ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:03-02-2022 ರಂದು ಸಂಜೆ ಪಿರ್ಯಾದಿ ಯವರ ಮಗ ಲೋಕೇಶ್ ಕೆಎ-18-ಟಿಬಿ-3070 ಟ್ರಾಕ್ಟರ್ ಇಂಜಿನ್ ಮತ್ತು ಕೆಎ-18-ಟಿಬಿ-3071 ನಂಬರಿನ ಟ್ರಾಲಿಯಲ್ಲಿ ಸಿಂದಿಗೆರೆ ಕೆರೆಯಿಂದ ಗೋಡುಮಣ್ಣನ್ನು ತಮ್ಮ ಜಮೀನಿಗೆ ಹೊಡೆಯಲೆಂದು ಹೋಗಿದ್ದು ಸಂಜೆ 4-00 ಗಂಟೆಗೆ ಗೋಡು ಮಣ್ಣನ್ನು ತಮ್ಮ ಜಮೀನಿಗೆ ತಂದು ಹಾಕಿ ವಾಪಾಸ್ ಕೆರೆ ಹತ್ತಿರ ಹೋಗುತ್ತಿದ್ದಾಗ ದೆವಗೊಂಡನಹಳ್ಳಿಯಿಂದ ಕಬ್ಬಿಗರಹಳ್ಳಿಗೆ ಹೋಗುವ ಟಾರು ರಸ್ತೆಯಲ್ಲಿರುವ ಟಿ.ಸಿ.ಪಾಯಿಂಟ್ ಹತ್ತಿರ ಲೋಕೇಶನು ಚಲಾಯಿಸಿಕೊಂಡು ಹೋಗುತ್ತಿದ್ದ  ಟ್ಯಾಕ್ಟರ್ ನಿಯಂತ್ರಣ ತಪ್ಪಿ ಬಲಭಾಗಕ್ಕೆ ಮಗುಚಿಬಿದ್ದ ಪರಿಣಾಮ ಲೋಕೇಶನು ಟ್ಯಾಕ್ಟರ್ ಇಂಜಿನ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ನಗರ ಪೊಲೀಸ್ ಠಾಣೆ.

 ದಿನಾಂಕ:03-02-2022 ರಂದು ನಗರ ಠಾಣಾ ಸರಹದ್ದಿನ ರಾಂಪುರ ವಾಸಿ ಸಂತೋಷ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ:03-02-2022 ರಂದು ರವರು ಬೆಳಿಗ್ಗೆ ಮನೆಗೆ ಚೀಲಕ ಹಾಕಿಕೊಂಡು ಹೋಗಿದ್ದು ವಾಪಾಸ್ಸು  ಬಂದು ನೋಡಲಾಗಿ ಮನೆಯ ಚೀಲಕ ತೆಗೆದಿದ್ದು ಗಾಡ್ರೇಜ್ ಬೀರುವಿಗೆ ಹಾಕಿದ್ದ ಲಾಕರ್  ಬಾಗಿಲುಗಳನ್ನು ಯಾವುದೋ ಅಯುಧದಿಂದ ಲಾಕರ್ ತೆಗೆದು ಲಾಕರ್ ನಲ್ಲಿ ಇಟ್ಟಿದ್ದ 3,75,000/- ರೂ ನಗದು ಹಣ ಹಾಗೂ ಬೆಳ್ಳಿಯ 500 ಗ್ರಾಂ ತೂಕದ 20,000/- ಬೆಲೆಯ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಸ್ವತ್ತನ್ನು ಮತ್ತು ನಗದು ಹಣವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 04-02-2022 07:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080