ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ.

ಸಿಂಗಟಗೆರೆ ಪೊಲೀಸ್ ಠಾಣೆ.

ದಿನಾಂಕ 05-09-2021 ರಂದು ಸಿಂಗಟಗೆರೆ ವಾಸಿ ಪಿರ್ಯಾದಿ ಪುಟ್ಟಸ್ವಾಮಿ ಬಿನ್ ನಿಂಗಪ್ಪ  ನೀಡಿದ ದೂರಿನಲ್ಲಿ ದಿನಾಂಕ 30/08/2021 ರಂದು ಪಿರ್ಯಾದಿ ತಮ್ಮ ಬಾಬ್ತು ಕುರಿಗಳನ್ನು ತಮ್ಮ  ಕಲ್ಲುಮನೆಯಲ್ಲಿ ಕೂಡಿ ಹಾಕಿದ್ದು ದಿನಾಂಕ 31/08/2021 ಬೆಳಿಗ್ಗೆ ಎದ್ದು ನೋಡಲಾಗಿ ಕೂಡಿ ಹಾಕಿದ ಕುರಿಗಳಲ್ಲಿ 4 ಟಗರು ಮತ್ತು ಒಂದು ಹೆಣ್ಣು ಕುರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು , ಕಳುವಾಗಿರುವ ಕುರಿಗಳನ್ನು ಹುಡುಕಿದರೂ ಪತ್ತೆಯಾಗಿಲ್ಲವೆಂದು, ಕಳ್ಳರನ್ನು ಪತ್ತೆ ಮಾಡಿ ಮತ್ತು ಕಳವು ಆಗಿರುವ ಕುರಿಗಳನ್ನು ಪತ್ತೆ ಮಾಡಿಕೊಂಡುವಂತೆ ನೀಡಿದ ದೂರಿನ  ಮೇರೆಗೆ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

 ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ 04-09-2021 ರಂದು ಚಿಕ್ಕಮಗಳೂರು ನಗರ ವಾಸಿ ಪಿರ್ಯಾದಿ ಪೈರೋಜ್ ಎಸ್. ನೀಡಿದ ದೂರಿನಲ್ಲಿ ದಿನಾಂಕ 11/08/2021 ರಂದು ಪಿರ್ಯಾದಿ ತಮ್ಮ ಬಾಬ್ತು ಕೆಎ-18-ಬಿ-0766 ಅಟೋರಿಕ್ಷಾವನ್ನು ತಮ್ಮ ಮನೆಗೆ ಮುಂದೆ ನಿಲ್ಲಿಸಿದ್ದು  ದಿನಾಂಕ 12/08/2021 ಬೆಳಿಗ್ಗೆ ಎದ್ದು ನೋಡಲಾಗಿ ಮನೆ ಮುಂದೆ ನಿಲ್ಲಿಸಿದ್ದ ಸುಮಾರು 1,20,000 ರೂ ಬೆಲೆಬಾಳುವ ಅಟೋರೀಕ್ಷಾವನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾಗಿರುವ ಅಟೋರೀಕ್ಷಾವನ್ನು ಹುಡುಕಿದರೂ ಪತ್ತೆಯಾಗಿಲ್ಲವೆಂದು ಪತ್ತೆ ಮಾಡಿಕೊಂಡುವಂತೆ ನೀಡಿದ ದೂರಿನ  ಮೇರೆಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ವಂಚನೆ  ಪ್ರಕರಣ

