ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣಗಳು

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:03/06/2022 ರಂದು ತರೀಕೆರೆ ಪಟ್ಟಣದಲ್ಲಿರುವ ಎ.ಪಿ.ಎಂ.ಸಿ. ಗೇಟ್ ಬಳಿಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 1] ಶರವಣಕುಮಾರ್ ಬಿನ್ ಲೇಟ್ ಶ್ರೀನಿವಾಸ್, ವಾಸ ಮಾರುತಿ ಬಡಾವಣೆ, ತರೀಕೆರೆ 2] ಕೃಷ್ಣಮೂರ್ತಿ ಟಿ.ಹೆಚ್. ಬಿನ್ ಲೇಟ್ ಹನುಮಯ್ಯ, ಬಸವೇಶ್ವರ ಬೀದಿ, ತರೀಕೆರೆ, 3] ತಿಪ್ಪೇಶ್ ಹೆಚ್ ಬಿನ್ ಲೇಟ್ ಹನುಮಂತಪ್ಪ, ಕೆ.ಇ.ಬಿ. ಮುಂಭಾಗ, ತರೀಕೆರೆ. 4] ಶಿವಕುಮಾರ್ ಬಿನ್ ತಮ್ಮಯ್ಯ, ವಾಸ ಕಂಬದ ಬೀದಿ, ಎಂ.ಜಿ. ರಸ್ತೆ, ತರೀಕೆರೆ. 5] ವಿಜಯ್ ಕುಮಾರ್ ಬಿನ್ ಸತೀಶ್ , ವಾಸ ಅಂಬೇಡ್ಕರ್ ನಗರ, ಕೋಟೆ ಕ್ಯಾಂಪ್, ತರೀಕೆರೆ. 6] ನವೀದ್ ಬಿನ್ ಖಲೀಲ್ ಖಾನ್ ವಾಸ ಸ್ಟೇಷನ್ ದುಗ್ಲಾಪುರ ತರೀಕೆರೆ ಇವರುಗಳು ವಶಕ್ಕೆ ಪಡೆದು ಆರೋಪಿತರು ಜೂಜಾಟ ಆಡಲು ಉಪಯೋಗಿಸಿದ 16,090/- ರೂ ಗಳನ್ನು  52 ಇಸ್ಪೀಟ್ ಎಲೆಗಳು, 2 ಗೋಣಿಚೀಲಗಳನ್ನು ಅಮಾನತ್ತುಪಡಿಸಿಕೊಂಡು,  ಅರೋಫಿತರ ವಿರುದ್ದ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ತರೀಕೆರೆ ಠಾಣಾ ಪಿಎಸ್ಐ ತಿಪ್ಪೇಶ್,.ಡಿ.ವಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:04-06-2022 ರಂದು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು ದತ್ತಪೀಠಕ್ಕೆ ಹೋಗುವ ರಸ್ತೆಯ ಕವಿಕಲ್ಗಂಡಿ ಫಾರೇಸ್ಟ್ ಚೆಕ್ ಪೋಸ್ಟ್, ಬಳಿ ದೀಪು ಬಿನ್ ದೊಡ್ಡರಂಗಶೆಟ್ಟಿ,  ವಾಸ ಶನಿ ಮಹಾತ್ಮ ದೇವಸ್ಥಾನದ ಬೀದಿ, ಅಲ್ಲಂಪುರ ಗ್ರಾಮ ಈತನು ಕೆಎ-01-ಝಡ್-9933 ಮಾರುತಿ 800 ಕಾರಿನಲ್ಲಿ ಮದ್ಯ ಮಾರಾಟ ಮಾಡಲು ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆಯನ್ನು ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 19 ಲೀಟರ್ 420 ಎಂ.ಎಲ್.ನ ಮದ್ಯವನ್ನು ಅಂದಾಜು ಬೆಲೆ 8260/- ರೂ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಐ. ಸ್ವರ್ಣ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ:03-06-2022 ರಂದು ಲಕ್ಕವಳ್ಳಿ ಪೊಲೀಸ್ ಠಾಣಾ ಸರಹದ್ದಿನ ಬಾವಿಕೆರೆಕೋರೆ ಗ್ರಾಮದಲ್ಲಿ ಜಗದೀಶ ಬಿನ್ ವೆಂಕಟರಾಮು, ವಾಸ ಬಾವಿಕೆರೆ ಕೋರೆ ಗ್ರಾಮ, ಲಕ್ಕವಳ್ಳಿ ಹೋಬಳಿ ಈತನು ತನ್ನ ಮನೆಯ ಮುಂದೆ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 44 ಟೆಟ್ರಾಪ್ಯಾಕ್  ಮದ್ಯವನ್ನು ಅಂದಾಜು ಬೆಲೆ 1545/- ರೂ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ಠಾಣಾ ಪಿಎಸ್ಐ ಶಂಭುಲಿಂಗಯ್ಯ, ಎಂ.ಈ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:03-06-2022 ರಂದು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ನರಸೀಪುರ ಗ್ರಾಮದ ಹತ್ತಿರ ಮಾಚೇನಹಳ್ಳಿಗೆ ಹೋಗುವ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ, ಮಹೇಂದ್ರ, ಕೆ.