ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:05/04/2022 ರಂದು ಪಿರ್ಯಾದಿ ಶ್ರೀ ಲೋಕನಾಥ ಬಿನ್ ಚಂದ್ರಪ್ಪ, ವಾಸ ಬಿಳುವಾಳ ಗ್ರಾಮ  ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:04/04/2022 ರಂದು ರಾತ್ರಿ ಪಿರ್ಯಾದಿಯ ಅಣ್ಣನಾದ ಬಿ.ಸಿ. ಮಲ್ಲಿಕಾರ್ಜುನ ಇವರು ಚಿಕ್ಕಮಗಳೂರು ನ್ಯಾಯಾಲಯದ ಕೆಲಸ ಮುಗಿಸಿಕೊಂಡು ಕೆಎ-18-ಆರ್-3092 ರ ಮೋಟಾರು ಸೈಕಲ್ ನ್ನು ಚಾಲನೆ ಮಾಡಿಕೊಂಡು ಸಖರಾಯಪಟ್ಟಣದಿಂದ ಮುಂದೆ ಐ.ಟಿ.ಐ. ಕಾಲೇಜ್ ನ ಮುಂದಿನ ರಸ್ತೆಯಲ್ಲಿ ಹೋಗುತ್ತಿರುವಾಗ  ಯಾವುದೋ ಅಪರಿಚಿತ ವಾಹನ ಚಾಲಕನು ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ರಸ್ತೆಯ ಮೇಲೆ ಬಿದ್ದು ತೀವ್ರ ಪೆಟ್ಟಾಗಿ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಅಪರಿಚಿತ ವಾಹನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ದನದ ಮಾಂಸ ಸಾಗಾಣಿಕೆ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ; 05/04/2022 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ  ರಂಗೇನಹಳ್ಳಿ ಯಿಂದ ಬರ್ಗೆನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಕೆಎ-14-ಸಿ-2674ರ  ಕಪ್ಪು ಬಣ್ಣದ ಪ್ಯಾಸೆಂಜರ್ ಆಟೋದಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಾಣಿಕೆ ಮಾಡುತ್ತಿದ್ದ ಆಟೋವನ್ನು ವಶಕ್ಕೆ ಪಡೆದು ನೋಡಲಾಗಿ ಅದರಲ್ಲಿ 2 ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ 16 ಕೆ.ಜಿ. ದನದ ಮಾಂಸ ಅಂದಾಜು ರೂ 3200/- ರೂ ಅಗಿದ್ದು, ಅಟೋ ಚಾಲಕ ಅಜ್ಗರ್ ಬಾಷಾ ಬಿನ್ ಅಬ್ದುಲ್ ಜಲೀಲ್ ವಾಸ ಅನ್ವರ್ ಕಾಲೋನಿ ಭದ್ರಾವತಿ ಈತನನ್ನು ವಶಕ್ಕೆ ಪಡೆದು ಅಟೋರೀಕ್ಷಾ ಮತ್ತು ದನದ ಮಾಂಸವನ್ನು ಆಮಾನತ್ತುಪಡಿಸಿಕೊಂಡು ಬಂದು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ. ಎಂ.ಈ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕೊಲೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:04/04/2022 ರಂದು ಪಿರ್ಯಾದಿ ಶ್ರೀ ರಾಕೇಶ್ ಜಿ.ಯು. ಬಿನ್ ಉಮೇಶ್ ಜಿ.