ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಲಿಂಗದಹಳ್ಳಿ   ಪೊಲೀಸ್ ಠಾಣೆ.

ದಿನಾಂಕ:05/07/2021 ರಂದು ಕಲ್ಲತ್ತಿಪುರದ ವಾಸಿಯಾದ ಕಾರ್ತಿಕ್ ಎಂಬುವವರು ಬಳ್ಳಾವರ ಮಾರ್ಕೆಟ್ ಬಳಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ  ದಾಳಿ ನಡೆಸಿದ್ದು ಕಾರ್ತಿಕ್ ಎಂಬುವವನು ತನ್ನ ಹೆಗಲ ಮೇಲೆ ಪ್ಲಾಸ್ಟಿಕ್ ಚೀಲವನ್ನು ಹೊತ್ತುಕೊಂಡು ಹೋಗುತ್ತಿದ್ದು ಆರೋಪಿ ಕಾರ್ತಿಕ್ ನನ್ನು ವಶಕ್ಕೆ ಪಡೆದು ಆತನ  ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಎರಡು ರಟ್ಟಿನ ಬಾಕ್ಸ್ ಗಳಿದ್ದು ,ಎರಡು ರಟ್ಟಿನ ಬಾಕ್ಸ್ ನಲ್ಲಿ  90  ಎಂ.ಎಲ್.ನ ಒರಿಜಿನಲ್ ಚಾಯ್ಸ್ ಡಿಲೆಕ್ಸ್  ವಿಸ್ಕಿಯ 192 ಮದ್ಯದ ಟೆಟ್ರಾಪೌಚ್ಗಳಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಆರೋಪಿತನಾದ ಕಾರ್ತಿಕ್ವಿರುದ್ದ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ರವಿ.ಎನ್.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಮರಳು ಕಳ್ಳತನ ಪ್ರಕರಣ

ಲಕ್ಕವಳ್ಳಿ  ಪೊಲೀಸ್ ಠಾಣೆ

ದಿನಾಂಕ 05/07/2021 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಕರಕುಚ್ಚಿಯ ಗೊಂದಿಗಿಡದ ರಮಣರವರ ತೋಟದ ಬಳಿಯಿರುವ ಭದ್ರಾ ಹೊಳೆಯಿಂದ ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಅಲ್ಲಿದ್ದ ಆರೋಪಿಗಳಾದ  1) ಕುಮಾರ 2) ಗಗನ್ 3)ಗಿರೀಶ 4)ಸಿದ್ದೇಶ 5) ಚಂದ್ರ 6) ನಾಗರಾಜು 7) ವಿಜಯ್ ಕುಮಾರ್ ರವರುಗಳು ತಪ್ಪಿಸಿಕೊಂಡಿದ್ದು  ಅವರುಗಳು ಬಿಟ್ಟುಹೋಗಿದ್ದ ಟ್ರಾಕ್ಟರ್ ನ್ನು ಪರಿಶೀಲಿಸಿದ್ದು ಟ್ರಾಕ್ಟರ್ ಸಮೇತವಾಗಿ ಅದರಲ್ಲಿದ್ದ ಸುಮಾರು 3000 ರೂ ಬೆಲೆಯ ಮರಳನ್ನು ವಶಕ್ಕೆ  ಪಡೆದಿರುತ್ತೆ. ಸರ್ಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಕಳ್ಳತನದಿಂದ ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದವರ ವಿರುದ್ದ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈಕಾರ್ಯಾಚರಣೆಯಲ್ಲ್ಲಿಪಿಎಸ್ಐ. ಮೇಘ.ಟಿ.ಎನ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ .

ಆಲ್ದೂರು  ಪೊಲೀಸ್ ಠಾಣೆ.

