ಅಭಿಪ್ರಾಯ / ಸಲಹೆಗಳು

ಕರ್ನಾಟಕ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020

ಮೂಡಿಗೆರೆ ಪೊಲೀಸ್ ಠಾಣೆ .

ದಿನಾಂಕ 06-07-2021 ರಂದು ಮೂಡಿಗೆರೆ ವೃತ್ತದ ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿರುವಾಗ ಬೆಳಗಿನ ಜಾವ 03-00 ಗಂಟೆ ಸಮಯದಲ್ಲಿ ಹ್ಯಾಂಡ್ ಪೋಸ್ಟ್ ನಿಂದ ಗೋಣಿಬೀಡು ಕಡೆಗೆ ಹೋಗುತ್ತಿರುವಾಗ ಕೃಷ್ಣಾಪುರ ಗ್ರಾಮದಿಂದ ಹಂಡುಗುಳಿ ಗ್ರಾಮಕ್ಕೆ ಹೋಗುವ ರಸ್ತೆಯ ಕ್ರಾಸ್ ಬಳಿ ಒಂದು ಗೂಡ್ಸ್ ವಾಹನ ನಿಂತಿದ್ದು ಅದನ್ನು ಪರಿಶೀಲಿಸಲು ಜೀಪ್ ನಿಲ್ಲಿಸಿದಾಗ ಅದರಲ್ಲಿದ್ದ ಇಬ್ಬರು ಆಸಾಮಿಗಳು ಪರಾರಿಯಾಗಿದ್ದು ಸದರಿ ವಾಹನವು ಕೆಎ-46 6024 ನೊಂದಣಿ ಸಂಖ್ಯೆಯ ಅಶೋಕ ಲೈಲ್ಯಾಂಡ್ ವಾಹನವಾಗಿದ್ದು ವಾಹನದ ಮೇಲೆ ಹಾಗೂ ಬಾಡಿಯ ಸುತ್ತಲೂ ಹಳದಿ ಬನ್ಣದ ಟಾರ್ಪಲ್ ಹಾಕಿದ್ದು ಅದರೊಳಗೆ ಹಿಂಸಾತ್ಮಕವಾಗಿ 4 ದನಗಳನ್ನು ತುಂಬಿದ್ದು ,ಸದರಿ ಆಸಾಮಿಗಳು ಎಲ್ಲಿಂದಲೋ ದನಗಳನ್ನು ಕಳ್ಳತನ ಮಾಡಿಕೊಂಡು ಕಡಿದು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ ಓಡಿ ಹೋದ ಇಬ್ಬರು ಆಸಾಮಿಗಳ ವಿರುದ್ದ  ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ .

ಆಲ್ದೂರು  ಪೊಲೀಸ್ ಠಾಣೆ.

ದಿನಾಂಕ:04/07/2021 ರಂದು ಆಲ್ದೂರು ಠಾಣಾ ಸರಹದ್ದಿನ ಭೂತನಕಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಇರುವ  ಗೋಪಾಲಕೃಷ್ಣ ಬಿನ್ ಅಣ್ಣುಪೂಜಾರಿರವರ ಮನೆಯ ಮುಂದಿನ ಓಣಿಯಲ್ಲಿ ಯಾರೋ ಒಬ್ಬಳು ಹೆಂಗಸು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಳೆಂದು  ಮಾಹಿತಿ ಬಂದ ಮೇರೆಗೆ  ದಾಳಿ ನಡೆಸಿದ್ದು ಯಾರೋ ಒಬ್ಬಳು  ಒಂದುಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆಕೆಯನ್ನು  ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಸುಮಿತ್ರ ಕೋಂ ಲೇಟ್ ಸತೀಶ್,  ಭೂತನಕಾಡು  ವಾಸಿ ಎಂದು ತಿಳಿಸಿದ್ದು , ಆಕೆಯ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್. ನ ಕ್ಯಾಪ್ಟನ್ ಮಾರ್ಟಿನ್ ಸ್ಪೆಷಲ್ ವಿಸ್ಕಿಯ 100 ಮದ್ಯದ ಟೆಟ್ರಾಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 3550/- ರೂ ಆಗಿದ್ದು, ಆರೋಪಿತಳಾದ ಸುಮಿತ್ರರವರ  ವಿರುದ್ದ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶ್ರೀಮತಿ.ಶಿವರುದ್ರಮ್ಮ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಗೋಣಿಬೀಡು   ಪೊಲೀಸ್ ಠಾಣೆ.