ಟಿ, ವಾಸ ಗವನಹಳ್ಳಿ ಗ್ರಾಮ  ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ 04-04-2022 ರಂದು ಪಿರ್ಯಾದಿ ಮತ್ತು ಸ್ನೇಹಿತರು ಮಾರಮ್ಮನ ದೇವಸ್ಥಾನದ ಬಳಿ ಮಾತಾನಾಡುತ್ತಿದ್ದಾಗ ಧೃವರಾಜ್ ಅರಸ್  ಕೊಟೆಗೆ ಹೋಗೋಣವೆಂದು ಕರೆದುಕೊಂಡು ಬಂದಿದ್ದು ಬೈಕ್ ನಲ್ಲಿ ನಾವು ಕೋಟೆ ವಾಟರ್ ಟ್ಯಾಂಕ್ ಕಡೆ ಹೋಗಿದ್ದು  ಅಲ್ಲಿ ಪ್ರಮೋದ್ ಇದ್ದು ಪ್ರಮೋದ್ ದೃವರಾಜ್ ಅರಸ್ ಗೆ ಬೇರೆಯವರ ಹತ್ತಿರ ಕೊಡಿಸಿದ್ದ 20,000/- ಹಣ ಕೊಡು ಎಂದು ಕೇಳುತ್ತಿದ್ದು ಅದಕ್ಕೆ ದೃವರಾಜ್ 2 ದಿನ ಟೈಂ ಕೇಳಿದ್ದು  ಒಬ್ಬ ಹುಡುಗ ಸ್ಕೂಟಿಯಲ್ಲಿ ಬಂದು ಅವನ ಹತ್ತಿರ ಇದ್ದ ಡ್ರ್ಯಾಗನ್ ತರಹದ್ದನ್ನು ಕೊಟ್ಟು ಸ್ಕೂಟಿಯನ್ನು ಸ್ಟಾಟ್ ಮಾಡಿಕೊಂಡೆ ನಿಲ್ಲಿಸಿಕೊಂಡಿದ್ದು ಪ್ರಮೋದನು ಅವನ ಕೈಯಿಂದ ಡ್ರ್ಯಾಗನ್ ಅನ್ನು ತೆಗೆದುಕೊಂಡು ಕೂಡಲೇ ಏಕಾಏಕಿ ದೃವರಾಜ್ ನಿಗೆ ಎಡಪಕ್ಕೆಗೆ ಎರಡು ಬಾರಿ ಜೋರಾಗಿ ಚುಚ್ಚಿ  ಸ್ಕೂಟಿಯಲ್ಲಿ ಹೋಗಿದ್ದು  ನಂತರ ದೃವರಾಜ್ ನನ್ನು ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿದ್ದು ದೃವರಾಜ್ ಅರಸ್ ಸಾವಿಗೆ ಕಾರಣರಾದವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ; 04/04/2022 ರಂದು ಪಿರ್ಯಾದಿ ಪಿ.ವಿ. ಮರುಳಸಿದ್ದಸ್ವಾಮಿ ಬಿನ್ ವೀರತ್ತಯ್ಯ ಶ್ರೀ ಶಾರದಮಠದ ರಸ್ತೆ ಕೋಟೆ ಕಡೂರು ರವರು ನೀಡಿದ ದೂರಿನಲ್ಲಿ ದಿನಾಂಕ;28/03/2022 ರಂದು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು ದಿನಾಂಕ;03/04/2022 ರಂದು ಸಂಜೆ 4.00 ಗಂಟೆಗೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಒಡೆದು ಮನೆಯಲ್ಲಿದ್ದ ವಾಪಲ್ ರೂಫ್  ನಲ್ಲಿ  ಇರಿಸಿದ್ದ ಸುಮಾರು 32 ಗ್ರಾಂ ತೂಕದ ಚಿನ್ನದ ಚೈನ್ ಅಂದಾಜು ಬೆಲೆ 1,30,000/- ರೂ, ಮತ್ತು 60,000/- ರೂ ನಗದು ಹಣವನ್ನು ಒಟ್ಟು 1,90,000/- ರೂ ಗಳ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದ್ದರಿಂದ ಕಳ್ಳರನ್ನು ಪತ್ತೆ ಹಚ್ಚಿ ಕಳುವಾಗಿರುವ ಸ್ವತ್ತುಗಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 05-04-2022 08:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080