ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ. 

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:05/03/2022 ರಂದು ಪಿರ್ಯಾದಿ ಲೋಕೇಶ್ ಬಿನ್ ಪುಟ್ಟೇಗೌಡ ಕಟ್ಟೆತಿಮ್ಮನಹಳ್ಳಿ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು 40 ಮೇಕೆಗಳನ್ನು ಸಾಕಿಕೊಂಡಿದ್ದು, ದಿನಾಂಕ:03.03.2022 ರಂದು ಮೇಕೆಗಳನ್ನು ರಾತ್ರಿ ಶೇಡ್ ನಲ್ಲಿ ಕೂಡಿಹಾಕಿದ್ದು ದಿನಾಂಕ:04.03.2022ರಂದು ಬೆಳಿಗ್ಗೆ ನೊಡಲಾಗಿ 40 ಮೇಕೆಗಳಲ್ಲಿ 4 ಮೇಕೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಮೇಕೆಗಳ ಅಂದಾಜು ಬೆಲೆ ಸುಮಾರು 40000/- ರೂ ಗಳಾಗಿರುತ್ತೆ. ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಳುವಾಗಿರುವ ಮೇಕೆಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:04/03/2022 ರಂದು ಪಿರ್ಯಾದಿ ಸುದೀನ್ ಕುಮಾರ್ ಹೆಚ್.ಸಿ. ಬಿನ್ ಚಂದ್ರೇಗೌಡ  ಹಂತೂರು ಗ್ರಾಮ  ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಬಾಬ್ತು  ಕೆಎ-18-ಇಇ-0380 ಮೋಟಾರ್ ಸೈಕಲ್ ನ್ನು  ದಿನಾಂಕ:25.02.2022 ರಂದು ಮಂಗಳೂರು ರಸ್ತೆಯಲ್ಲಿರುವ ನ್ಯಾಯಾಲಯದ ಮುಂಭಾಗ ನಿಲ್ಲಿಸಿ ಹಾಸನಕ್ಕೆ ಹೋಗಿದ್ದು ದಿನಾಂಕ 27.02.2022 ರಂದು  ದಿನಾಂಕ:04.03.2022 ವಾಪಾಸ್ಸು ಬಂದು ನೋಡಲಾಗಿ ನಿಲ್ಲಿಸಿದ್ದ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಬೈಕಿನ ಅಂದಾಜು ಬೆಲೆ ಸುಮಾರು 30000/- ರೂ ಗಳಾಗಿರುತ್ತೆ. ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಳುವಾಗಿರುವ ಬೈಕ್ ಅನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:04.03.2022 ರಂದು ಪಿರ್ಯಾದಿ ರಾಜೇಶ್ ಬಿನ್ ಮಲ್ಲೇಶ್ . ಕಲ್ಯಾಣ ನಗರ ವಾಸಿ ಇವರು ನೀಡಿದ ದೂರಿನಲ್ಲಿ ತನ್ನ ಮಗ ಅಜಯ್  ಆರ್.  1 ವರ್ಷದ ಐ.ಟಿ.ಐ. ಎಲೆಕ್ಟ್ರಿಕಲ್ ವಿದ್ಯಾಬ್ಯಾಸ ಮಾಡುತ್ತಿದ್ದು, ದಿನಾಂಕ:28.02.2022 ರಂದು ಅಜಯ್  ಆರ್ ತನ್ನ ಸ್ನೇಹಿತ ಹುಟ್ಟುಹಬ್ಬಕ್ಕೆ ದುಡ್ಡು ಕೇಳಿದಕ್ಕೆ ಈ  ವಿಚಾರವಾಗಿ ಬೇಜಾರುನಿಂದ ಮನೆಯನ್ನು ಬಿಟ್ಟು ಹೋಗಿದ್ದು, ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಅಜಯ್ ಆರ್. ಎತ್ತರ 5.5. ಅಡಿ ಗೋದಿ ಬಣ್ಣ ಧರಿಸಿದ್ದ ಉಡುಪುಗಳು ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಮತ್ತು ನೀಲಿ ಬಣ್ಣದ ಟೀ ಶರಟು. ಎಡದೇ ಹುಬ್ಬಿನ ಮೇಲೆ ಹಳೆ ಗಾಯದ ಗುರುತು ಇರುತ್ತೆ. ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 05-03-2022 07:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080