ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ;04-06-2022 ರಂದು ರಾತ್ರಿ 8.15 ಗಂಟೆ ಸಮಯದಲ್ಲಿ ಸಿ.ಇ. ರವೀಶ್ ಕುಮಾರ್,  ಗಾಂಧಿನಗರ, ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ, ದಿನಾಂಕ;25/05/2022 ರಂದು  ತಮ್ಮ ಬಾಬ್ತು ಕೆಎ-18-ಈಡಿ-9555 ಹಿರೋಹೊಂಡಾ ಕಂಪನಿಯ ಬೈಕ್ ಅನ್ನು ಪಿರ್ಯಾದಿಯು ಅಜಾದ್ ಪಾರ್ಕ್  ವೃತ್ತದ ಹತ್ತಿರ ಇರುವ ಸಿದ್ದಿ ಮೆಡಿಕಲ್ಸ್ ಮುಂದೆ ನಿಲ್ಲಿಸಿ, ಹೋಗಿದ್ದು, ದಿನಾಂಕ:26/05/2022 ರಂದು ಮದ್ಯಾಹ್ನ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇರುವುದಿಲ್ಲ, ಯಾರೋ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಬೈಕಿನ ಬೆಲೆ ಅಂದಾಜು 21,500/- ರೂ ಗಳಾಗಿದ್ದು, ಕಳುವಾಗಿರುವ ಬೈಕ್ ಅನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೆರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣಗಳು

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:04/06/2022 ರಂದು ತರೀಕೆರೆ ಠಾಣಾ ಸರಹದ್ದಿನ ಅತ್ತಿಗನಾಳು ಗ್ರಾಮದ ಕೆರೆಯ ಪಕ್ಕದ ಮಾವಿನ ತೋಪಿನಲ್ಲಿರುವ ಸರ್ಕಾರಿ ಜಾಗದಲ್ಲಿ  ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 1] ಮಧು ಬಿನ್ ನಾಗರಾಜಪ್ಪ, ವಾಸ ನಾಗಪ್ಪ ಕಾಲೋನಿ, ತರೀಕೆರೆ 2] ಮಧು ಬಿನ್ ಬಸವರಾಜಪ್ಪ, ವಾಸ ನಾಗಪ್ಪ ಕಾಲೋನಿ, ತರೀಕೆರೆ, 3] ರಮೇಶ ಬಿನ್ ರಂಗಪ್ಪ, ಕೋಡಿ ಕ್ಯಾಂಪ್, ತರೀಕೆರೆ. 4] ಚೇತನ ಬಿನ್ ಎಂ ತಿಮ್ಮಯ್ಯ, ವಾಸ. ತಿಮ್ಮಯ್ಯನ ಬೀದಿ, ತರೀಕೆರೆ. ಇವರುಗಳು ವಶಕ್ಕೆ ಪಡೆದು ಆರೋಫಿ ಮನು @ ಡಾಲಿ ಮನು ವಾಸ ಕೋಡಿ ಕ್ಯಾಂಪ್ ತರೀಕೆರೆ, ಯಶವಂತ,  ಮೂರ್ತಿ, ನಾಗಪ್ಪ ಕಾಲೋನಿ, ತರೀಕೆರೆ ವಾಸಿಗಳು, ಶರತ್ ವಾಸ ರೇವಣ್ಣ ಸಿದ್ದೇಶ್ವರ ದೇವಲಾಯದ ಹತ್ತಿರ ಇವರುಗಳು ತಪ್ಪಿಸಿಕೊಂಡು ಹೋಗಿದ್ದು, ಆರೋಪಿತರು ಜೂಜಾಟ ಆಡಲು ಉಪಯೋಗಿಸಿದ 8300/- ರೂ ನಗದು ಹಣ,   52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡು,  ಅರೋಫಿತರ ವಿರುದ್ದ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ತರೀಕೆರೆ ಠಾಣಾ ಪಿಎಸ್ಐ ಅನಿಲ್ ಕುಮಾರ್ ನಾಯಕ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:04-06-2022 ರಂದು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು ಅತ್ತಿಗುಂಡಿ ಗ್ರಾಮದಲ್ಲಿ ಕಲ್ಲೇಶ್ ಶೆಟ್ಟಿ ಬಿನ್ ಸಗನಶೆಟ್ಟಿ ಈತನು ತಮ್ಮ ಮನೆಯ ಮುಂಬಾಗದ ಅವರಣದಲ್ಲಿರುವ ಗೋಡೋನ್ ಮುಂಭಾದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 30 ಟೆಟ್ರಾಪ್ಯಾಕ್ ಹಾಗು 180 ಎಂ.ಎಲ್. ನ 2 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1180/- ರೂ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಎಸ್.ಐ. ಚಿಂತನ್ ಕೆ.ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

 

 

 

 

 

ಇತ್ತೀಚಿನ ನವೀಕರಣ​ : 05-06-2022 07:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080