ದಿನಾಂಕ:04/07/2021 ರಂದು ಆಲ್ದೂರು ಬಸ್ ನಿಲ್ದಾಣದ ಬಳಿ ಗಸ್ತಿನಲ್ಲಿರುವಾಗ ಆಲ್ದೂರು ಗ್ರಾಮದ ಮೇದಾರ ಬೀದಿ ಶೇಖರ್ ರವರ ಮನೆಯ ಮುಂದೆ ಯಾರೋ ಒಬ್ಬ ಆಸಾಮಿಯು ನಿಂತುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ   ದಾಳಿ ನಡೆಸಿದ್ದು ಶೇಖರ್ ರವರ ಮನೆಯ ಮುಂದೆ  ಯಾರೋ ಒಬ್ಬ ಆಸಾಮಿಯು ಒಂದು ಚೀಲವನ್ನು  ಹಿಡಿದುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದುಹೆಸರು ವಿಳಾಸ ಕೇಳಲಾಗಿ ಶೇಖರ್ ಬಿನ್ ಮುದಾರ, ಮೇದಾರ ಬೀದಿ, ಆಲ್ದೂರು ಟೌನ್ ವಾಸಿ ಎಂದು ತಿಳಿಸಿದ್ದು , ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ 90  ಎಂ.ಎಲ್. ನ ಒರಿಜಿನಲ್ ಚಾಯ್ಸ್ ಡಿಲೆಕ್ಸ್  ವಿಸ್ಕಿಯ 19 ಮದ್ಯದ ಟೆಟ್ರಾಪೌಚ್ಗಳು, 90 ಎಂ.ಎಲ್ ನ ವಿಂಡ್ಸರ್  ಡಿಲೆಕ್ಸ್ ವಿಸ್ಕಿಯ 20 ಟೆಟ್ರಾ ಪೌಚ್ ಗಳು  ಹಾಗೂ 90 ಎಂ.ಎಲ್ ನ ಹೈವರ್ಡಸ್ ಚೀರ್ಸ್ ವಿಸ್ಕಿಯ  07  ಮದ್ಯದ ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 1825/- ರೂ ಆಗಿದ್ದು, ಆರೋಪಿತನಾದ ಶೇಖರ್ರವರ ವಿರುದ್ದ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶ್ರೀಮತಿ.ಶಿವರುದ್ರಮ್ಮ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಜೂಜಾಟ  ಪ್ರಕರಣ

ಬೀರೂರು  ಪೊಲೀಸ್ ಠಾಣೆ

ದಿನಾಂಕ 04/07/2021 ರಂದು ತರೀಕೆರೆ ತಾಲ್ಲೂಕು ಕುಡ್ಲೂರು ಗ್ರಾಮದ ಕೆರೆಯ ಬಳಿ ಒಂದು ಮರದ ಕೆಳಗೆ  ಸುಮಾರು 9-10  ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ತರೀಕೆರೆ ತಾಲ್ಲೂಕು ಕುಡ್ಲೂರು ಗ್ರಾಮದ ಕೆರೆಯ ಬಳಿ ಒಂದು ಮರದ ಕೆಳಗೆ  9-10  ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು  ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 1) ರಂಗನಾಥ  2) ಕುಮಾರಸ್ವಾಮಿ 3)ಧನಂಜಯ 4) ಪರಮೇಶ್ವರಪ್ಪ 5) ಚಂದ್ರಶೇಖರ 6) ತೋಟಪ್ಪ 7) ಪ್ರಶಾಂತ 8) ಸಿದ್ದಪ್ಪ 9) ಲೋಕೇಶ 10) ಅಜಯ್ ರವರನ್ನು  ವಶಕ್ಕೆ ಪಡೆದಿದ್ದು , ಆರೋಪಿತರುಗಳ ವಶದಲ್ಲಿದ್ದ ಒಂದು ಮಾಸಲು ಬಿಳಿ ಬಣ್ಣದ  ಟಾರ್ಪಲ್ ,52 ಇಸ್ಪೀಟ್ ಎಲೆಗಳು,7 ಬೈಕ್ ಗಳು  ಹಾಗೂ 15700 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಬೀರೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಸಿ.ಇ.ಎನ್.   ಪೊಲೀಸ್ ಠಾಣೆ

ದಿನಾಂಕ 04/07/2021 ರಂದು ಠಾಣೆಯಲ್ಲಿರುವಾಗ  ಚಿಕ್ಕಮಗಳೂರು ತಾಲ್ಲೂಕು ಖಾಂಡ್ಯಾ ಹೋಬಳಿಯ ಸಂಗಮೇಶ್ವರ ಪೇಟೆಯ ಮೇಲ್ ಮಲ್ಮಕ್ಕಿ ವಾಶಿ ವಿನೋದ್ರವರ ಕಾಫಿ ತೋಟದ ಮನೆಯಲ್ಲಿ ಸುಮಾರು ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಖಾಂಡ್ಯಾ ಹೋಬಳಿಯ ಸಂಗಮೇಶ್ವರ ಪೇಟೆಯ ಮೇಲ್ ಮಲ್ಮಕ್ಕಿ ವಾಸಿ ವಿನೋದರವರ ಕಾಫಿ ತೋಟದ ಮನೆಯಲ್ಲಿ ಸುಮಾರು ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು  ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 1) ವಿನೋದ್   2) ಶಿವಶಂಕರ್ 3)ಮುಷರಫ್ ಆಲಿ ಖಾನ್  4) ಪೆರುಮಾಳ್  5) ಸಚಿನ್ ರವರನ್ನು  ವಶಕ್ಕೆ ಪಡೆದಿದ್ದು , ಆರೋಪಿತರುಗಳ ವಶದಲ್ಲಿದ್ದ ಒಂದು ಮಾಸಲು  ಬಣ್ಣದ  ಪಂಚೆ ,52 ಇಸ್ಪೀಟ್ ಎಲೆಗಳು, ಹಾಗೂ 11660 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಸಿ.ಇ.ಎನ್.ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ರಕ್ಷಿತ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ತರೀಕೆರೆ  ಪೊಲೀಸ್ ಠಾಣೆ

