ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ:04-02-2022 ರಂದು ಪಿರ್ಯಾದಿ ಶಶಿಕಲಾ ಬಿನ್ ಉಮೇಶ ರವರು ನೀಡಿದ ದೂರಿನಲ್ಲಿ ದಿನಾಂಕ:04-02-2022 ಗುಪ್ತ ಶೆಟ್ಟಿ ಹಳ್ಳಿಯಲ್ಲಿ  ಪಿರ್ಯಾದಿ ಬಾವ ಮಂಜುನಾಥ ರವರ ಮನೆಯಲ್ಲಿ ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ಪಿರ್ಯಾದಿ ಅಕ್ಕ ಶೈಲಾ ಳನ್ನು ಮಾತನಾಡಿಸಲು ಹೋದಾಗ ಪಿರ್ಯಾದಿ ಬಾವ ಮಂಜುನಾಥ ತನ್ನ ಅಕ್ಕನಿಗೆ  ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಿಯಾ ಎಂದು ಅಕ್ಕನಿಗೆ ಕೈ ಗಳಿಂದ ಹೊಡೆದು ಕಲಿನಿಂದ ಹೊಟ್ಟೆಗೆ ಒದ್ದು ಕೆಟ್ಟದ್ದಾಗಿ ಬೈಯುತ್ತಾ ಕಬ್ಬಿಣದ ರಾಡಿನಿಂದ ಎದೆಗೆ ಹೊಡೆಯುತ್ತಿದ್ದು ತನ್ನ ಬಾವನಿಗೆ ಹೊಡೆಯಬೇಡಿ ಎಂದು ಹೇಳಿದರೂ ಸಹ ಕೇಳದೆ ಬಲವಾಗಿ ಎದೆಗೆ ಹೊಡೆದಿದ್ದು, ಸಂಜೆ 5.00 ಗಂಟೆಗೆ ನೋಡಲಾಗಿ ತನ್ನ ಅಕ್ಕ ಮೃತಪಟ್ಟಿರುತ್ತಾಳೆ. ತನ್ನ ಅಕ್ಕನ ಸಾವಿಗೆ ಕಾರಣರಾದ ತನ್ನ ಬಾವ ಮಂಜುನಾಥರವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

 ದಿನಾಂಕ:04-02-2022 ರಂದು ಬಸವನಹಳ್ಳಿ  ಠಾಣಾ ಸರಹದ್ದಿನ ಅಲ್ಲಂಪುರ ವಾಸಿ ಹರೀಶ್ ಎ.ಆರ್. ಎಂಬುವರು ನೀಡಿದ ದೂರಿನಲ್ಲಿ ದಿನಾಂಕ:03-02-2022 ರಂದು ಸಂಜೆ ಪಿರ್ಯಾದಿಯವರು ತಮ್ಮ ಬಾಭ್ತು ಕೆಎ-18- ಬಿ-5179 ಬೊಲೆರೊ ಪಿಕ್ ಅಪ್ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದ್ದು , ದಿನಾಂಕ 04-02-2022 ರಂದು ಬೆಳಿಗ್ಗೆ ನೋಡಲಾಗಿ ಪಿರ್ಯಾದಿ ಬಾಭ್ತು ಪಿಕ್ ಅಪ್ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ವರೆಗೂ ಹುಡುಕಿದರೂ ಸಹ ವಾಹನ ಪತ್ತೆಯಾಗಿಲ್ಲವೆಂದು ಕಳುವಾಗಿರುವ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಕೆಎ-18-ಬಿ-5179 ಬೊಲೆರೊ ಪಿಕ್ ವಾಹನವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:05/02/2022 ರಂದು ಬಾಳೆಹೊನ್ನೂರು ಠಾಣಾ ಸರಹದ್ದಿನ ಮೇಗರಮಕ್ಕಿ ಕಿಚ್ಚ್ಬ ವಾಸಿ ಪ್ರಿಯಾಂಕ ಬಿನ್ ನಾಗೇಶ್ ರವರು ನೀಡಿದ ದೂರಿನಲ್ಲಿ ದಿನಾಂಕ:04-02-2022 ರಂದು ಪಿರ್ಯಾದಿಯವರು ತಮ್ಮ ಬಾಭ್ತು ಬೀರವಿನಲ್ಲಿ ಬಾಗಿಲು ತೆಗೆದು ನೋಡಿದಾಗ ಮನೆಯ ಬೀರುವಿನಲ್ಲಿ ಇದ್ದ  ಒಂದು ಜೊತೆ ಬಂಗಾರದ ಓಲೆ ಮತ್ತು ಹ್ಯಾಂಗಿಂಗ್ಸ್ ನ್ನು ತಮ್ಮ ಮನೆಯ ಪಕ್ಕದಲ್ಲಿ ಜಾಗದಲ್ಲಿ ವಾಸಿ ಹರಪನಹಳ್ಳಿ ಮಂಜುನಾಥ ಬಿನ್ ನಂದೀಶ ಎಂಬುವನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ.  ಮಂಜುನಾಥ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ

ಬಣಕಲ್  ಪೊಲೀಸ್ ಠಾಣೆ.

ದಿನಾಂಕ:04-02-2022 ರಂದು ಬಣಕಲ್ ಠಾಣಾ ಸರಹದ್ದಿನ ಅತ್ತಿಗೆರೆ ಗ್ರಾಮದಲ್ಲಿರುವ ಸಮುದಾಯ ಭವನದ ಮುಂದೆ  ಶಿವಕುಮಾರ್ ಕೆ.ಎಸ್. ಬಿನ್ ಸುಬ್ಬಯ್ಯ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದು , ಆತನು ಅಕ್ರಮವಾಗಿ ಹೊಂದಿದ್ದ ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತರ ವಿರುದ್ದ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಗಾಯತ್ರಿ ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 05-02-2022 08:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080