ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಎನ್. ಆರ್. ಪುರ  ಪೊಲೀಸ್ ಠಾಣೆ.

ದಿನಾಂಕ 06/06/2021 ರಂದು  ಎನ್. ಆರ್. ಪುರ ಠಾಣಾ ವ್ಯಾಪ್ತಿಯ ಗಡಿಗೇಶ್ವರ ಆಡುವಳ್ಳಿ ಗ್ರಾಮದಲ್ಲಿ ಪ್ರಕಾಶ್ ಬಿನ್ ಶ್ರೀನಿವಾಸಗೌಡ ಎಂಬುವವರು ಅಕ್ರಮವಾಗಿ ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿ ಸಾರ್ವಜನಿಕರಿಗೆ ಮದ್ಯವನ್ನು  ಮಾರಾಟ  ಮಾಡುತ್ತಿರುವ ಬಗ್ಗೆ  ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ  ಆರೋಪಿತನನ್ನು ವಶಕ್ಕೆ ಪಡೆದು 90 ಎಂ.ಎಲ್ ನ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 43 ಮದ್ಯದ ಪೌಚ್ ಗಳನ್ನು ಮದ್ಯದ ಅಂದಾಜು ಬೆಲೆ 1545/-ರೂ ಆಗಿರುತೆ. ಮತ್ತು ಆರೋಪಿತು ಮದ್ಯ ಮಾರಿದ ಬಾಬ್ತು 400/- ರೂ  ವನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ  ಎನ್. ಆರ್. ಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ವಿ, ಟಿ, ದಿಲೀಪ್ ಕುಮಾರ್  ಹಾಗೂ ಸಿಬ್ಬಂದಿಗಳಾದ ಹೆಚ್.ಸಿ.232 ಎಲ್ದೋ, ಪಿಸಿ 412 ಗಿರೀಶ್, ರವರು ಪಾಲ್ಗೊಂಡಿರುತ್ತಾರೆ.

ಬೀರೂರು  ಪೊಲೀಸ್ ಠಾಣೆ.

ದಿನಾಂಕ 05/06/2021 ರಂದು ಬೀರೂರು  ಠಾಣಾ ವ್ಯಾಪ್ತಿ ಯ ಬೀರೂರಿನಿಂದ ಹುಲ್ಲೇಹಳ್ಳಿ ಕಡೆಗೆ ಹುಲ್ಲೆಹಳ್ಳಿ ವಾಸಿ  ಕೃಷಮೂರ್ತಿ  @ ಕೃಷ್ಣ  ಎಂಬುವವರು ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವ ಬಗ್ಗೆ  ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದಾಗ  ಆರೋಪಿತನು ಬೈಕಿನಲ್ಲಿ ಬರುತ್ತಿದ್ದವನು ಪೊಲೀಸರನ್ನು ನೋಡಿ ಬೈಕನ್ನು ಬಿಟ್ಟು ಓಡಿ ಹೋಗಿದ್ದು  ಆರೋಪಿತನು ಬಿಟ್ಟು ಹೋದ ಬೈಕನ್ನು ಪರಿಶೀಲಿಸಿ ನೋಡಲಾಗಿ ಬೈಕಿನಲ್ಲಿ ಇದ್ದ ಪ್ಲಾಸ್ಟಿಕ್ ಚೀಲದಲ್ಲಿ  90 ಎಂ.ಎಲ್ ನ ರಾಜಾ ವಿಸ್ಕಿಯ 76 ಮದ್ಯದ ಪೌಚ್ ಗಳನ್ನು ಮದ್ಯದ ಅಂದಾಜು ಬೆಲೆ 2660/-ರೂ ಆಗಿರುತೆ.ಮತ್ತು ಆರೋಪಿತನು ಮದ್ಯ ಸಾಗಿಸಲು ಬಳಸಿದ ಕೆಎ-18-ಇಬಿ-0654 ನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ  ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ವಿಶ್ವನಾಥ ಎನ್.ಸಿ. ಹಾಗೂ ಸಿಬ್ಬಂದಿಗಳಾದ ಹೆಚ್.ಸಿ.151 ರವಿ, ಪಿಸಿ 70 ಹೇಮಂತಕುಮಾರ್, ಪಿಸಿ 290 ಮಧು, ಪಿಸಿ 179 ಮಧುನಾಯ್ಕ, ಪಿಸಿ 54 ಚಂದ್ರಶೇಖರ ರವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-06-2021 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080