ದಿನಾಂಕ 04/07/2021 ರಂದು ಠಾಣೆಯಲ್ಲಿರುವಾಗ  ತರೀಕೆರೆ ಟೌನ್ ಗಾಳಿಹಳ್ಳಿ ಕ್ರಾಸ್ ಬಳಿ ಇರುವ ರಾಮಣ್ಣನ ಕೆರೆಯ ಪಕ್ಕದ ಸರ್ಕಾರದ ಖಾಲಿ ಜಾಗದಲ್ಲಿ ಸುಮಾರು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಳಿಹಳ್ಳಿ ಕ್ರಾಸ್ ಬಳಿ ಇರುವ ರಾಮಣ್ಣನ ಕೆರೆಯ ಪಕ್ಕದ ಸರ್ಕಾರದ ಖಾಲಿ ಜಾಗದಲ್ಲಿ ಸುಮಾರು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು  ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 1) ಮಧು   2) ಸಚಿನ್  3)ಶಿವಕುಮಾರ್  4) ಚೇತನ್ ರವರನ್ನು  ವಶಕ್ಕೆ ಪಡೆದಿದ್ದು  ಆರೋಪಿತರುಗಳ ವಶದಲ್ಲಿದ್ದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ,52 ಇಸ್ಪೀಟ್ ಎಲೆಗಳು, ಹಾಗೂ 4150 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಪಿ.ಐ.ರಾಘವೇಂದ್ ಕೆ.ಎನ್.ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕರ್ನಾಟಕ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020

ಮೂಡಿಗೆರೆ ಪೊಲೀಸ್ ಠಾಣೆ .

ದಿನಾಂಕ 03-07-2021 ರಂದು ಮೂಡಿಗೆರೆ ವೃತ್ತದ ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿರುವಾಗ ಬೈದುವಳ್ಳಿ ಕ್ರಾಸ್ ಹತ್ತಿರ ಬೆಳಗಿನ ಜಾವ 03-30 ಗಂಟೆ ಸಮಯದಲ್ಲಿ ದಾರದಹಳ್ಳಿ ಕಡೆಗೆ ಹೋಗಲು ಜೀಪನ್ನು ನಿಲ್ಲಿಸಿಕೊಂಡು ಬೀಟ್ ಸಿಬ್ಬಂದಿಗಳನ್ನು ಚೆಕ್ ಮಾಡುತ್ತಿರುವಾಗ ದಾರದಹಳ್ಳಿ ಕಡೆಯಿಂದ ಒಂದು ಗೂಡ್ಸ್ ವಾಹನ ಬಂದಿದ್ದು ಜೀಪನ್ನು ನೋಡಿ ಚಾಲಕ ಹಾಗೂ ಅದರಲ್ಲಿದ್ದ 3 ಜನರು  ಓಡಿಹೋಗಲು ಪ್ರಯತ್ನಿಸಿದವರಲ್ಲಿ 2 ಜನರನ್ನು ಸಿಬ್ಬಂದಿಗಳು ಹಿಡಿದುಕೊಂಡಿದ್ದು ಉಳಿದ ಇಬ್ಬರು ಆಸಾಮಿಗಳು ಓಡಿಹೋಗಿರುತ್ತಾರೆ. ಹಿಡಿದುಕೊಂಡ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ ಉಸ್ಮಾನ್ ಬಿನ್ ಅಹಮದ್, ವಸಂತ ಬಿನ್ ಸೋಮಯ್ಯ ಎಂದು ತಿಳಿಸಿದ್ದು ಓಡಿಹೋದವರ ಹೆಸರು ಮುನೀರ್ ಬಿನ್ ಅಬುಬಕರ್, ಮಶೀರ್ ಬಿನ್ ಗಫೂರ್, ಬಕ್ರವಳ್ಳಿ ಎಂದು ಗೊತ್ತಾಯ್ತು. ಸದರಿಯವರನ್ನು ನಮ್ಮಗಳನ್ನು ನೋಡಿ ಏಕೆ ಓಡಿಹೋಗಲು ಪ್ರಯತ್ನಪಟ್ಟಿರಿ ಎಂದು ಕೇಳಲಾಗಿ ಗೂಡ್ಸ್ ವಾಹನದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ದನಗಳನ್ನು ಕಳ್ಳತನ ಮಾಡಿಕೊಂಡು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಬೇಲೂರು ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು ಗೂಡ್ಸ್ ಆಟೋವನ್ನು ನೋಡಲಾಗಿ  ಟಾಟಾ ಯೋಡಾ ಕಂಪನಿಯದ್ದಾಗಿದ್ದು ಅದರ ನೊಂದಣಿ ನಂಬರ್ ಕೆಎ-18 ಸಿ- 5486 ಆಗಿದ್ದು ಹಿಂಬಾಗ ಹಾಗೂ ಮೇಲ್ಭಾಗದಲ್ಲಿ ಕಪ್ಪು ನೀಲಿ ಬಣ್ಣದ ಟಾರ್ಪಲ್ ಹಾಕಿದ್ದು ಹಿಂಭಾಗದಲ್ಲಿ ಮುಚ್ಚಿದ್ದ ನೀಲಿ ಬಣ್ಣದ ಟಾರ್ಪಲ್ ನ್ನು  ತೆಗೆದು ನೋಡಲಾಗಿ 6 ಜಾನುವಾರುಗಳನ್ನು ತುಂಬಿರುವುದು ಕಂಡುಬಂದಿದ್ದು ಸದರಿ ಆರೋಪಿಗಳು ದನಗಳನ್ನು ಕಳ್ಳತನ ಮಾಡಿಕೊಂಡು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದರಿಂದ ಸದರಿಯವರುಗಳ ವಿರುದ್ದ  ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020        

