ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ: 03-01-2022 ರಂದು ತರೀಕೆರೆ ಪೊಲೀಸ್ ಠಾಣಾ ಸರಹದ್ದಿನ ಎಂ.ಸಿ. ಗ್ರಾಮದ ಗುಡ್ಡದಬೀದಿಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1] ಭರತ್ ಬಿನ್ ಮೂರ್ತಿ  2] ಪರಶುರಾಮ್ ಬಿನ್ ರಾಮ ಹನುಮಯ್ಯ 3] ಯೇಸುರಾಜ್ ಬಿನ್ ಶೇಟು 4] ಶಿವಕಂಠ ಬಿನ್ ದೇವರಾಜ್ 5] ಮಂಜುನಾಥ ಬಿನ್ ದೇವರಾಜ್ ಇವರನ್ನು ವಶಕ್ಕೆ ಪಡೆದು ಅರೋಪಿತರು ಜೂಜಾಡಲು ಬಳಸಿದ ಒಂದು ಚಾಪೆ, ಒಂದು ಹ್ಯಾಂಡ್ ಕರ್ಫಿಪು , 2300/- ರೂ ನಗದುಹಣ ಮತ್ತು 52 ಇಸ್ಪೀಟ್  ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ, ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಕೃಷ್ಣನಾಯ್ಕ, ಪ್ರೋಬೆಷನರಿ ಲೋಹಿತ್ ಮತ್ತು ಸಿಬ್ಬಂದಿಯವರಾದ ಪುನಿತ್ ರವರು ಪಾಲ್ಗೊಂಡಿರುತ್ತಾರೆ.

ವಂಚನೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ: 04-01-2022 ರಂದು ಪಿರ್ಯಾದಿ ಶ್ರೀಮತಿ ಮಂಜುಳಮ್ಮ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರಿಗೆ ಬೆಂಗಳೂರು ವಾಸಿ ಗಣೇಶ್ ಪ್ರಸಾದ್ ಶೆಟ್ಟಿ ರವರು ಕೆಲಸ ಕೊಡಿಸುವುದಗಿ ನಂಬಿಸಿ ಪಿರ್ಯಾದಿಯವರಿಂದ 5,00,000/- ರೂ ನಗದು ರೂಪದಲ್ಲಿ ಪಡೆದುಕೊಂಡು ನಗದು ಸ್ವೀಕರಿಸಿರುವುದಕ್ಕೆ  ಪ್ರತಿಯಾಗಿ ಗಣೇಶ್ ಪ್ರಸಾದ್ ಶೆಟ್ಟಿ ರವರು ಬ್ಯಾಂಕ್ ಚೆಕ್ ನೀಡಿದ್ದು ,  ಕೆಲಸವನ್ನು ಕೊಡಿಸದೇ ಇದ್ದು, ಗಣೇಶ್ ಪ್ರಸಾದ್ ಶೆಟ್ಟಿ ನೀಡಿರುವ ಚೆಕ್ ನ್ನು ಬ್ಯಾಂಕ್ ಗೆ ನೀಡಿದಾಗ ಸದರಿಯವರ ಖಾತೆಯಲ್ಲಿ ಹಣವಿಲ್ಲದೆ ಚೆಕ್ ವಾಪಸ್ ಅಗಿದ್ದು,  ಕೆಲಸ ಕೊಡಿಸುವುದಾಗಿ ನಂಬಿಸಿ ಹಣವನ್ನು ಪಡೆದುಕೊಂಡು ಮೋಸ ಮಾಡಿದ ಗಣೇಶ್ ಪ್ರಸಾದ್ ಶೆಟ್ಟಿ ರವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಮನುಷ್ಯ ಕಾಣೆ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ;04-01-2022 ರಂದು ಪಿರ್ಯಾದಿ ಸಂತೋಷ್ ಕುಮಾರ್ ಬಿನ್ ಮಂಜಾಬೋವಿ ಇವರು ನೀಡಿದ ದೂರಿನಲ್ಲಿ ದಿನಾಂಕ 30-12-2021 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಪಿರ್ಯಾದಿ ಮತ್ತು ಹೆಂಡತಿ ನಡುವೆ ಜಗಳ ಅಗಿದ್ದು ಪಿರ್ಯಾದಿ ಹೆಂಡತಿ ಸುಮಾ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದು ನನ್ನ ಹೆಂಡತಿ ಮಕ್ಕಳನ್ನು ಹುಡುಕಿದ್ದು ಎಲ್ಲಿಯೊ ಸಿಗದೆ ಇದುದ್ದರಿಂದ ಕಾಣೆಯಾಗಿರುವ ತನ್ನ ಹೆಂಡತಿ ಮತ್ತು ಮಕ್ಕಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಇತ್ತೀಚಿನ ನವೀಕರಣ​ : 04-01-2022 07:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080