ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 04-11-2021 ರಂದು ಅಜ್ಜಂಫುರ  ಠಾಣಾ ಸರಹದ್ದಿನ ವೀರಾಪುರ ಗ್ರಾಮದ ವಾಸಿ ಗಂಗಾಧರಪ್ಪ ಬಿನ್ ನಾಗಪ್ಪ ಇವರು ನೀಡಿದ ದೂರಿನಲ್ಲಿ ದಿನಾಂಕ 03-11-2021 ರಂದು  ಪಿರ್ಯಾದಿ ಮಗ ಕುಮಾರ ಜಿ.ವಿ. ಈತನು  ಬೈಕ್  ನಂ ಕೆಎ-66-ಜೆ-0587 ಪಲ್ಸರ್ ಬೈಕಿನಲ್ಲಿ ಭಾಗ್ಯಶ್ರಿ ಮತ್ತು ಮಲ್ಲಮ್ಮನವರನ್ನು ಕೂರಿಸಿಕೊಂಡು ವೀರಾಪುರದಿಂದ ನಾಗವಂಗಲಕ್ಕೆ  ಹೋಗುತ್ತಿರುವಾಗ ರಾತ್ರಿ 9-55 ಗಂಟೆ ಸಮಯದಲ್ಲಿ  ನಾಗವಂಗಲ ಅಯ್ಯಪ್ಪನ ಕಟ್ಟೆ ಕೆರೆ ಹತ್ತಿರ ಆಪೆ ಗೂಡ್ಸ್  ವಾಹನ ಸಂಖ್ಯೆ ಕೆಎ-18-ಎ- 3902 ರ ಚಾಲಕ ವಾಹನವನ್ನು ಜೋರಾಗಿ ಓಡಿಸಿಕೊಂಡು ಬಂದು ಕುಮಾರನು ಚಾಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕಿನಲ್ಲಿದ್ದ 3 ಜನರಿಗೂ ಪೆಟ್ಟಾಗಿದ್ದು ಚಾಲಕ ಕುಮಾರಿನಿಗೆ ಹೆಚ್ಚಿನ ಪೆಟ್ಟಾಗಿದ್ದು ಮೃತಪಟ್ಟಿರುವುದಾಗಿ ಆರೋಪಿ ಆಪೆ ಗೂಡ್ಸ್  ವಾಹನ ಸಂಖ್ಯೆ ಕೆಎ-18-ಎ- 3902 ರ ಚಾಲಕನ ಮೇಲೆ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ  ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 03-11-2021 ರಂದು ಅಜ್ಜಂಫುರ  ಠಾಣಾ ಸರಹದ್ದಿನ ಅಸಂದಿ ಗ್ರಾಮದ ಮಲ್ಲಪ್ಪ ಬಿನ್ ಮಲ್ಲಯ್ಯ  ರವರು ತಮ್ಮ ಮನೆಯ ಮುಂಭಾಗದಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯು ದಾಳಿ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದು  ಆರೋಪಿ  ಬಳಿಯಿದ್ದ 90 ಎಂ.ಎಲ್. 29 ರಾಜಾ ವಿಸ್ಕಿಯ ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1018/-ರೂ ಆಗಿದ್ದು, ಆರೋಪಿಯ ವಿರುದ್ದ ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಫುರ ಪಿ.ಎಸ್.ಐ, ಶ್ರೀ ತಿಪ್ಪೇಶ್ ಡಿ.ವಿ.ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 05-11-2021 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080