ನಗರ  ಪೊಲೀಸ್ ಠಾಣೆ .

ದಿನಾಂಕ 04-07-2021 ರಂದು ಚಿಕ್ಕಮಗಳೂರು ನಗರದ ಟಿಪ್ಪುನಗರದ ಬಿಲಾಲ್ ಮಸೀದಿಯ ಡೌನ್ ನಲ್ಲಿರುವ ಒಂದು ನೀಲಿ ಶೆಡ್ ನಲ್ಲಿ ಮಹಮದ್ ಫಾಜೀಲ್ ಎಂಬಾತನು ದನವನ್ನು ಕಡಿದು ಮಾರಾಟ ಮಾಡುತ್ತಿದ್ದಾನೆಂದು ಖಚಿತ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ದಾಳಿ ನಡೆಸಿದ್ದು  ಟಿಪ್ಪುನಗರದ  ಬಿಲಾಲ್ ಮಸೀದಿಯ ಡೌನ್ ನಲ್ಲಿರುವ ಒಂದು ನೀಲಿ ಶೆಡ್ ನ ಓಣಿಯ ಬಳಿ ಇಬ್ಬರು ಆಸಾಮಿಗಳು ನಿಂತುಕೊಂಡಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮನೆಯ ಮುಂದಿನ ಕಾಂಪೌಂಡ್ ಹಾರಿ ಇಬ್ಬರು ಓಡಿಹೋಗಿದ್ದು ಬಾಗಿಲ ಬಳಿ ಹೋಗಿ ನೋಡಲಾಗಿ ಮನೆಯೊಳಗೆ ಒಬ್ಬ ವ್ಯಕ್ತಿ ಒಂದು ಸಿಂದಿ ಹಸುವನ್ನು ಕಡಿದು ಅದರ ಚರ್ಮವನ್ನು ಸುಲಿಯುತ್ತಿದ್ದು ಆತನ ಹೆಸರು ಮಹಮದ್ ಫಾಜೀಲ್ ಬಿನ್ ಅಬ್ದುಲ್ ರಶೀದ್, ಟಿಪ್ಪುನಗರ ವಾಸಿಯಾಗಿದ್ದು  ಯಾವುದೇ ಪರವಾನಗಿಯನ್ನು ಪಡೆದುಕೊಳ್ಳದೆ  ಜಾನುವಾರುವನ್ನು  ಕಡಿದು ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ  213 ಕೆಜಿ ಯಷ್ಟು ದನದ ಮಾಂಸ ಅದರ ಚರ್ಮ,ಒಂದು ಕಬ್ಬಿಣದ ಚಾಕು, ಒಂದು ಕಬ್ಬಿಣದ ಕತ್ತಿ, ಒಂದು ಕಬ್ಬಿಣದ ಮುಸ್ಕುಲ್ಲಾ, ಎರಡು ಕಬ್ಬಿಣದ ಕೊಕ್ಕೆ ಇವುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ ಈ ಕಾರ್ಯಾಚರಣೆಯಲ್ಲಿ ಪಿ.ಐ.ಗುರುಪ್ರಸಾದ್.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 05-07-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080