ಅಭಿಪ್ರಾಯ / ಸಲಹೆಗಳು

 ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 05-11-2021 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಅಜ್ಜಂಫುರ  ಠಾಣಾ ಸರಹದ್ದಿನ ಚಿಕ್ಕನಲ್ಲೂರು ಗ್ರಾಮದ ನಾಗರಾಜ ಸಿ.ಆರ್. ಬಿನ್ ಬಿ.ಕೆ. ರಾಜಪ್ಪ ರವರು ತಮ್ಮ ದಿನಸಿ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯು ದಾಳಿ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದು  ಆರೋಪಿ  ಬಳಿಯಿದ್ದ 90 ಎಂ.ಎಲ್. 10 ರಾಜಾ ವಿಸ್ಕಿಯ ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 50 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 355/-ರೂ ಆಗಿದ್ದು, ಆರೋಪಿಯ ವಿರುದ್ದ  ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಪಿ.ಎಸ್.ಐ, ಶ್ರೀ ತಿಪ್ಪೇಶ್ ಡಿ.ವಿ.ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಶ್ರೀಗಂಧ ಕಳ್ಳತನ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 04-11-2021 ರಂದು ಮೂಡಿಗೆರೆ  ಠಾಣಾ ಸರಹದ್ದಿನ ಗುಣಿಬೈಲು ಹಳೆಕೆರೆ  ಗ್ರಾಮದ ವಾಸಿ ಸಂತೋಷ ಬಿನ್ ಲೇಟ್ ಚಂದಯ್ಯ ಈತನು ಶ್ರೀಗಂಧದ ತುಂಡನ್ನು ಕಳ್ಳತನ ಮಾಡಿಕೊಂಡು ಬಂದು ಮನೆಯಲ್ಲಿ ಇಟ್ಟಿದ್ದು, ದಾಳಿ ವೇಳೆಯಲ್ಲಿ ಆರೋಫಿ ಸಂತೋಷ ಮನೆಯಿಂದ ಓಡಿ ಹೋಗಿದ್ದು ಆತನು ಮನೆಯಲ್ಲಿ ಅಕ್ರಮವಾಗಿ ಹೊಂದಿದ್ದ 29 1/2  ಕೆ.ಜಿ. ತೂಕದ  7 ಶ್ರೀಗಂಧದ ತುಂಡುಗಳನ್ನು ಅಮಾನತ್ತುಡಿಸಿಕೊಂಡು ಬಂದು ಆರೋಫಿತನ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಮೂಡಿಗೆರೆ ಸಿ.ಪಿ.ಐ. ಸೋಮಶೇಖರ್ ಜೆ.ಸಿ. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 04-11-2021 ರಂದು ಲಿಂಗದಹಳ್ಳಿ  ಠಾಣಾ ಸರಹದ್ದಿನ ನಂದಿಬಟ್ಟಲು  ಗ್ರಾಮದ  ರವಿರವರ ಅಂಗಡಿ ಮುಂದೆ ಸರ್ಕಲ್ ನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1. ತಂಗಮಣಿ ಬಿನ್ ಕುಪ್ಪುಸ್ವಾಮಿ 2. ರವಿ @ ಹುಚ್ಚಾ ರವಿ ಬಿನ್ ಸಿದ್ದನಾಯ್ಕ, 3. ಅವಿನಾಶ ಬಿನ್ ಕೃಷ್ಣನಾಯ್ಕ 4. ಜೋಗಿ @ ಮಹಂತೇಶ್ ನಾಯ್ಕ ಬಿನ್ ಶಂಕರ ನಾಯ್ಕ  ರವರು ದಾಳಿ ಸಮಯದಲ್ಲಿ ಓಡಿ ಹೋಗಿದ್ದು ಅವರು ಇಸ್ಪೀಟ್ ಜೂಜಾಟ ಆಡಲು ಬಳಿಸಿದ 52 ಇಸ್ಪೀಟ್ ಎಲೆಗಳು ಹಾಗೂ 1760/- ರೂ  ನಗದು ಹಣ ವನ್ನು ಅಮಾನತ್ತುಡಿಸಿಕೊಂಡು ಬಂದು ಆರೋಪಿತರ ವಿರುದ್ದ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಲಿಂಗದಹಳ್ಳಿ ಪಿಎಸ್.ಐ ರವಿ ಎನ್.ಎನ್. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

 ನಗರ ಪೊಲೀಸ್ ಠಾಣೆ

ದಿನಾಂಕ;05-11-2021 ರಂದು ನಗರ ಠಾಣಾ ಸರಹದ್ದಿನ ದಂಟರಮಕ್ಕಿ ವಾಸಿ ವಿನ್ಸೆಂಟ್ ಎಫ್. ಜಿ. ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ 03-11-2021 ರಂದು ಮೂಡಿಗೆರೆ ಗೆ ಹೋಗಿದ್ದು  ದಿನಾಂಕ;05-11-2021 ರಂದು ವಾಪಸ್ಸು ಬಂದು ಮನೆಯನ್ನು ನೋಡಿದಾಗ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಬಾಗಿಲು ಮೀಟಿ ತೆಗೆದು ಮನೆಯ ಕಪಾಟಿನಲ್ಲಿ  ಇಟಿದ್ದ ಮತ್ತು ಗಾಡ್ರೆಜ್ ಬೀರುವಿನಲ್ಲಿ ಚಿನ್ನ ಮತ್ತು ಬೆಳ್ಳಿಯ ವಡವೆಗಳು ಹಾಗೂ ನಗದು ಹಣವನ್ನು ಸುಮಾರು 80,000/- ಮೌಲ್ಯ ದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಭರಣಗಳು ಹಾಗೂ ನಗದು ಕೊಡಿಸಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 05-11-2021 06:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080