ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ: 04-01-2022 ರಂದು ಅಜ್ಜಂಪುರ ಪೊಲೀಸ್ ಠಾಣಾ ಸರಹದ್ದಿನ ಹನುಮನಹಳ್ಳಿ ಗ್ರಾಮದಲ್ಲಿ ರೇವಣ್ಣ ಬಿನ್ ತಿಮ್ಮರಾಯಪ್ಪ ದೊಣ್ಣೆಕೊರನಹಳ್ಳಿ ವಾಸಿ ಇವರು  ಹನುಮನಹಳ್ಳಿ ಗೇಟ್ ಬಳಿ ಇರುವ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು,  ಆರೋಪಿತ ರೇವಣ್ಣ ನನ್ನು ವಶಕ್ಕೆ ಪಡೆದು, ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 11 ಟೆಟ್ರಾಪ್ಯಾಕ್ ರಾಜಾ ವಿಸ್ಕಿಯ ಅಂದಾಜು ಬೆಲೆ 385/- ರೂ ಅಗಿದ್ದು, ಅರೋಪಿತನು ಮದ್ಯಮಾರಾಟ ಮಾಡಿದ ಬಾಭ್ತು 100/- ರೂ ನಗದನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ, ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಜಿ.ಕೆ. ಬಸವರಾಜ್,  ಮತ್ತು ಸಿಬ್ಬಂದಿಯವರಾದ ಲೋಕೇಶ್, ಶ್ರೀನಿವಾಸ, ಶಂಕ್ರಪ್ಪ,  ಮತ್ತು ಮಂಜುನಾಥರವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;05-01-2022 ರಂದು ಪಿರ್ಯಾದಿ ಪ್ರವೀಣ್ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ತಂದೆ ಗಿರೀಶ್ ರವರು ಕೆಂಚಾಪುರ ಗ್ರಾಮದ ಭಗವತಿ ಕಟ್ಟೆ ಹತ್ತಿರವಿರುವ ತೋಟವನ್ನು ನೋಡಿಕೊಳ್ಳುತ್ತಾ ಇದ್ದು ದಿನಾಂಕ 26-11-2021 ರಂದು ಕೋಡಿಕ್ಯಾಂಪ್ ಸರ್ಕಲ್ ನಿಂದ ಕಾಣೆಯಾಗಿದ್ದು ಈ ವರೆಗೂ ತಮ್ಮ ತಂದೆಯನ್ನು ಹುಡುಕಾಡಿದ್ದು , ತಮ್ಮ ತಂದೆಯವರು ಪತ್ತೆ ಅಗದೆ ಇದ್ದು  ತಂದೆಯವರ ಚಹರೆ ಗಿರೀಶ್ ಬಿನ್ ಲೇಟ್ ರಾಮಸ್ವಾಮಿ, 52 ವರ್ಷ, 5.00 ಅಡಿ ಎತ್ತರ, ಬಿಳಿಮಿಶ್ರೀತ ಕೂದಲು ದುಂಡುಮುಖ, ಗೋದಿ ಮೈ ಬಣ್ಣ ದೃಡ ಶರೀರ, ಕನ್ನಡ ಬಾಷೆ ಮಾತಾನಾಡುತ್ತಾರೆ ಬಾದಾಮಿ  ಬಣ್ಣದ ಶರಟು ಮತ್ತು ಕಪ್ಪು ಬಣ್ಣದ ಪ್ಯಾಂಟು ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ತಂದೆ ಗಿರೀಶ್ ರವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;05-01-2022 ರಂದು ಪಿರ್ಯಾದಿ ಗಿರೀಶ್ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಅಕ್ಕನ ಮಗಳು ಸಿಂಧು ದ್ವಿತೀಯ ಪಿಯುಸಿ ಮಾಡಿ ಮನೆಯಲ್ಲೇ ಇದ್ದು ದಿನಾಂಕ 03-01-2022 ರಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದಾಗ ರಾತ್ರಿ 1-30 ಗಂಟೆ ಸಮಯದಲ್ಲಿ ನೋಡಿದಾಗ ಅವಳು ಮನೆಯಲ್ಲಿ ಇರಲಿಲ್ಲ, ಈ ವರೆಗೂ ಸಿಂಧುವನ್ನು ಹುಡುಕಾಡಿದ್ದು ಪತ್ತೆ ಅಗದೆ ಇದ್ದು  ಸಿಂಧು ಚಹರೆ ಸಿಂಧೂ ಬಿನ್ ಲೇಟ್ ವಿಜಯಕುಮರ್ 20 ವರ್ಷ, 5.00 ಅಡಿ ಎತ್ತರ, ದುಂಡುಮುಖ, ಗೋದಿ ಮೈ ಬಣ್ಣ ದೃಡ ಶರೀರ, ಕನ್ನಡ ಮತ್ತು ತೆಲಗು ಬಾಷೆ ಮಾತಾನಾಡುತ್ತಾಳೆ  ನೇರಳೆ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ಅಕ್ಕನ ಮಗಳು ಸಿಂಧೂ ರವರನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 05.01.2022 ರಂದು  ಪಿರ್ಯಾದಿ ಪ್ರಾಣೇಶ್ ಎ.ಯು ಬಿನ್ ಉಜ್ಜಿನಪ್ಪ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಅಣ್ಣನ ಮಗಳಾದ ಚಂದನ ಎ.ಜಿ., ಇವಳು ಈ ದಿನ ಬೆಳಿಗ್ಗೆ ಮನೆಯಲ್ಲೇ ಇದ್ದವಳು ಯಾರಿಗೂ ಹೇಳದೆ ಮನೆಯಿಂದ ಹೋಗಿದ್ದು ಈ ವರೆಗೂ ಚಂದನಳನ್ನು ಹುಡುಕಾಡಿದ್ದು ಪತ್ತೆ ಅಗದೆ ಇದ್ದು  ಚಂದನ ಎ.ಜಿ ಯವಳ ಚಹರೆ 22 ವರ್ಷ, 4,5 ಅಡಿ ಎತ್ತರ, ದುಂಡುಮುಖ, ಬಿಳಿ ಬಣ್ಣ ಸಾದಾರಣ ಮೈಕಟ್ಟು, ಪಿಂಕ್ ಕಲರ್ ಚೂಡಿದಾರ್  ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ಅಣ್ಣನ ಮಗಳು ಚಂದನ ಎ.ಜಿ ಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

 

ಇತ್ತೀಚಿನ ನವೀಕರಣ​ : 05-01-2022 08:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080