ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ 04-09-2021 ರಂದು ಸಂಜಯ್ ಕುಲಕರ್ನಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಈಗ್ಗೆ 4 ವರ್ಷಗಳ ಹಿಂದೆ ಅಕ್ಕಿವೃದ್ದಿ  ದೇವವೃಂದ ಗ್ರಾಮದಲ್ಲಿ 5 ಎಕರೆ ಜಮೀನಿರುತ್ತೆ. 2021 ನೇ ಸಾಲಿನ ಏಪ್ರಿಲ್ ತಿಂಗಳಿನಲ್ಲಿ ನಮ್ಮ ತೋಟದಲ್ಲಿದ್ದ ಸುಮಾರು 2 ಕ್ವಿಂಟಾಲ್ ನಷ್ಟು ಕಾಳು ಮೆಣಸನ್ನು ತೋಟದ ಮನೆಯ ಹಾಲ್ ನಲ್ಲಿ ಹರಡಿ ತುರ್ತು ಕೆಲಸವಿದ್ದುದ್ದರಿಂದ ನನ್ನ ಸಂಸಾರದೊಂದಿಗೆ ದಿನಾಂಕ 11-04-2021 ರಂದು ಮನೆಗೆ ಬೀಗ ಹಾಕಿಕೊಂಡು ಮುಂಬೈಗೆ  ಹೋಗಿದ್ದು , ದಿನಾಂಕ 02-09-2021 ರಂದು ವಾಪಾಸ್ ಅಕ್ಕಿವೃದ್ದಿ  ದೇವವೃಂದ ಗ್ರಾಮದ ನಮ್ಮ ಮನೆಗೆ ಬಂದು ನೋಡಿದಾಗ ನಮ್ಮ ಮನೆಯ ಹಿಂದಿನ ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಗ್ಯಾಲರಿಯನ್ನು ಮುರಿದು ಒಳಪ್ರವೇಶಿಸಿ ಒಣಗಲು ಹಾಕಿದ್ದ ಸುಮಾರು 2 ಕ್ವಿಂಟಾಲ್ ನಷ್ಟು ಕಾಳುಮೆಣಸನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ  ಮೇರೆಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಅಕ್ರಮ ಜೂಜಾಟ  ಪ್ರಕರಣ

ಸಖರಾಯಪಟ್ಟಣ   ಪೊಲೀಸ್ ಠಾಣೆ

ದಿನಾಂಕ 03/09/2021 ರಂದು 21-00 ಗಂಟೆ ಸಮಯದಲ್ಲಿ  ಬ್ಯಾಲದಾಳು ಗ್ರಾಮದಲ್ಲಿ  ಅಕ್ರಮವಾಗಿ ಹಣವನ್ನು ಕಟ್ಟಿ ಜೂಜಾಟವಾಡುತ್ತಿದ್ದ 18 ಜನ ಆರೋಪಿಗಳನ್ನು   ವಶಕ್ಕೆ ಪಡೆದು ಅವರುಗಳ ವಶದಲ್ಲಿದ್ದ 1) 52 ಇಸ್ಪೀಟ್ ಎಲೆಗಳು 2) ಒಂದು ಪ್ಲಾಸ್ಟಿಕ್ ಟಾರ್ಪಲ್ 3) 14 ಮೊಬೈಲ್ ಗಳು  ಹಾಗೂ 46,720/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ  ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ  ಪೊಲೀಸ್ ಠಾಣೆ

ದಿನಾಂಕ 02/09/2021 ರಂದು 22-30 ಗಂಟೆ ಸಮಯದಲ್ಲಿ   ಹಳೇಕೋಟೆ ಗ್ರಾಮದ ಸ್ಮಶಾನದ ಬಳಿ ಅಕ್ರಮವಾಗಿ ಹಣವನ್ನು ಕಟ್ಟಿ ಜೂಜಾಟವಾಡುತ್ತಿದ್ದ 1)ಪ್ರದೀಪ್ 2)ಶೇಖರ್ 3)ರವಿ 4)ಮಧು 5) ಕುಮಾರ್ 6) ಕಿರಣ್   ಇವರುಗಳನ್ನು  ವಶಕ್ಕೆ ಪಡೆದು ಇವರುಗಳ ವಶದಲ್ಲಿದ್ದ 1) 57 ಇಸ್ಪೀಟ್ ಎಲೆಗಳು 2) ಒಂದು ಮೇಣದ ಬತ್ತಿ 3) ಒಂದು ಗೋಣಿಚೀಲ ಹಾಗೂ 2,730/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ  ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರವಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಪಘಾತ ಪ್ರಕರಣ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ 03-09-2021 ರಂದು ಮಂಜಪ್ಪ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿವಸ  ಮದ್ಯಾಹ್ನ 02-30 ಗಂಟೆ ಸಮಯದಲ್ಲಿ ನನ್ನ ಅಳಿಯನಾದ ರಮೇಶರವರು ತಮ್ಮ ಬಾಬ್ತು ಕೆಎ-04 ಹೆಚ್ ಹೆಚ್- 6741 ಹಿರೋಹೊಂಡಾ ಬೈಕಿನಲ್ಲಿ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿರುವಾಗ  ಬೈಕ್ ಸ್ಕಿಡ್ ಆಗಿ ರಸ್ತೆಯ ಬದಿಯಲ್ಲಿದ್ದ ಸೇತುವೆಗೆ ಹೊಡೆದಿದ್ದರಿಂದ ತಲೆಗೆ ಹಾಗೂ ಎಡಕೈಗೆ ಪೆಟ್ಟಾಗಿರುತ್ತದೆಂದು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಇತ್ತೀಚಿನ ನವೀಕರಣ​ : 04-09-2021 07:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080