ದಿನಾಂಕ:05/07/2021 ರಂದು ಗೋಣಿಬೀಡು  ಠಾಣಾ ಸರಹದ್ದಿನ ಜಿ.ಹೊಸಳ್ಳಿ ಗ್ರಾಮದ ಗಣೇಶ ಎಂಬುವವರು ಅವರ ಅಂಗಡಿಯ ಮುಂದಿನ ಕಟ್ಟೆಯ ಮೇಲೆ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು  ಮಾಹಿತಿ ಬಂದ ಮೇರೆಗೆ  ದಾಳಿ ನಡೆಸಿದ್ದು ಯಾರೋ ಒಬ್ಬಳು  ಒಂದುಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆರೋಪಿ ಗಣೇಶನನ್ನು ವಶಕ್ಕೆ ಪಡೆದಿದ್ದು, ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ 90 ಎಂ.ಎಲ್.ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 45  ಮದ್ಯದ ಟೆಟ್ರಾಪೌಚ್ ಹಾಗೂ 90 ಎಂ.ಎಲ್ ನ ಸಿಲ್ವರ್ ಕಪ್ ಬ್ರಾಂಡಿ ಯ 56 ಟೆಟ್ರಾಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 3146/- ರೂ ಆಗಿದ್ದು, ಆರೋಪಿತನಾದ ಗಣೇಶರವರ  ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶ್ರೀಮತಿ.ಗಾಯತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಜೂಜಾಟ  ಪ್ರಕರಣ

ಸಿ.ಇ.ಎನ್.   ಪೊಲೀಸ್ ಠಾಣೆ

ದಿನಾಂಕ 05/07/2021 ರಂದು ಠಾಣೆಯಲ್ಲಿರುವಾಗ  ಚಿಕ್ಕಮಗಳೂರು ತಾಲ್ಲೂಕು  ಹಿರೇಗೌಜ ಗ್ರಾಮದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಹಿರೇಗೌಜ ಗೇಟ್ ಬಸ್ ಸ್ಟಾಪ್ ನಿಂದ ಸ್ವಲ್ಪ ಹಿಂದೆ ಸುಮಾರು 8 ಜನರನ್ನು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು  ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು  ವಶಕ್ಕೆ ಪಡೆದಿದ್ದು , ಆರೋಪಿತರುಗಳ ವಶದಲ್ಲಿದ್ದ ಒಂದು ಗುಲಾಬಿ  ಬಣ್ಣದ  ಪ್ಲಾಸ್ಟಿಕ್ ಟಾರ್ಪಲ್  ,52 ಇಸ್ಪೀಟ್ ಎಲೆಗಳು, ವಿವಿಧ ಕಂಪೆನಿಯ 8 ಮೊಬೈಲ್ ಗಳು  ಹಾಗೂ 22410 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಸಿ.ಇ.ಎನ್.ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ರಕ್ಷಿತ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಹೆಂಗಸು ಕಾಣೆ ಪ್ರಕರಣ

ಬಾಳೆಹೊನ್ನೂರು   ಪೊಲೀಸ್ ಠಾಣೆ .

ದಿನಾಂಕ 05.07.2021 ರಂದು ನಾಗೇಶ ಬಿನ್ ಬದಿಯಯ್ಯ, ಹ್ಯಾರಂಬಿಪುರ ಗ್ರಾಮ ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ,ನನ್ನ ತಾಯಿ ಶ್ರೀಮತಿ ಬಿಳುಗಮ್ಮ, 55 ವರ್ಷ ಇವರು ಹ್ಯಾರಂಬಿ ಗ್ರಾಮದಲ್ಲಿ ವಾಸವಾಗಿದ್ದು , ದಿನಾಂಕ 04-07-2021 ರಂದು ರಂಭಾಪುರಿ ಮಠ ಕಾಲೋನಿಯಲ್ಲಿರುವ ನನ್ನ ಮನೆಗೆ ಹೋಗಿ ಬರುತ್ತೇನೆಂದು ಬೆಳಿಗ್ಗೆ ಹೇಳಿ ಬಂದವರು ಇದುವರೆಗೂ ನನ್ನ ಮನೆಗೆ ಬಂದಿರುವುದಿಲ್ಲ ಹಾಗೂ ಹ್ಯಾರಂಬಿ ಗ್ರಾಮದ ಮನೆಗೂ ಸಹ ರಾತ್ರಿಯಾದರೂ ಸಹ ಹೋಗಿರುವುದಿಲ್ಲ. ಸಂಬಂಧಿಕರ ಹಾಗೂ ಪರಿಚಯಸ್ಥರ ನೆಂಟರಿಷ್ಟರ ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ .ಆದ್ದರಿಂದ ಕಾಣೆಯಾಗಿರುವ ನನ್ನ ತಾಯಿಯನ್ನು ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 06-07-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080