ.

ಯಗಟಿ  ಪೊಲೀಸ್ ಠಾಣೆ.

ದಿನಾಂಕ 02-08-2021 ರಂದು ಮದ್ಯಾಹ್ನ 03-30  ಗಂಟೆ ಸಮಯದಲ್ಲಿ ಅರೇಹಳ್ಳಿ ಗ್ರಾಮದಿಂದ ಪಿ. ಕೋಡಿಹಳ್ಳಿ- ಬಿಸಲರೆ ರಸ್ತೆಯಲ್ಲಿರುವ ಮನೆಯ ಮುಂದೆ ಯೋಗೀಶರವರ  3 ವರ್ಷದ ಹೀಮ ಎಂಬ ಮಗು ಆಟವಾಡುತ್ತಿರುವಾಗ ಪಿ.ಕೋಡಿಹಳ್ಳಿ ಕಡೆಯಿಂದ ಬಂದ ಕೆಎ-66 ಕೆ-0392 ಬೈಕಿನ  ಚಾಲಕ ಬೈಕನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟವಾಡುತ್ತಿದ್ದ ಹೀಮಗೆ ಡಿಕ್ಕಿ ಹೊಡೆಸಿದ ಪರಿಣಾಮ  ಬಲಗಾಲು, ಬಲಹಣೆಗೆ  ಪೆಟ್ಟಾಗಿದ್ದು  ಬೈಕಿನ ಚಾಲಕ ಮಹಾಂತೇಶ್ ರವರ  ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ  ನೀಡಿದ ದೂರಿನ ಮೇರೆಗೆ ಯಗಟಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 04-08-2021 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080