ಬಿ. ಹಾಳ್ ದುರ್ಗಾಂಬ ಬಾರ್ ನಲ್ಲಿ ಕೆಲಸ, ಈತನು ತನ್ನ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್.ನ 136 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 4777/- ರೂ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿಎಸ್ಐ ಶ್ರೀಮತಿ ಗೆನೋಜಾ ಕೆ.ಟಿ., ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:03-06-2022 ರಂದು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು ಕೆ.ಆರ್.ಪೇಟೆ ಬೂದನಿಕೆ  ಗ್ರಾಮದಲ್ಲಿ ಗಿರೀಶ್ ಬಿನ್ ಸಗುನೇಗೌಡ, ಈತನು ತನ್ನ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 180 ಎಂ.ಎಲ್.ನ 20 ಟೆಟ್ರಾಪ್ಯಾಕ್, 90 ಎಂ.ಎಲ್.ನ 10 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 2014/- ರೂ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿಎಸ್ಐ ಮುದ್ದಪ್ಪ., ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗಾಂಜಾ ಸೇವನೆ ಪ್ರಕರಣಗಳು

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ:03/06/2022 ರಂದು ಕೊಪ್ಪ ಠಾಣಾ ಸರಹದ್ದಿನ ಕೊಪ್ಪ ಟೌನ್ ಜೆ.ಎಂ.ಜೆ. ಕ್ರಿಡಾಂಗಣದ ಬಳಿ ಕಿರಣ್ ಬಿನ್ ರಮೇಶ್, ವಾಸ ರಾಘವೇಂದ್ರ ನಗರ, ಕೊಪ್ಪ ವಾಸಿ ಇವನು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣಾ ಪಿಎಸ್ಐ ಕೌಶಿಕ್ ಬಿ.ಸಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ:03/06/2022 ರಂದು ಕೊಪ್ಪ ಠಾಣಾ ಸರಹದ್ದಿನ ಕೊಪ್ಪ ಟೌನ್ ಬಾಳಗಡಿಯ ಚಿಟ್ಟೆಮಕ್ಕಿ, ದೇವಸ್ಥಾನದ ಬ್ರೀಡ್ಜ್ ಸಮೀಪ ರಸ್ತೆಯಲ್ಲಿ 1] ಶಂಶುದ್ದಿನ್ ಬಿನ್ ಅಬ್ಬಾಸ್, ವಾಸ ಮಾರ್ಕೇಟ್ ರಸ್ತೆ, ಕೊಪ್ಪ, 2] ಹಂಝಾ ಬಿನ್ ಮೊಹಮ್ಮದ್, ವಾಸ ಜೋಗಿಸರ, ಬಿಂತ್ರವಳ್ಳಿ ಗ್ರಾಮ, ವಾಸಿ ಇವನು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣಾ ಪಿಎಸ್ಐ ಶ್ರೀನಾಥ ರೆಡ್ಡಿ, ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 04-06-2022 ರಂದು ಪಿರ್ಯಾದಿ ರಾಕೇಶ್ ಟಿ.ಎನ್.  ಎಸ್.ಬಿ. ಐ. ಬ್ಯಾಂಕ್ ಅಜ್ಜಂಪುರ,  ಇವರು ನೀಡಿದ ದೂರಿನಲ್ಲಿ, ಪಿರ್ಯಾದಿಯು ಬ್ಯಾಂಕ್ ನ ಬಾಬ್ತು  ಕೆಎ-18-ಡಬ್ಲ್ಯೂ-9178 ಹಿರೋ ಸ್ಲೆಂಡರ್ ಪ್ರೋ ಬೈಕ್ ಅನ್ನು ದಿನಾಂಕ 31-05-2022 ರಂದು ಬ್ಯಾಂಕಿನ ಕೆಲಸ ಮುಗಿಸಿಕೊಂಡು ಅಜ್ಜಂಫುರ ಪಟ್ಟಣದ ಬಾರ್ಗಿಶಪ್ಪ ರವರ ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ;01/06/2022 ರಂದು  ಬೆಳಿಗ್ಗೆ ನೋಡಲಾಗಿ ಬೈಕ್ ನಿಲ್ಲಿಸದ ಸ್ಥಳದಲ್ಲಿ ಇಲ್ಲದೆ ಇದ್ದು ಯಾರೋ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ಬೈಕಿನ ಬೆಲೆ ಅಂದಾಜು 25,000/- ರೂ ಗಳಾಗಿದ್ದು, ಕಳುವಾಗಿರುವ ಬೈಕ್ ಅನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೆರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 04-06-2022 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080