ಕಡೂರು   ಪೊಲೀಸ್ ಠಾಣೆ

ದಿನಾಂಕ 05/09/2021 ಪಿರ್ಯಾದಿ ನಂದೀಶ ಎಂ.ಎಸ್. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೆಸ್ಕಾಂ ಕಡೂರು ರವರು ನೀಡಿದ ದೂರಿನಲ್ಲಿ ಚಿಕ್ಕಿಂಗಳ ಗ್ರಾಮದ ಮತ್ತು ಶಿವಪುರ ಗ್ರಾಮದ ಮೂವರು ರೈತರಿಂದ ಜಿಲ್ಲಾ ಪಂಚಾಯ್ತಿ ವತಿಯಿಂದ ರೈತಮಿತ್ರ ಯೋಜನೆಯಡಿಯಲ್ಲಿ ರೈತರ ಪಂಪ್ಸೆಟ್ ಗಳಿಗೆ ವಿದ್ಯುತ್ ಪರಿವರ್ತಕ (ಟಿ.ಸಿ.) ಅಳವಡಿಸಿ ಕೊಡುವುದಾಗಿ ರಾಜೇಶ್ ಮತ್ತು ವಿದ್ಯಾಧರ ಎಂಬುವರು  ಕರ್ನಾಟಕ ಸರ್ಕಾರ ಹಾಗೂ ಮೆಸ್ಕಾಂ ಲೋಗೋ ಬಳಸಿ ನಕಲಿ ಚಲನೆ ಹಾಗೂ ದಾಖಲಾತಿಗಳನ್ನು  ಸೃಷ್ಠಿಸಿ ರೈತರಿಂದ 10,797/- ರೂ ಹಣ ವಸೂಲಿ ಮಾಡಿರುವುದಾಗಿ, ರೈತರಿಗೆ ಪಂಪ್ಸೆಟ್ ಗಳಿಗೆ ವಿದ್ಯುತ್ ಪರಿವರ್ತಕ (ಟಿ.ಸಿ.) ಅಳವಡಿಸಿ ಕೊಡುವುದಾಗಿ ನಂಬಿಸಿ ಮೋಸ ಮಾಡಿರುತ್ತಾರೆ. ಅದುದರಿಂದ  ರಾಜೇಶ್ ಮತ್ತು ವಿದ್ಯಾಧರ ರವರ ವಿರುದ್ದ ಕಾನೂನು ಕ್ರಮ ಜರೂಗಿಸುವಂತೆ ನೀಡಿದ ದೂರಿನ ಮೇರೆಗೆ  ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಕೊಪ್ಪ  ಪೊಲೀಸ್ ಠಾಣೆ.

ದಿನಾಂಕ 04-09-2021 ರಂದು ಕೊಪ್ಪ ಎಸ್.ಬಿ.ಐ.ಬ್ಯಾಂಕ್ ಮ್ಯಾನೇಜರ್ ಆದ ಸೋನಿಕುಮಾರಿ ರವರು ನೀಡಿದ ದೂರಿನ ಎಸ್.ಬಿ.ಐ. ಬ್ಯಾಂಕ್ ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸೋಮಯ್ಯ ಎ.ಪಿ.ಬಿನ್ ಪೂರ್ಣಚ್ಚ 35 ವರ್ಷ ಇವರು ದಿನಾಂಕ;03/09/2021 ರಂದು ರಾತ್ರ್ರಿ 9-00 ಗಂಟೆಯ ಸಮಯದವರೆಗೆ ಬ್ಯಾಂಕ್ ನಲ್ಲಿ ಕೆಲಸ ಮಾಡಿ ಹೋದವರು,  ದಿನಾಂಕ 04/09/2021 ರಂದು ಬೆಳಿಗ್ಗೆ 9-15  ಗಂಟೆಗೆ  ಬ್ಯಾಂಕಿಗೆ  ಕೆಲಸಕ್ಕೆ ಬರಬೇಕಾದವರು ಬಾರದೇ ಇದ್ದು ಇವರನ್ನು ಈ ವರೆಗೂ ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು  ಕಾಣೆಯಾಗಿರುವ ಸೋಮಯ್ಯ ಎ.ಪಿ. ಇವರನ್ನು ಪತ್ತೆ ಮಾಡಿಕೊಡುವಂತೆ  ನೀಡಿದ ದೂರಿನ ಮೇರೆಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 05-09-2021 07:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080