ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ.

ಮಹಿಳಾ  ಪೊಲೀಸ್ ಠಾಣೆ.

ದಿನಾಂಕ 05-05-2022 ರಂದು ಸಾದಿಕ್ , ಶಹರಾಶಾದಿ ಮಹಲ್, ಚಿಕ್ಕಮಗಳೂರು ವಾಸಿರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳಾದ ಮುಸ್ಕಾನ್ 19 ವರ್ಷ ಇವಳು ಒಂದು ವಾರದ ಹಿಂದೆ ರಂಜಾನ್ ಹಬ್ಬದ ಪ್ರಯುಕ್ತ ಗೌರಿಕಾಲುವೆ ಬಳಿ ಇರುವ ಮಾವನ ಮನೆಗೆ ಹೋಗಿದ್ದು , ದಿನಾಂಕ 04-05-2022 ರಂದು ನಮ್ಮ ಸಂಬಂಧಿಕರೆಲ್ಲಾ ಮೆಹಂದಿ ಹಾಕಿಕೊಂಡು ರಾತ್ರಿ 01-00 ಗಂಟೆಗೆ ಕುಳಿತಿದ್ದು ಎಲ್ಲರೂ ಮಲಗಿರುತ್ತಾರೆ. ಬೆಳಗಿನ ಜಾವ ಎದ್ದು ನೋಡಿದರೆ ನನ್ನ ಮಗಳಾದ ಮುಸ್ಕಾನ್ ರವರು  ಮನೆಯಲ್ಲಿ ಯಾರಿಗೂ ಹೇಳದೆ ಎಲ್ಲಿಗೋ ಹೋಗಿದ್ದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಮುಸ್ಕಾನ್ , 19 ವರ್ಷ,  ದುಂಡು ಮುಖ, ಬಿಳಿ ಬಣ್ಣ ,ಸಾಧಾರಣ ಮೈಕಟ್ಟು,  ಕನ್ನಡ , ಉರ್ದು ಬಾಷೆ ಮಾತಾನಾಡುತ್ತಾಳೆ.  ಕೆಂಪು ಬಣ್ಣದ ಚೂಡಿದಾರದ  ಧರಿಸುತ್ತಾಳೆ ಎಂದು ಕಾಣೆಯಾಗಿರುವ ನನ್ನ ಮಗಳಾದ ಮುಸ್ಕಾನ್ ಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಶೃಂಗೇರಿ ಪೊಲೀಸ್ ಠಾಣೆ.

ದಿನಾಂಕ 05-05-2022 ರಂದು  ರತ್ನಾಕರ, ನೆಮ್ಮಾರು ಗ್ರಾಮವಾಸಿರವರು ನೀಡಿದ ದೂರೇನೆಂದರೆ ದಿನಾಂಕ 04-05-2022 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಪಿರ್ಯಾದುದಾರರು ಸಂಬಂಧಿಕರ ಮದುವೆಗೆಂದು ಕೆರೆಕಟ್ಟೆ ಗ್ರಾಮದ ಮೆಣಸುಕೊಡಿಗೆಗೆ ಕುಟುಂಬ ಸಮೇತ  ಹೋಗಿ ಮದುವೆ ಮುಗಿಸಿ ಸಂಜೆ 05-30 ಗಂಟೆಗೆ ಮನೆಗೆ ವಾಪಾಸ್ ಬಂದಾಗ ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಹೊಡೆದು ಮನೆಯ ಒಳಗೆ ಪ್ರವೇಶಿಸಿ ಮದ್ಯ ಭಾಗದ ಕೊಠಡಿಯಲ್ಲಿರುವ ಗಾಡ್ರೇಜ್ ಬೀರುವಿನಲ್ಲಿದ್ದ 5 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿಯ ಓಲೆ ಹಾಗೂ 60,000/- ನಗದು ಹಣವನ್ನು ಕಳ್ಳನತ ಮಾಡಿಕೊಂಡು ಹೋಗಿದ್ದು ಕಳ್ಳತನವಾಗಿರುವ ಓಲೆ ಹಾಗೂ ಹಣವನ್ನು ಪತ್ತೆ ಮಾಡಿಕೊಡುವಂತೆನೀಡಿದ ದೂರಿನ ಮೇರೆಗೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ .

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 05-05-2022 ರಂದು ಪಿರ್ಯಾದುದಾರರಾದ ಶಿವರಾಮರವರು  ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಅಣ್ಣನಾದ ಉಮೇಶನು ತನ್ನ ಸ್ವಗ್ರಾಮದಿಂದ ಭದ್ರಾವತಿಯ ಉಜ್ಜನಿಪುರಕ್ಕೆ  ಹೋಗಲು ಸಂಬಂಧಿಕರಾದ ಅನಿಲ್ ರವರ ಬಾಬ್ತು ನಕೆಎ-14 ಇಆರ್-5194 ಟಿವಿಎಸ್ ನಲ್ಲಿ ತರೀಕೆರೆ ಪಟ್ಟಣದಲ್ಲಿರುವ ಮಾನಸ ಕಾಲೇಜಿನ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಮದೀನ ಉದಾ ಮಸೀದಿಯ ಮುಂದೆ ಎನ್ ಹೆಚ್ 206 ರಸ್ತೆಯಲಿ ್ಲಹೋಗುತ್ತಿರುವಾಗ  ಯಾವುದೋ ವಾಹನದ ಚಾಲಕ ಟಿವಿಎಸ್ ಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿಕೊಂಡು ವಾಹನವನ್ನು ನಿಲ್ಲಿಸದೆ ಹೋಗಿದ್ದು ಉಮೇಶರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾಗಿರುತ್ತೆ. ಅಪಘಾತಗೊಳಿಸಿದ ಯಾವುದೋ ವಾಹನದ ಚಾಲಕನ  ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಮನುಷ್ಯ ಕಾಣೆ  ಪ್ರಕರಣ.

ಬೀರೂರು  ಪೊಲೀಸ್ ಠಾಣೆ.

ದಿನಾಂಕ 04-05-2022 ರಂದು ನಾಗಭೂಷಣ, ಕೊರಟೀಗೆರೆ ವಾಸಿರವರು ನೀಡಿದ ದೂರೇನೆಂದರೆ, ಪಿರ್ಯಾದುದರರಿಗೆ 2 ಜನ ಮಕ್ಕಳಿದ್ದು ಮೊದಲನೇ ಮಗಳಾದ ಹೊನ್ನುಶ್ರೀ ಕಡೂರು ತರಳಬಾಳು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು , ದಿನಾಂಕ 02-05-2022 ರಂದು ನನ್ನ ಮಗಳಾದ ಹೊನ್ನುಶ್ರಿಯು ರಾತ್ರಿ 01-00 ಗಂಟೆಯಿಂದ 02-00 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಎಲ್ಲಿಗೋ ಹೋಗಿದ್ದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಹೊನ್ನುಶ್ರೀ, 18 ವರ್ಷ,  ಸಾಧಾರಣ ಮೈಕಟ್ಟು,  ಗೋದಿ ಮೈಬಣ್ಣ ಕನ್ನಡ ಬಾಷೆ ಮಾತಾನಾಡುತ್ತಾಳೆ. ಬಿಳಿ ಬಣ್ಣದ ಲೆಗ್ಗಿನ್ಸ್, ಸಿಮೆಂಟ್ ಬಣ್ಣದ ಚೂಡಿದಾರದ ಟಾಪ್  ಧರಿಸುತ್ತಾಳೆ ಎಂದು ಕಾಣೆಯಾಗಿರುವ ನನ್ನ ಮಗಳಾದ ಹೊನ್ನುಶ್ರಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ .

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ:04/05/2022 ರಂದು ಮದ್ಯಾಹ್ನ 04-00 ಗಂಟೆ ಸಮಯದಲ್ಲಿ ತರೀಕೆರೆ ನಗರದ ಆರ್ಟಿಓ ಕಛೇರಿಯ ಬಳಿ ಸ್ವಲ್ಪ ಮುಂದೆ ಕಾರ್ ಶೋ ರೂಂ ಮತ್ತು ಸರ್ವೀಸ್ ಸ್ಟೇಷನ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ ಮಟ್ಕಾ ಜೂಜಾಟವಾಡಿಸುತ್ತಿದ್ದ ಮುಸ್ತಾಫ ಬಿನ್ ಅಹಮದ್ ಜಾನ್ , ಕೋಡಿಕ್ಯಾಂಪ್ ,ತರೀಕೆರೆ ಟೌನ್ ಈತನನ್ನು ವಶಕ್ಕೆ ಪಡೆದು  ಾತನ ಬಳಿಯಿದ್ದ ಒಂದು ಬಾಳ್ ಪೆನ್, ಎರಡು ಮಟ್ಕಾ ಚೀಟಿ , 3,720 /-ರೂ ನಗದು ಹಣವನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಕೃಷ್ಣಾನಾಯ್ಕ. ಪಿಎಸ್ಐ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಇತ್ತೀಚಿನ ನವೀಕರಣ​ : 05-05-2022 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080